ಪಿಎಂಎವೈ ಯೋಜನೆ ಸ್ಥೂಲನೋಟ

2015ರಲ್ಲಿ, ಭಾರತ ಸರ್ಕಾರ ಪ್ರಧಾನ ಮಂತ್ರಿ ಆವಾಸ್ (PMAY).ಹೆಸರಿನ ಯೋಜನೆಯನ್ನು ಆರಂಭಿಸಿತು.

ಪಿಎಂಎವೈ ಯೋಜನೆ 2022ರ ವೇಳೆಗೆ ಎಲ್ಲರಿಗೂ ಕೈಗೆಟಕುವ ದರದಲ್ಲಿ ವಸತಿ ಒದಗಿಸುವ ಗುರಿ ಹೊಂದಿದೆ. ನಾವು ICICI ಹೋಂ ಫೈನಾನ್ಸ್‌ನಲ್ಲಿ, ಕೇಂದ್ರ ಸರ್ಕಾರದ “ಎಲ್ಲರಿಗೂ ವಸತಿ” ಯೋಜನೆಯೊಂದಿಗೆ ಕೈಜೋಡಿಸಿದ್ದೇವೆ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆ(PMAY)ಯ ರೂಪುರೇಷೆಯಡಿ ಲಾಭಗಳನ್ನು ಒದಗಿಸುತ್ತಿದ್ದೇವೆ

ವಸತಿ ಮತ್ತು ನಗರ ಬಡತನ ನಿರ್ಮೂಲನಾ ಸಚಿವಾಲಯ (MoHUPA)2015ರ ಜೂನ್‌ನಲ್ಲಿ, ಭಾರತದ ವಸತಿ ಬೇಡಿಕೆಗಳನ್ನು ಪೂರೈಸಲು EWS/ LIG/MIG ವಲಯಗಳಿಗೆ ತಲುಪುವ ಸಲುವಾಗಿ ಮನೆಯ ಖರೀದಿ/ನಿರ್ಮಾಣ/ವಿಸ್ತರಣೆ/ಸುಧಾರಣೆಗಾಗಿ ಪ್ರಧಾನ ಮಂತ್ರಿ ಆವಾಸ್‌ ಯೋಜನೆ (ನಗರ)-ಎಲ್ಲರಿಗೂ ಸೂರು, ಅಡಿಯಲ್ಲಿ ಕ್ರೆಡಿಟ್‌ ಲಿಂಕ್ಡ್‌ ಸಬ್ಸಿಡಿ ಸ್ಕೀಮ್ (CLSS) ಎಂಬ ಬಡ್ಡಿ ಸಬ್ಸಿಡಿ ಯೋಜನೆಯನ್ನು ಪರಿಚಯಿಸಿತು

ನಮ್ಮ ಗೃಹ ಸಾಲ ಯೋಜನೆ,  ಅಪ್ನಾ ಘರ್‌ ಅನ್ನು ಪ್ರದಾನ ಮಂತ್ರಿ ಆವಾಸ್‌‌ ಯೋಜನೆಯ ವಿಸ್ತೃತ ಯೋಜನೆಯಾಗಿ ನಿರ್ಮಿಸಲಾಗಿದ್ದು,ಇದರಲ್ಲಿ 2.67 ಲಕ್ಷ ರೂ.ಗಳವರೆಗೆ ಸಬ್ಸಿಡಿಯ ಕೊಡುಗೆ ದೊರೆಯುತ್ತದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯಿಂದ ಅರ್ಹತೆಯ ಮಾನದಂಡಗಳಿಂದ ಮರುಪಾವತಿ ಆಯ್ಕೆಯವರೆಗೆ, ನಾವು ನಿಮ್ಮ ಹಾಗೂ ನಿಮ್ಮ ಕುಟುಂಬದ ಕನಸುಗಳನ್ನು ನಿಜವಾಗಿಸಲು ಬೆಂಬಲ ನೀಡಲು ಬದ್ಧರಾಗಿದ್ದೇವೆ.

ನಿಮ್ಮ ಕನಸಿನ ಮನೆ ನಿಮ್ಮನ್ನು ಗೇಟೆಡ್‌ ಸಮುದಾಯದಿಂದ ಗ್ರಾಮಪಂಚಾಯಿತಿ ಹಾಗೂ ಅಧಿಕೃತ ಕಾಲೋನಿಗಳಿಗೆ ಕೊಂಡೊಯ್ಯವುದಾದರೆ, ನಾವು ನಿಮ್ಮನ್ನು ಬೆಂಬಲಿಸುತ್ತೇವೆ. ನಿಮಗೆ ITRನಂತಹ ಅಧಿಕೃತ ಆದಾಯ ದಾಖಲೆಗಳನ್ನು ಹೊಂದಿಸಲಾಗದಿದ್ದರೆ, ನಾವು ನಿಮ್ಮನ್ನು ಬೆಂಬಲಿಸುತ್ತೇವೆ. ನಿಮಗೆ ಈ ಹಿಂದೆ ಗೃಹ ಸಾಲ ಪಡೆಯಲು ಕಷ್ಟವಾಗಿದ್ದರೆ ಅಥವಾ ನಿಮಗೆ ಸಾಲ ದೊರೆಯಬಹುದು ಎಂದು ನೀವು ಎಂದಿಗೂ ನಿಜವಾಗಿಯೂ ನಂಬದಿದ್ದರೆ, ನಾವು ನಿಮ್ಮನ್ನು ಬೆಂಬಲಿಸುತ್ತೇವೆ! ನಮ್ಮ 135+ ICICI HFC ಶಾಖೆಗಳ ಪೈಕಿ ಎಲ್ಲದರಲ್ಲಿಯೂ, ನೀವು ಮನೆಯ ಮಾಲೀಕತ್ವದ ಹೊಂದುವ ಕುರಿತು ನಿಮ್ಮ ಭಾವನೆಯನ್ನು ಬದಲಿಸುವ ಸ್ನೇಹಪರ, ನೆರವಿನ ಹಸ್ತ ಚಾಚುವ ಸ್ಥಳೀಯ ತಜ್ಞರನ್ನು ಕಾಣುತ್ತೀರಿ.

