ಸ್ಥೂಲನೋಟ-ಸ್ವಯಂ-ಉದ್ಯೋಗಿಗಳಿಗೆ ಗೃಹ ಸಾಲ

ಈ ಹಿಂದೆ ನಿಮಗೆ  ಸಮರ್ಪಕ ಆದಾಯ ದಾಖಲೆಗಳ ಕೊರತೆಯಿಂದ ಗೃಹ ಸಾಲ ಪಡೆಯಲು ಕಷ್ಟವಾ ಗಿದ್ದರೆ ಅಥವಾ ನಿಮ್ಮ ವ್ಯವಹಾರದ ಕಾರಣದಿಂದ ಸಂಸ್ಥೆ ನಿಮಗೆ ಸಾಲ ನೀಡಲು ನಿರಾಕರಿಸಿದ್ದರೆ, ನೀವು ಏಕಾಂಗಿಯಲ್ಲ. ನಿಮಗೆ ಸಾಲದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸಂಕೀರ್ಣವೆನಿಸಿದರೆ, ನಿಮ್ಮ ಹಾದಿಯ ಪ್ರತಿ ಹಂತದಲ್ಲೂ ನೆರವು ನೀಡಲು ನಾವು ಇಲ್ಲಿದ್ದೇವೆ. ಸರಿಯಾದ ಬೆಂಬಲದೊಂದಿಗೆ, ಗೃಹ ಸಾಲ ಪಡೆಯುವುದು ತ್ವರಿತ, ಸುಲಭ ಮತ್ತು ಕೊಡುಗೆ ನೀಡುವ ಅನುಭವವಾಗಬಹುದು.

ನಮ್ಮ ಗೃಹ ಸಾಲವನ್ನು ನಿಮ್ಮ ಮನಸ್ಸಿನಂತೆಯೇ ವಿನ್ಯಾಸಗೊಳಿಸಲಾಗಿದೆ. ನಾವು ಸುಲಭ ಅರ್ಹತೆಯ ಮಾನದಂಡಗಳನ್ನು ನೀಡುತ್ತೇವೆ ಮತ್ತು ಕೆಲವೇ ಕೆಲವು ಅಗತ್ಯ ದಾಖಲೆಗಳನ್ನು ಕೇಳುತ್ತೇವೆ. ನಮ್ಮ 135+ ICICI HFC ಶಾಖೆಗಳಲ್ಲಿ ಪೈಕಿ ಪ್ರತಿಯೊಂದರಲ್ಲಿ ಕಾನೂನು ಮತ್ತು ತಾಂತ್ರಿಕ ತಜ್ಞರ ತಂಡವಿದೆ ಮತ್ತು ಅವರು ಸ್ಥಳದಲ್ಲಿಯೇ ನಿಮ್ಮ ಅರ್ಜಿಯನ್ನು ಪರಿಶೀಲಿಸುವುದರಿಂದ ನೀವು 72 ಗಂಟೆಗಳಿಗೂ ಕಡಿಮೆ ಅವದಿಯಲ್ಲಿ ಗೃಹ ಸಾಲ ಪಡೆಯುಬಹುದು.

ನಿಮ್ಮ ಮತ್ತು ಸ್ವಂತ ಮನೆ ಹೊಂದುವ ನಿಮ್ಮ ಕನಸಿನ ನಡುವೆ ಯಾವುದೂ ಅಡ್ಡ ಬರಬಾರದು. ಸಾಲ ವಿತರಿಸಿದ ನಂತರವೂ ನಿಮಗೆ ನೆರವು ನೀಡಲು ನಾವು ಇಲ್ಲಿದ್ದೇವೆ- ಅದು ಮರುಪಾವತಿ ವೇಳೆ ಇರಬಹುದು ಅಥವಾ ಭವಿಷ್ಯದಲ್ಲಿ ನಿಮಗೆ ಯಾವುದೇ ರೀತಿಯ ಹಣದ ನೆರವು ಬೇಕಾದಾಗ ಇರಬಹುದು.