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಪ್ರಯೋಜನಗಳು

ಬಡ್ಡಿಯ ಮೇಲೆ ಒದಗಿಸುವ PMAY ಸಬ್ಸಿಡಿ ಗೃಹ ಸಾಲದ ಹೊರಹರಿವನ್ನು ಕಡಿಮೆಗೊಳಿಸುವುದರಿಂದ PMAY ಯೋಜನೆಯಡಿಯCLSS ಗೃಹ ಸಾಲವನ್ನು ಕೈಗೆಟಕುವಂತೆ ಮಾಡುತ್ತದೆ. ಸಬ್ಸಿಡಿ ಮೊತ್ತ ಹೆಚ್ಚಾಗಿ ನಿಮ್ಮ ಆದಾಯದ ವರ್ಗ ಹಾಗೂ ಹಣಕಾಸಿನ ನೆರವು ನೀಡುತ್ತಿರುವ ಆಸ್ತಿಯ ಗಾತ್ರದ ಮೇಲೆ ಅವಲಂಬಿತವಾಗಿರುತ್ತದೆ.

ಪಿಎಂಎವೈಗೆ ಹೇಗೆ ಅರ್ಜಿ ಸಲ್ಲಿಸುವುದು?

ಪಿಎಂಎವೈ ಯೋಜನೆಯನ್ನು ಮೂರು ಹಂತಗಳಲ್ಲಿ ಅನುಷ್ಠಾನಗೊಳಿಸಲಾಗುತ್ತದೆ, ಮೊದಲ ಎರಡು ಹಂತಗಳು ಪೂರ್ಣಗೊಂಡಿವೆ.  ಪ್ರಸ್ತುತ, ಕೊನೆಯ ಹಂತ ಜಾರಿಯಲ್ಲಿದೆ; ಇದು 2019ರ ಏಪ್ರಿಲ್‌ 41ರಂದು ಅರಂಭಗೊಂಡಿದೆ, ಮತ್ತು 2022ರ ಮಾರ್ಚ್‌ 31ರಂದು ಪೂರ್ಣಗೊಳ್ಳಲಿದೆ.

ಆದ್ದರಿಂದ ನೀವು ಪ್ರಧಾನಮಂತ್ರಿ ಆವಾಸ್‌ ಯೋಜನೆಗೆ ಅರ್ಜಿ ಸಲ್ಲಿಸಬೇಕಿದ್ದಲ್ಲಿ, ಈಗ ಅದಕ್ಕೆ ಸೂಕ್ತ ಸಮಯ

ಆದಾಯ ಗುಂಪುಗಳು (PMAY ಉದ್ದೇಶಗಳಿಗಾಗಿ)
  • EWS/LIG ಯೋಜನೆ- ಈ ಯೋಜನೆ 2015ರ ಜುಲೈ 17ರಿಂದ ಅನ್ವಯವಾಗುತ್ತಿದೆ ಮತ್ತು PMAY ಅವಧಿ 2022ರ ಮಾರ್ಚ್‌ 31ರವರೆಗೆ ಇದೆ.
  • MIG-1 and MIG-II ಯೋಜನೆ- ಈ ಯೋಜನೆ 2020ರ ಮಾರ್ಚ್‌ 31ರಿಂದ ಅನ್ವಯವಾಗುತ್ತಿದೆ ಮತ್ತು PMAY ಅವಧಿ 2021ರ ಮಾರ್ಚ್‌ 31ರವರೆಗೆ ಇದೆ.

ಫಲಾನುಭವಿ ಕುಟುಂಬದ ವ್ಯಾಖ್ಯಾನ: ಫಲಾನುಭವಿ ಕುಟುಂಬ ಪತಿ, ಪತ್ನಿ, ಅವಿವಾಹಿತ ಪುತ್ರ ಮತ್ತು/ಅಥವಾ ಅವಿವಾಹಿತ ಪುತ್ರಿಯರನ್ನು ಒಳಗೊಂಡಿರುತ್ತದೆ. ಸಂಪಾದನೆ ಹೊಂದಿರುವ ವಯಸ್ಕ ಸದಸ್ಯರನ್ನು ಅವರು ವೈವಾಹಿಕ ಸಂಬಂಧದ ಪರಿವೆಯಿಲ್ಲದೆ ಪ್ರತ್ಯೇಕ ಕುಟುಂಬವೆಂದು ಪರಿಗಣಿಸಬಹುದು.

ಇತರ ಷರತ್ತುಗಳು
  • ಆದಾಯ ಮಾತ್ರವಲ್ಲ, ಇಲ್ಲಿ ಇನ್ನೊಂದು ಪ್ರಮುಖ ಷರತ್ತು ಇದೆ: ಅರ್ಜಿ ಸಲ್ಲಿಸುವ ಫಲಾನುಭವಿ ಕುಟುಂಬದ ಆತ/ಆಕೆ ಅಥವಾ ಆತ/ಆಕೆಯ ಕುಟುಂಬ ಸದಸ್ಯರು ಭಾರತದ ಯಾವುದೇ ಭಾಗದಲ್ಲಿ ಯಾವುದೇ ಪಕ್ಕಾ ಮನೆಯ ಮಾಲೀಕತ್ವ ಹೊಂದಿರಬಾರದು.
  • ಮಹಿಳಾ ಮಾಲೀಕತ್ವ/ಸಹ-ಮಾಲೀಕತ್ವ-EWS/LIGಗೆ: ಹೊಸ ಖರೀದಿಗೆ ಮಾತ್ರ ಮಹಿಳಾ ಮಾಲೀಕತ್ವ ಕಡ್ಡಾಯ ಆದರೆ, ಅಸ್ತಿತ್ವದಲ್ಲಿರುವ ಭೂಮಿಯ ಮೇಲೆ ಹೊಸ ನಿರ್ಮಾಣ ಅಥವಾ ಅಸ್ತಿತ್ವದಲ್ಲಿರುವ ಮನೆಯ ಸುಧಾರಣೆ/ರಿಪೇರಿಗೆ ಅಲ್ಲ. MIG-I ಮತ್ತು MIG-IIಗಾಗಿ: ಕಡ್ಡಾಯವಲ್ಲ
  • ನೀವು ವಿವಾಹಿತರಾಗಿದ್ದು ಮತ್ತು ಪ್ರಧಾನ ಮಂತ್ರಿ ಆವಾಸ್‌ ಯೋಜನೆಯ ಲಾಭ ಪಡೆಯಲು ಬಯಸಿದಲ್ಲಿ, ನೀವು ಅಥವಾ ನಿಮ್ಮ ಸಂಗಾತಿ ಅಥವಾ ಜಂಟಿಯಾಗಿ ಅರ್ಜಿ ಸಲ್ಲಿಸಬಹುದು;
  • ಜೋಡಿಯಾಗಿ ನಿಮ್ಮ ಆದಾಯವನ್ನು ಒಟ್ಟಾಗಿ ಪರಿಗಣಿಸಲಾಗುತ್ತದೆ; ಆದರೆ, ಕುಟುಂಬದಲ್ಲಿ ಆದಾಯ ಗಳಿಸುವ ಇತರ ವಯಸ್ಕ ಸದಸ್ಯರಿದ್ದಲ್ಲಿ, ಆಕೆ/ಆತನ ವೈವಾಹಿಕ ಸ್ಥಿತಿಗತಿ ಏನೇ ಇದ್ದರೂ, ಅವರನ್ನು ಪ್ರತ್ಯೇಕ ಮನೆಯೆಂದೇ ಪರಿಗಣಿಸಬಹುದು;
  • ನೀವು ಮನೆ ಖರೀದಿ/ನಿರ್ಮಾಣದಲ್ಲಿ ಯಾವುದೇ ಇತರ ಕೇಂದ್ರ ಸರ್ಕಾರದ ನೆರವು ಪಡೆಯಬಾರದು;
  • ನೀವು ನಿಮಗೆ ಸಾಲ ನೀಡುವವರಿಗೆ ನಿಮ್ಮ ಕುಟುಂಬದ ಒಟ್ಟು ಆದಾಯ ಮತ್ತು ಇಚ್ಛಿಸಿದ ಆಸ್ತಿಯ ದಾಖಲೆಗಳ ಕುರಿತು ಸ್ವಯಂ ಘೋಷಿತ ಪತ್ರವನ್ನು ಸಲ್ಲಿಸಬೇಕು.
  • ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿಯ ಎಲ್ಲಾ ಸಾಲದ ಖಾತೆಗಳು ನಿಮ್ಮ ಆಧಾರ್‌ ಕಾರ್ಡ್‌ನೊಂದಿಗೆ ಲಿಂಕ್‌ ಆಗಿರಬೇಕು

ಪ್ರಧಾನ ಮಂತ್ರಿ ಆವಾಸ್‌ ಯೋಜನೆಯ ಅರ್ಹತೆ

ಮೊದಲಿಗೆ, ಸ್ವತಃ ಆಸ್ತಿ:

  • ಸಬ್ಸಿಡಿ ಪಡೆಯಲು, ನೀವು ಆಯ್ಕೆ ಮಾಡುವ ವಸತಿ ಪ್ರದೇಶ ಏಕ ಘಟಕ ಅಥವಾ ಯಾವುದೇ  ಬಹು-ಮಹಡಿ ಕಟ್ಟಡದಲ್ಲಿ ಒಂದು ಘಟಕವಾಗಿರಬೇಕು.
  • ಅರ್ಹ ಘಟಕ ಶೌಚಾಲಯ, ನೀರು, ಚರಂಡಿ ವ್ಯವಸ್ಥೆ, ರಸ್ತೆ, ವಿದ್ಯುತ್‌ ಇತ್ಯಾದಿ ಮೂಲಭೂತ ಸೌಲಭ್ಯಗಳು ಮತ್ತು ಸೌಕರ್ಯಗಳನ್ನು ಹೊಂದಿರಬೇಕು.

ಎರಡನೆಯದು, ಕಾರ್ಪೆಟ್‌ ಪ್ರದೇಶ (ಗೋಡೆ ಒಳಗೊಂಡಿಲ್ಲ) ಇದನ್ನು ಮೀರಬಾರದು:

  • EWS – 30 ಚದರ ಮೀಟರ್‌ (323 ಚ.ಅಡಿ)
  • LIG – 60 ಚದರ ಮೀಟರ್(646 ಚ.ಅಡಿ)
  • MIG-I – 160 ಚದರ ಮೀಟರ್ (1722 ಚ.ಅಡಿ)
  • MIG-II – 200 ಚದರ ಮೀಟರ್ (2153 ಚ.ಅಡಿ)

ಅಂತಿಮವಾಗಿ, ಸ್ಥಳ:

  • 2011ರ ಜನಗಣತಿ ಪ್ರಕಾರ ಎಲ್ಲಾ ಶಾಸನಬದ್ಧ ಪಟ್ಟಣಗಳು ಮತ್ತು ಶಾಸನಬದ್ಧ ಪಟ್ಟಣಗಳೊಂದಿಗೆ ಅಧಿಸೂಚಿತಗೊಂಡಂತೆ. ಯೋಜನಾ ಪ್ರದೇಶ ಸೇರಿದಂತೆ ಅಧಿಸೂಚನೆಗೊಳಪಟ್ಟಿರುವ ಪಟ್ಟಣಗಳು
  • ನೀವು ನಿಮ್ಮ ಪಟ್ಟಣ ಅರ್ಹತೆ ಪಡೆದುಕೊಳ್ಳುತ್ತದೆಯೇ ಎಂದು ತಿಳಿಯಬೇಕಿದ್ದಲ್ಲಿ, ಕೆಳಗಿನ ನ್ಯಾಷನಲ್‌ ಹೌಸಿಂಗ್‌ ಬ್ಯಾಂಕ್‌ (NHB) ಲಿಂಕ್ ಮೇಲೆ ಕ್ಲಿಕ್‌ ಮಾಡಿ, ಮತ್ತು "ಸ್ಟ್ಯಾಚುಟರಿ ಟೌನ್‌ ಆ್ಯಂಡ್‌ ಪ್ಲ್ಯಾನಿಂಗ್‌ ಏರಿಯಾ ಕೋಡ್ಸ್‌" ಎಂಬ ಗುರುತಿನ ವಿಭಾಗವನ್ನು ನೋಡಿ: https://nhb.org.in/government-scheme/pradhan-mantri-awas-yojana-credit-linked-subsidy-scheme/