ಪ್ರಮುಖ ಅಂಶಗಳು ಮತ್ತು ಪ್ರಯೋಜನಗಳು - ಸ್ವಯಂ ಉದ್ಯೋಗಿಗಳಿಗೆ ಗೃಹ ಸಾಲ

ಕೈಗೆಟುಕುವ ಗೃಹ ಸಾಲದ ಪ್ರಯೋಜನಗಳು

ICICI HFCನ ಕೈಗೆಟಕುವ ಗೃಹ ಸಾಲ, ಅಪ್ನಾ ಘರ್‌, ಪ್ರಧಾನ ಮಂತ್ರಿ ಆವಾಸ್‌ ಯೋಜನೆ (PMAY) ಅಡಿಯ ಗೃಹ ಸಾಲಗಳ ಮೇಲೆ 2.67 ಲಕ್ಷ ರೂ.ಗಳವರೆಗೆ ಸಬ್ಸಿಡಿ ಲಾಭ ಒದಗಿಸುತ್ತದೆ. ಅಪ್ನಾ ಘರ್‌ ಇತರ ಗೃಹ ಸಾಲಗಳಂತಲ್ಲ ಮತ್ತು ವೇತನದಾರರು ಹಾಗೂ ವೇತನ ರಹಿತ ವ್ಯಕ್ತಿಗಳಿಗೆ, ಔಪಚಾರಿಕ ಆದಾಯ ದಾಖಲೆಗಳನ್ನು ವ್ಯವಸ್ಥೆ ಮಾಡಲಾಗದವರಿಗೆ ಕೂಡ ದೊರೆಯುತ್ತದೆ.

ಎಲ್ಲಾ ಗೃಹ ಮಾಲೀಕತ್ವದ ಆಕಾಂಕ್ಷಿಗಳಿಗೆ ಸಾಲಗಳು

ನಮ್ಮ ಗೃಹ ಸಾಲ ಸರ್ಕಾರಿ ಉದ್ಯೋಗಿಗಳು ಮತ್ತು ಕಾರ್ಪೊರೇಟ್‌ ವೃತ್ತಿಪರರಂತಹ ವೇತನದಾರ ವ್ಯಕ್ತಿಗಳಿಗೆ ನೆರವಾಗುತ್ತದೆ; ಜೊತೆಗೆ ವೈದ್ಯರು, ವಕೀಲರು, CA, ವ್ಯಾಪಾರಿಗಳು ಮತ್ತು ಸಣ್ಣ ವ್ಯವಹಾರ ಮಾಲೀಕರಂತಹ ಸ್ವಯಂ ಉದ್ಯೋಗಿಗಳಿಗೆ ಕೂಡ. ಸ್ವಂತ ಮನೆಯನ್ನು ಹೊಂದುವ ನಿಮ್ಮ ಕನಸಿಗೆ ನಾವು ಬದ್ಧರಾಗಿದ್ದೇವೆ.

ಸುಲಭದ ಅರ್ಹತೆ

ನಮ್ಮ ಬದಲಾಯಿಸಬಲ್ಲ ಅರ್ಹತಾ ಮಾನದಂಡಗಳು ಮತ್ತು ಅಗತ್ಯ ದಾಖಲೆಗಳ ಅಗತ್ಯತೆಯಿಂದ ICICI HFCನಲ್ಲಿ ಗೃಹ ಸಾಲ ಪಡೆಯುವುದು ತ್ವರಿತವಾಗಿದೆ. ನಿಮ್ಮ ಬಳಿ ITRನಂತಹ ಔಪಚಾರಿಕ ಆದಾಯ ದಾಖಲೆಯಿಲ್ಲದಿದ್ದಲ್ಲಿ ಕೂಡ, ಈ ಹಿಂದೆ ಸಾಲವನ್ನು ಮರುಪಾವತಿಸಿದ ಉತ್ತಮ ಇತಿಹಾಸ ಹೊಂದಿದ್ದರೆ, ನಮ್ಮ ಸ್ಥಳೀಯ ತಜ್ಞರು ನಿಮಗೆ ಅಗತ್ಯವಿರುವ ಬೆಂಬಲ ನೀಡುತ್ತಾರೆ.