ಪಿಎಂಎವೈ ಯೋಜನೆ ಸಾಲದ ಮಿತಿಗಳು:

  • EWS: 6 ಲಕ್ಷ ರೂ.
  • LIG: 6 ಲಕ್ಷ ರೂ.
  • MIG(I): 9 ಲಕ್ಷ ರೂ.
  • MIG(II): 12 ಲಕ್ಷ ರೂ.
ಸೂಚನೆ:
ನಿರ್ದಿಷ್ಟಪಡಿಸಿದ ಮಿತಿಗಳನ್ನು ಮೀರಿದ ಎಲ್ಲಾ ಹೆಚ್ಚುವರಿ ಸಾಲಗಳು, ಯಾವುದಾದರೂ ಇದ್ದಲ್ಲಿ, ಸಬ್ಸಿಡಿ-ರಹಿತ ದಿನಾಂಕಗಳಲ್ಲಿ ಒದಗಿಸಲಾಗುವುದು.
PMAY ಸಬ್ಸಿಡಿ ಬಡ್ಡಿಯ ನಿವ್ವಳ ಪ್ರಸ್ತುತ ಮೌಲ್ಯವನ್ನು(NPV) ಶೇಕಡಾ 9ರಷ್ಟು ರಿಯಾಯ್ತಿಯಲ್ಲಿ ಲೆಕ್ಕ ಹಾಕಲಾಗುತ್ತದೆ

ಪಿಎಂಎವೈ ಯೋಜನೆ ಸಾಲ ಅವಧಿ

ಎಲ್ಲಾ ನಾಲ್ಕು ವರ್ಗಗಳಲ್ಲಿ ಒದಗಿಸುವ ಗರಿಷ್ಠ ಗೃಹ ಸಾಲದ ಅವಧಿಯೆಂದರೆ 20 ವರ್ಷಗಳು

ಪಿಎಂಎವೈ Scheme Interest Rates

  • EWS: 2.67 ಲಕ್ಷ ರೂ.ಗಳವರೆಗೆ ಶೇಕಡಾ 6.5
  • LIG: 6.5%; up to Rs 2.67 lakhs
  • MIG(I): 2.35 ಲಕ್ಷ ರೂ.ಗಳವರೆಗೆ ಶೇಕಡಾ 4
  • MIG(II): 2.30 ಲಕ್ಷ ರೂ.ಗಳವರೆಗೆ ಶೇಕಡಾ 3

ಪಿಎಂಎವೈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ

18 ಲಕ್ಷ ರೂ.ಗಳವರೆಗೆ ವಾರ್ಷಿಕ ಆದಾಯ ಹೊಂದಿರುವ ಯಾವುದೇ ಕುಟುಂಬ PMAY ಯೋಜನೆಗೆ ಅರ್ಜಿ ಸಲ್ಲಿಸಬಹುದು. ನೀವು ಸಬ್ಸಿಡಿ ಲಾಭಕ್ಕೆ ಅರ್ಜಿ ಸಲ್ಲಿಸಲು ಬಯಸಿದರೆ, ನೀವು ನಮ್ಮ ಯಾವುದೇ 135+ ICICI HFC ಶಾಖೆಗಳಲ್ಲಿ ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು. ನಮ್ಮ ಸ್ಥಳೀಯ ಶಾಖೆಯ ತಜ್ಷರು ನಿಮ್ಮ ಮನವಿಯನ್ನು ಪರಿಶೀಲಿಸುತ್ತಾರೆ ಹಾಗೂ ತ್ವರಿತವಾಗಿ ನಿಮ್ಮ ಮನವಿಯನ್ನು ಪ್ರಕ್ರಿಯೆಗೊಳಿಸುತ್ತಾರೆ. ಪ್ರಕ್ರಿಯೆಯನ್ನು ನಿಮಗಾಗಿ ತ್ವರಿತ ಹಾಗೂ ಸರಳವಾಗಿಸುವುದು ನಮ್ಮ ಗುರಿ.

  1. ಸ್ವಯಂ-ಘೋಷಣೆಯ ನಮೂನೆಯನ್ನು ಡೌನ್‌ಲೋಡ್‌ ಮಾಡಿಕೊಳ್ಳಿ ಮತ್ತು ಭರ್ತಿ ಮಾಡಿ
  2. ಅದನ್ನು ನಿಮ್ಮ ಸನಿಹದ ICICI HFC ಶಾಖೆಗೆ ಸಲ್ಲಿಸಿ
  3. ಎಲ್ಲಾ ಕುಟುಂಬ ಸದಸ್ಯರ ಆಧಾರ್‌ ಗುರುತಿನ ಚೀಟಿಯ ಜೊತೆಗೆ ನಿಮ್ಮ ಅಸಲಿ ID ದಾಖಲೆಯನ್ನು ಕೊಂಡೊಯ್ಯಿರಿ

*CLSSನ ಲಾಭಗಳನ್ನು ಪಡೆಯುವ ನಿಮ್ಮ ಅರ್ಹತೆಯನ್ನು ವಿಶ್ಲೇಷಿಸುವುದು ಕೇವಲ ಭಾರತ ಸರ್ಕಾರದ ವಿವೇಚನೆಯಾಗಿದೆ. PMAY ಅರ್ಹತೆಯ ವಿಶ್ಲೇಷಣೆಗಾಗಿ ಅಡಿಯಲ್ಲಿ ಹಾಕಿರುವ ಮಾನದಂಡಗಳ ಅಂಶಗಳು ಇಲ್ಲಿವೆ.

ಪಿಎಂಎವೈ ಸಬ್ಸಿಡಿ ಕ್ಯಾಲ್ಕುಲೇಟರ್

ನೀವು ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಗೆ ಅರ್ಹರೇ ಮತ್ತು ಸಬ್ಸಿಡಿ ಕ್ಯಾಲ್ಕುಲೇಟರ್‌ ಇಂದ ಎಷ್ಟು ಸಬ್ಸಿಡಿ ಪಡೆಯಬಹುದು ಎಂಬುದನ್ನು ಕಂಡುಕೊಳ್ಳಿ

ನೀವು ಸರ್ಕಾರದಿಂದ ಯಾವುದೇ ವಸತಿ ಯೋಜನೆಯಡಿಯಲ್ಲಿ ಕೇಂದ್ರ ಸಹಾಯ ಅಥವಾ PMAY ಅಡಿಯಲ್ಲಿ ಯಾವುದೇ ಪ್ರಯೋಜನವನ್ನು ಪಡೆದಿದ್ದೀರಾ?
ಇದು ನಿಮ್ಮ ಮೊದಲ ಪಕ್ಕಾ ಮನೆಯೇ?
ಕುಟುಂಬದ ಒಟ್ಟು ವಾರ್ಷಿಕ ಆದಾಯವನ್ನು ನಮೂದಿಸಿ
Thirty Thousand
ಸಾಲದ ಮೊತ್ತ
Ten Lakhs
ಸಾಲದ ಅವಧಿಯನ್ನು ನಮೂದಿಸಿ
8 year's and 1 month
Months

PMAY Subsidy Amount

0


ಸಬ್ಸಿಡಿ ವಿಭಾಗ

EWS/LIG

ಇಎಂಐನಲ್ಲಿ ನಿವ್ವಳ ಕಡಿತ

Net Reduction value

ಕೆಳಗಿನ ವಿವರಗಳನ್ನು ಭರ್ತಿ ಮಾಡಿ

Enter Your Full Name
Enter Your Mobile Number
Enter Loan Amount
Enter Email Id
Select Your City
Please accept the terms & conditions

ಎಫ್ ಎ ಕ್ಯೂ 

ಇತ್ತೀಚಿನ ಪಿಎಂಎವೈ ಪಟ್ಟಿ (2021-22)ಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಲು, ನೀವು ನಗರ ವಲಯ ಅಥವಾ ಗ್ರಾಮೀಣ ವಲಯದಲ್ಲಿ ಅರ್ಜಿ ಸಲ್ಲಿಸಿದ್ದೀರೇ ಎಂಬುದನ್ನು ಪರಿಶೀಲಿಸುವ ಮೂಲಕ ಆರಂಭಿಸಿ.

ನೀವು PMAY ನಗರ ವಲಯದಲ್ಲಿ ಅರ್ಜಿ ಸಲ್ಲಿಸಿದ್ದರೆ, ಕೆಳಗಿನ ಹಂತಗಳನ್ನು ಅನುಸರಿಸಿ:

  • visit pmaymis.gov.in
  • 'ಫಲಾನುಭವಿಯನ್ನು ಆಯ್ಕೆ ಮಾಡಿ' ಮೇಲೆ ಕ್ಲಿಕ್‌ ಮಾಡಿ
  • ಡ್ರಾಪ್‌-ಡೌನ್‌ ಮೆನುವಿನಿಂದ, 'ಹೆಸರಿನಿಂದ ಶೋಧಿಸಿ' ಕ್ಲಿಕ್‌ ಮಾಡಿ
  • ನಿಮ್ಮ ಆಧಾರ್‌ ಸಂಖ್ಯೆಯನ್ನು ನಮೂದಿಸಿ
  • ಡಾಟಾಬೇಸ್‌ನಲ್ಲಿ ನಿಮ್ಮ ಆಧಾರ್‌ ಸಂಖ್ಯೆ ಲಭ್ಯವಿದ್ದಲ್ಲಿ, ನೀವು ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಕಾಣುವಿರಿ

ನೀವು PMAY ಗ್ರಾಮೀಣ ವಲಯದಲ್ಲಿ ಅರ್ಜಿ ಸಲ್ಲಿಸಿದ್ದರೆ, ಕೆಳಗಿನ ಹಂತಗಳನ್ನು ಪಾಲಿಸಿ:

  • rhreporting.nic.in/netiay/Benificiary.aspx  ಭೇಟಿ ಕೊಡಿ
  • ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ ಮತ್ತು 'ಸಲ್ಲಿಸಿ' ಮೇಲೆ ಕ್ಲಿಕ್‌ ಮಾಡಿ
  • ಫಲಾನುಭವಿಯ ಡಾಟಾಬೇಸ್‌ನಲ್ಲಿ ಲಭ್ಯವಿರುವ ನೋಂದಣಿ ಸಂಖ್ಯೆಯನ್ನು ನೀವು ನಮೂದಿಸಿದ್ದರೆ, ನಿಮ್ಮ ವಿವರಗಳು ಪ್ರತಿಫಲಿಸುತ್ತವೆ
  • ನೋಂದಣಿ ಸಂಖ್ಯೆಯಿಲ್ಲದೆ ಹುಡುಕಲು, 'ಸುಧಾರಿತ ಶೋಧ'ದ ಮೇಲೆ ಕ್ಲಿಕ್‌ ಮಾಡಿ
  • ನಿಮ್ಮನ್ನು ಒಂದು ಪುಟಕ್ಕೆ ಕರೆದೊಯ್ಯಲಾಗುತ್ತದೆ ಅಲ್ಲಿ ನೀವು ನಿಮ್ಮ ರಾಜ್ಯ, ಜಿಲ್ಲೆ, ಬ್ಲಾಕ್‌, ಪಂಚಾಯತ್‌, ಹೆಸರು, BPL ಸಂಖ್ಯೆ ಮತ್ತು ಮಂಜೂರಾತಿ ಸಂಖ್ಯೆಯಂತಹ ವಿವರಗಳನ್ನು ನಮೂದಿಸಬೇಕು
  • ಫಲಿತಾಂಶ ಪಡೆಯಲು ಶೋಧದ ಮೇಲೆ ಕ್ಲಿಕ್‌ ಮಾಡಿ

 