ಸಲಹೆ: ನಿಮ್ಮ ಅರ್ಹತೆಯನ್ನು ಹೆಚ್ಚಿಸಲು, ನೀವು ನಿಮ್ಮ ಸಂಗಾತಿ ಅಥವಾ ತಕ್ಷಣದ ಕುಟುಂಬ ಸದಸ್ಯರಂತಹ ಸಹ-ಅರ್ಜಿದಾರರನ್ನು ಕೂಡ ಸೇರಿಸಬಹುದು

ತ್ವರಿತ ಸಾಲ ವಿತರಣೆ

ನೀವು 72 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಗೃಹ ಸಾಲ ಪಡೆಯಬಹುದು. ನಮ್ಮ 135+ ICICI HFC ಶಾಖೆಗಳಲ್ಲಿ ಪೈಕಿ ಪ್ರತಿಯೊಂದರಲ್ಲಿ ಕಾನೂನು ಮತ್ತು ತಾಂತ್ರಿಕ ತಜ್ಞರ ತಂಡವಿದೆ ಮತತ್ತು ಅವರು ಸ್ಥಳದಲ್ಲಿಯೇ ನಿಮ್ಮ ಅರ್ಜಿಯನ್ನು ಪರಿಶೀಲಿಸುವುದರಿಂದ ಪದೇ ಪದೇ ಭೇಟಿ ನೀಡುವುದು ಅಥವಾ ದಾಖಲೆಗಳಿಗೆ ಬೇಡಿಕೆ ಇಡುವ ಪ್ರಸಂಗ ಬರುವುದಿಲ್ಲ.

3 ಲಕ್ಷ ರೂ.ಗಳಿಂದ 5 ಕೋಟಿ ರೂ.ಗಳವರೆಗೆ ಗೃಹ ಸಾಲಗಳು

ನಿಮಗೆ ದೊಡ್ಡ ಅಥವಾ ಸಣ್ಣ ನೆರವಿನ ಅಗತ್ಯವಿರಬಹುದು: ನಾವು ಎಲ್ಲದಕ್ಕೂ ಹಣಕಾಸಿನ ನೆರವು ನೀಡುತ್ತೇವೆ. ಕೆಳಗಿನ ಎಲ್ಲದಕ್ಕೂ ನೀವು ಗೃಹ ಸಾಲ ಪಡೆಯುಬಹುದು:

  • ನಿರ್ಮಾಣ ಹಂತದಲ್ಲಿರುವ ಆಸ್ತಿ, ಸ್ವಾಧೀನಕ್ಕೆ-ಸಿದ್ಧವಾಗಿರುವ ಆಸ್ತಿ ಅಥವಾ ಬಿಲ್ಡರ್‌ ಆಸ್ತಿ
  • ಹೊಸ ಆಸ್ತಿ ಅಥವಾ ಮರುಮಾರಾಟದ ಆಸ್ತಿ
  • DDAಮತ್ತು MHADA/ಅಸ್ತಿತ್ವದಲ್ಲಿರುವ ಸಹಕಾರ ಗೃಹ ನಿರ್ಮಾಣ ಸೊಸೈಟಿ/ಅಪಾರ್ಟ್ಮೆಂಟ್ ಮಾಲೀಕರ ಸಂಘ/ಅಭಿವೃದ್ಧಿ ಪ್ರಾಧಿಕಾರಗಳು/ಖಾಸಗಿ ಡೆವಲಪರ್‌ಗಳ ಮನೆಗಳಂತಹ  ರಾಜ್ಯ ರಾಜ್ಯ ಗೃಹ ನಿರ್ಮಾಣ ಮಂಡಳಿಯ ಆಸ್ತಿ.
  • ನಗರಗಳು, ಅಧಿಕೃತ ಕಾಲೋನಿಗಳು ಮತ್ತು ಗ್ರಾಮ ಪಂಚಾಯಿತಿ ಆಸ್ತಿಗಳ ಆಸ್ತಿಗಳಿಗೆ
  • ಬಹು-ಘಟಕ ಅಥವಾ ಸ್ವಯಂ-ನಿರ್ಮಿತ ಆಸ್ತಿ ಅಥವಾ ನಿಮ್ಮ ಮಾಲೀಕತ್ವದ ಜಾಗದಲ್ಲಿ ಮನೆಯನ್ನು ನಿರ್ಮಿಸಲು ಅಥವಾ ವಸತಿ ಆಸ್ತಿಗೆ ಮರು ಹಣಕಾಸಿನ ನೆರವು ನೀಡಲು ಕೂಡ
  • ಉಚಿತ/ಗುತ್ತಿಗೆಯ ಜಾಗ ಅಥವಾ ಅಭಿವೃದ್ಧಿ ಪ್ರಾಧಿಕಾರದಿಂದ ಮಂಜೂರಾಗಿರುವ ಆಸ್ತಿಯಲ್ಲಿ ನಿರ್ಮಾಣಕ್ಕಾಗಿ