ಪಿಎಂಎವೈ  ಆಫ್‌ಲೈನ್‌ನಲ್ಲಿ  ಅರ್ಜಿ ಸಲ್ಲಿಸಲು, ರಾಜ್ಯ ಸರ್ಕಾರಗಳು ಕಾರ್ಯನಿರ್ವಹಿಸುತ್ತಿರುವ ಕಾಮನ್‌ ಸರ್ವಿಸ್‌ ಸೆಂಟರ್ (CSC)‌ಗೆ ಭೇಟಿ ನೀಡಿ, ಆಫ್‌ಲೈನ್‌ ಅರ್ಜಿಗಳಿಗೆ, 25 ರೂ.ಗಳ (ಜಿಎಸ್‌ಟಿ ಪ್ಲಸ್‌) ನೋಂದಣಿ ಶುಲ್ಕ ಅನ್ವಯವಾಗುತ್ತದೆ. ನಿಮ್ಮ ಅರ್ಜಿಯನ್ನು ಬೆಂಬಲಿಸಲು ಕೆಳಗಿನ ದಾಖಲೆಗಳನ್ನು ದಯವಿಟ್ಟು ಕೊಂಡೊಯ್ಯಿರಿ:

  • ಗುರುತಿನ ಚೀಟಿ (ಆಧಾರ್‌ ಕಾರ್ಡ್‌/ PAN ಕಾರ್ಡ್‌) ಚಾಲನಾ ಪರವಾನಗಿ/ವೋಟರ್‌ ID ಕಾರ್ಡ್)‌
  • ವಿಳಾಸದ ದಾಖಲೆ
  • ಆದಾಯದ ದಾಖಲೆ (ನಮೂನೆ 16/ ಇತ್ತೀಚಿನ ಮರುಪಾವತಿ ಅಥವಾ ಕಳೆದ ಆರು ತಿಂಗಳ ಬ್ಯಾಂಕ್‌ ಅಕೌಂಟ್‌ ಸ್ಟೇಟ್‌ಮೆಂಟ್‌)
  • ನೀವು ಅಥವಾ ನಿಮ್ಮ ತಕ್ಷಣದ ಕುಟುಂಬ ಭಾರತದಲ್ಲಿ ಯಾವುದೇ ಮನೆ ಹೊಂದಿಲ್ಲ ಎಂಬುದನ್ನು ತಿಳಿಸುವ ಒಂದು ಪ್ರಮಾಣಪತ್ರ
  • ಖರೀದಿಸುತ್ತಿರುವ ಆಸ್ತಿಯ ಮೌಲ್ಯಮಾಪನ ಪ್ರಮಾಣಪಪತ್ರ
  • ಡೆವಲಪರ್‌ ಅಥವಾ ಬಿಲ್ಡರ್‌ನೊಂದಿಗಿನ ನಿರ್ಮಾಣ ಒಪ್ಪಂದ
  • ನಿರ್ಮಾಣದ ಮಂಜೂರಾತಿ ಯೋಜನೆ
  • ನಿರ್ಮಾಣ/ರಿಪೇರಿಯ ದರವನ್ನು ದೃಢೀಕರಿಸುವ ವಾಸ್ತುಶಿಲ್ಪಿ ಅಥವಾ ಇಂಜಿನಿಯರ್‌ನ ಪ್ರಮಾಣಪತ್ರ
  • ಮನೆಯ ಸದೃಢತೆ ಕುರಿತ ಪ್ರಮಾಣಪತ್ರ
  • ಸಕ್ಷಮ ಪ್ರಾಧಿಕಾರದಿಂದ NOC ಅಥವಾ ಪ್ರಸ್ತುತ ಗೃಹ ನಿರ್ಮಾಣ ಸೊಸೈಟಿ
  • ಖರೀದಿಗೆ ಮಾಡಿರುವ ಮುಂಗಡ ಪಾವತಿಯ ರಸೀತಿ (ಅನ್ವಯವಾದಲ್ಲಿ)
  • ಆಸ್ತಿ ಮಂಜೂರಾತಿ/ಒಪ್ಪಂದದ ಪತ್ರ ಅಥವಾ ಪ್ರಸ್ತುತ ಆಸ್ತಿ ದಾಖಲೆಗಳು

ಇಲ್ಲ. ಅಸ್ತಿತ್ವದಲ್ಲಿರುವ ಗೃಹ ಸಾಲಕ್ಕೆ PMAY ಸಬ್ಸಿಡಿ ಲಾಭ ಪಡೆಯಲು ಸಾಧ್ಯವಿಲ್ಲ. ಈ ಯೋಜನೆಯ ಅರ್ಹತಾ ಮಾನದಂಡದ ಅನುಸಾರ ಫಲಾನುಭವಿ ಆತ/ಆಕೆಯ ಹೆಸರಿನಲ್ಲಿ ಅಥವಾ ಆಕೆ/ಆತನ ಕುಟುಂಬ ಸದಸ್ಯರು ಭಾರತದ ಯಾವುದೇ ಭಾಗದಲ್ಲಿ ಮನೆಯ ಮಾಲಿಕತ್ವ ಹೊಂದಿರಬಾರದು. ಆದ್ದರಿಂದ, PMAY ಯೋಜನೆ ಮೊದಲ ಬಾರಿಗೆ ಮನೆ ಖರೀದಿಗೆ ಪ್ರಯತ್ನಿಸುತ್ತಿರುವ ವ್ಯಕ್ತಿಗಳಿಗೆ ಮಾತ್ರ ಅನ್ವಯಿಸುತ್ತದೆ.

ನೀವು ಈಗಾಗಲೇ ಅಸ್ತಿತ್ವದಲ್ಲಿರುವ ಗೃಹ ಸಾಲ ಗ್ರಾಹಕರಾಗಿದ್ದರೆ, ಅದರರ್ಥ, ನೀವು ನಿಮ್ಮ ಹೆಸರಿನಲ್ಲಿ ಒಂದು ಮನೆಯ ಮಾಲೀಕತ್ವ ಹೊಂದಿದ್ದೀರಿ ಮತ್ತು ಆದ್ದರಿಂದ PMAY ಅಡಿಯಲ್ಲಿ ಬಡ್ಡಿ ಸಬ್ಸಿಡಿಯನ್ನು ಪಡೆಯುವ ನಿಮ್ಮ ಅರ್ಜಿ ತಿರಸ್ಕೃತಗೊಳ್ಳಬಹುದು.

ನೀವು ಪಿಎಂಎವೈ CLSSಗೆ ಅರ್ಜಿ ಸಲ್ಲಿಸಿದ್ದರೆ, ಸಬ್ಸಿಡಿ ಮೊತ್ತ ಪಡೆಯಲು 3-4 ತಿಂಗಳುಗಳು ತೆಗೆದುಕೊಳ್ಳುತ್ತದೆ.

ಒಮ್ಮೆ ನೀವು ಅಡಿ ಸಬ್ಸಿಡಿ ಪಡೆಯಲು ಸಾಲಕ್ಕೆ ಅರ್ಜಿ ಸಲ್ಲಿಸಿದಾಗ, ಸಾಲ ನೀಡುವವರು ಸಾಲ ಮತ್ತು ಸಬ್ಸಿಡಿ ಮೊತ್ತಕ್ಕಾಗಿ ನಿಮ್ಮ ಅರ್ಹತಾ ಮಾನದಂಡವನ್ನು ಪರಿಶೀಲಿಸುತ್ತಾರೆ. ಸಾಲ ನೀಡುವವರು ನಂತರ ಸಾಲ ಮಂಜೂರು ಮಾಡುತ್ತಾರೆ ಮತ್ತು ಕೇಂದ್ರ ನೋಡಲ್‌ ಏಜೆನ್ಸಿ (CNAs) ಇಂದ ಸಬ್ಸಿಡಿ ಪ್ರಕ್ರಿಯೆಯನ್ನು ಆರಂಭಿಸುತ್ತಾರೆ. ಸದ್ಯ, ಅಲ್ಲಿ ಮೂರು CNAsಗಳಿವೆ- ಗೃಹ ಮತ್ತು ನಗರಾಭಿವೃದ್ಧಿ ಸಹಕಾರ. (HUDCO), ರಾಷ್ಟ್ರೀಯ ಗೃಹ ನಿರ್ಮಾಣ ಬ್ಯಾಂಕ್ (NHB) ಮತ್ತು ಭಾರತೀಯ ಸ್ಟೇಟ್‌ ಬ್ಯಾಂಕ್. CNAs ಅರ್ಜಿಗಳನ್ನು ಮರುಪರಿಶೀಲಿಸುತ್ತಾರೆ ಮತ್ತು ಸರ್ಕಾರದಿಂದ ಪಡೆಯುವ ಹಣವನ್ನು ಬಿಡುಗಡೆಗೊಳಿಸುತ್ತಾರೆ.

ಯಾವುದೇ ಬ್ಯಾಂಕ್‌ ಅಥವಾ ಸಾಲ ನೀಡುವ ಸಂಸ್ಥೆಯಲ್ಲಿ PMAY ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಿದ ನಂತರ, ನಿಮಗೆ ಒಂದು ಅರ್ಜಿಯ ID ದೊರೆಯುತ್ತದೆ.ನೀವು ಈ ಅರ್ಜಿಯ ID ಅನ್ನು ನಿಮ್ಮ ಅರ್ಜಿ ಸಲ್ಲಿಕೆಯಿಂದ ಸಬ್ಸಿಡಿ ಬಿಡುಗಡೆವರೆಗಿನ ಸ್ಥಿತಿಗತಿಯನ್ನು ಟ್ರ್ಯಾಕ್‌ ಮಾಡಲು ಬಳಸಬಹುದು. ನೀವು SMS ಮೂಲಕ ಕೂಡ ಅರ್ಜಿಯ ಅಪ್‌ಡೇಟ್‌ಗಳನ್ನು ಪಡೆಯಬಹುದು.

ಪಿಎಂಎವೈ ಯೋಜನೆಯ ಲಾಭಕ್ಕೆ ಪ್ರತಿ ವ್ಯಕ್ತಿ ಕೂಡ ಅರ್ಹರಾಗಿರುವುದಿಲ್ಲ. PMAY ಸಬ್ಸಿಡಿ ಯೋಜನೆಗೆ ಅರ್ಜಿ ಸಲ್ಲಿಸುವ ಮುನ್ನ, ನೀವು ಯೋಜನೆಗೆ ಅರ್ಹರೇ ಎಂಬುದನ್ನು ತಿಳಿದುಕೊಳ್ಳಬೇಕು. ಕೆಳಗಿನ ಪಟ್ಟಿ ಯಾರು PMAY ಸಬ್ಸಿಡಿಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ ಎಂಬುದನ್ನು ಸ್ಪಷ್ಟವಾಗಿ ನಿರ್ದಿಷ್ಟಪಡಿಸುತ್ತದೆ:

  • ದೇಶದ ಯಾವುದೇ ಭಾಗದಲ್ಲಿ ಈಗಾಗಲೇ ಪಕ್ಕಾ ಮನೆಯ ಮಾಲಿಕತ್ವ ಹೊಂದಿರುವ ವ್ಯಕ್ತಿಗಳು
  • ಕೇಂದ್ರ/ರಾಜ್ಯ ಸರ್ಕಾರದ ಗೃಹ ವಸತಿ ಯೋಜನೆಯಿಂದ ಈ ಹಿಂದೆ ಲಾಭ ಪಡೆದಿರುವ ವ್ಯಕ್ತಿಗಳು
  • 6 ಲಕ್ಷ ರೂ.ಗಳಿಂದ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವ ವ್ಯಕ್ತಿಗಳು
  • ಯೋಜನೆಗಾಗಿ ಸರ್ಕಾರ ಉಲ್ಲೇಖಿಸಿದ ನಗರಗಳು ಮತ್ತು ಪಟ್ಟಣಗಳ ಪಟ್ಟಿಯಿಂದ ಹೊರಗಡೆ ಗೃಹ ಖರೀದಿಸುವ ವ್ಯಕ್ತಿಗಳು (ಈ ಪಟ್ಟಿಯನ್ನು ಸರ್ಕಾರ ಕಾಲಕಾಲಕ್ಕೆ ಪರಿಷ್ಕರಿಸುತ್ತದೆ)

ಪಿಎಂಎವೈ  ಸಬ್ಸಿಡಿ ಯೋಜನೆಗಳು ಕುಟುಂಬ ಇವರುಗಳನ್ನು ಒಳಗೊಂಡಿವೆ.

  • ಪತಿ
  • ಪತ್ನಿ
  • ಅವಿವಾಹಿತ ಮಕ್ಕಳು

ಆದಾಯ ಹೊಂದಿರುವ ವಯಸ್ಕ ಸದಸ್ಯರು, ಅವರ ವೈವಾಹಿಕ ಸ್ಥಿತಿಗತಿಯನ್ನು ಪರಿಗಣಿಸದೆ, MIG ವರ್ಗದಲ್ಲಿ ಪ್ರತ್ಯೇಕ ಮನೆಯಾಗಿ ಪರಿಗಣಿಸಲಾಗುತ್ತದೆ.

ಕುಟುಂಬ ಸದಸ್ಯರು ಫಲಾನುಬವಿಯ ಹೆಸರಿನಲ್ಲಿ ಅಥವಾ ಫಲಾನುಭವಿಯ ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಿ ಭಾರತದ ಯಾವುದೇ ಭಾಗದಲ್ಲಿ ಯಾವುದೇ ಪಕ್ಕಾ ಮನೆ ಹೊಂದಿರಬಾರದು ಎಂಬುದನ್ನು ದಯವಿಟ್ಟು ಗಮನಿಸಿ.

ಪಿಎಂಎವೈ ಸಬ್ಸಿಡಿ ಯೋಜನೆಗೆ ನಿಮ್ಮ ಅರ್ಹತೆಯನ್ನು ನಿಶ್ಚಯಿಸಲು ನಿಮ್ಮ ಕುಟುಂಬದ ವಾರ್ಷಿಕ ಆದಾಯ ಪ್ರಮುಖ ಅಂಶವಾಗುತ್ತದೆ.

ಕುಟುಂಬದ ಆದಾಯದ ಲೆಕ್ಕಾಚಾರ ಹೂಡಿಕೆ, ಉದ್ಯೋಗ ಮತ್ತು ಇತರೆಗಳನ್ನು ಸೇರಿದಂತೆ ಎಲ್ಲಾ ಮೂಲಗಳಿಂದ ಕುಟುಂಬದ ಎಲ್ಲಾ ಸದಸ್ಯರ ಆದಾಯವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ.

ವಿವಿಧ PMAY ಕುಟುಂಬ ವರ್ಗಕ್ಕೆ ಆದಾಯ ಮಾನದಂಡಗಳನ್ನು ಅರ್ಥ ಮಾಡಿಕೊಳ್ಳಲು ಕೆಳಗಿನ ಪಟ್ಟಿಯನ್ನು ಪರಿಶೀಲಿಸಿ:

ಕುಟುಂಬ ವರ್ಗಗಳು ವಾರ್ಷಿಕ ಕುಟುಂಬ ಆದಾಯ
 EWS 3 ಲಕ್ಷ ರೂ.
 LIG 6 ಲಕ್ಷ ರೂ.

ಪಿಎಂಎವೈ  ಅಡಿಯಲ್ಲಿ ಬಡ್ಡಿ ಸಬ್ಸಿಡಿ ಲಾಭ ಪಡೆಯಲು, ನಿಮ್ಮ ಅರ್ಜಿ ಕೆಳಗಿನ ಹಂತಗಳ ಮೂಲಕ ಸಾಗುತ್ತದೆ:

  • ಒಮ್ಮೆ ನಿಮ್ಮ ಗೃಹ ಸಾಲ ವಿತರಣೆಯಾದ ನಂತರ, ನಿಮ್ಮ ಸಾಲ ನೀಡುವವರು ನಿಮ್ಮ ಅರ್ಜಿ ವಿವರಗಳನ್ನು ದೃಢೀಕರಣಕ್ಕಾಗಿ ಕೇಂದ್ರ ನೋಡಲ್‌ ಏಜೆನ್ಸಿ (CNA)ಗೆ ಕಳುಹಿಸುತ್ತಾರೆ.
  • ಅಗತ್ಯ ಪರಿಶೀಲನೆ ನಂತರ, ನೀವು ಅರ್ಹರಾಗಿದ್ದಲ್ಲಿ CNA ಸಬ್ಸಿಡಿಯನ್ನು ಅಂಗೀಕರಿಸುತ್ತದೆ
  • ನಿಮಗೆ ಸಾಲ ನೀಡುವವರಿಗೆ ಸಬ್ಸಿಡಿಯನ್ನು ಬಿಡುಗಡೆ ಮಾಡಲಾಗುತ್ತದೆ
  • ನಿಮಗೆ ಸಾಲ ನೀಡುವವರು ಈಗ  ಅದೇ ಮೊತ್ತನ್ನು ನಿಮ್ಮ ಗೃಹ ಸಾಲ ಖಾತೆಗೆ ಜಮೆ ಮಾಡುತ್ತಾರೆ
  • ಕ್ರಮವಾಗಿ ಸಬ್ಸಿಡಿಯನ್ನು ಸಾಲದಲ್ಲಿ ಹೊಂದಾಣಿಕೆ ಮಾಡಲಾಗುತ್ತದೆ

ನಿಮ್ಮ ಗೃಹ ಸಾಲ ಖಾತೆಗೆ ಸಬ್ಸಿಡಿ ದೊರೆತ ನಂತರ, ನೀವು ನಿಮ್ಮ ಸಾಲದ ಖಾತೆಯ ಹೇಳಿಕೆಯನ್ನು ಪರಿಶೀಲಿಸಬಹುದು. ಜೊತೆಗೆ, ಸಬ್ಸಿಡಿ ಸ್ವೀಕರಿಸಿದ ನಂತರ, ನಿಮ್ಮ EMI ಮೊತ್ತ ಕೂಡ ಹಿಂದಿಗಿಂತ ಕಡಿಮೆಯಾಗುತ್ತದೆ.