ICICI HFCಗೆ ಬದಲಾಗಿ

ಕಳೆದ 2-3 ವರ್ಷಗಳಿಂದ ವಾರ್ಷಿಕ ಶೇಕಡಾ 11ಕ್ಕಿಂತ ಹೆಚ್ಚು ಬಡ್ಡಿದರದಲ್ಲಿ ಗೃಹ ಸಾಲವನ್ನು ಮರುಪಾವತಿಸುತ್ತಿದ್ದರೆ. ನಿಮ್ಮ ಗೃಹ ಸಾಲದ ಬಡ್ಡಿ ದರ ಕನಿಷ್ಠ 50 ಬೇಸಿಸ್‌ ಅಂಕಗಳಷ್ಟು ಹೆಚ್ಚಿದೆ, ಆದ್ದರಿಂದ EMI ಹೊರೆ ಕಡಿಮೆಗೊಳಿಸಲು, ಸ್ಪರ್ಧಾತ್ಮಕ ಬಡ್ಡಿ ದರಗಳನ್ನು ಆನಂದಿಸಲು ಮತ್ತು ನಮ್ಮ ತಜ್ಞರಿಂದ ಅವಿಭಜಿತ ಗಮನ ಪಡೆಯಲು ಬ್ಯಾಲೆನ್ಸ್‌ ಟ್ರಾನ್ಸ್ಫರ್‌ ಫೆಸಿಲಿಟಿ ಮೂಲಕ ICICI HFC ಗೃಹ ಸಾಲಕ್ಕೆ ಬದಲಾಗಿ.

ಅರ್ಹತೆ-ಸ್ವಯಂ ಉದ್ಯೋಗಿಗಳಿಗೆ ಗೃಹ ಸಾಲ

ಸ್ವಯಂ-ಉದ್ಯೋಗಸ್ಥರು

  • ವಯಸ್ಸಿನ ಮಿತಿ (ಪ್ರಾಥಮಿಕ ಅರ್ಜಿದಾರ)

28ರಿಂದ 70 ವರ್ಷಗಳು (ನೀವು 70 ವರ್ಷ ತಲುಪುವ ಮುನ್ನದ ಅವಧಿ ಅಥವಾ ನಿಮ್ಮ ನಿವೃತ್ತಿ ವಯಸ್ಸು, ಎರಡರಲ್ಲೂ ಯಾವುದು ಮೊದಲೋ ಅದನ್ನು ಆಯ್ಕೆ ಮಾಡಿ. ಇದು ನೀವು ನಿವೃತ್ತಿ ನಂತರ ಪಾವತಿಸುವ ಅಗತ್ಯವಿಲ್ಲ ಎಂಬುದನ್ನು ಖಾತರಿಪಡಿಸುತ್ತದೆ)

  • ಸಹ-ಮಾಲೀಕತ್ವದ ಆಸ್ತಿ

ನಿಮ್ಮ ಆಸ್ತಿಯಲ್ಲಿ ಒಬ್ಬರಿಗಿಂತ ಹೆಚ್ಚು ಮಾಲೀಕರಿದ್ದರೆ, ಇಬ್ಬರೂ ಅಥವಾ ಎಲ್ಲಾ ಸಹ-ಮಾಲೀಕರು ಸಹ-ಅರ್ಜಿದಾರರಾಗುವ ಅಗತ್ಯವಿದೆ. ಇದು ನಿಮ್ಮ ಆಸ್ತಿ ಸುರಕ್ಷಿತವಾಗಿದೆ ಮತ್ತು ಎರಡೂ ಮಾಲೀಕರು ಆಸ್ತಿಯ ಮೇಲಿನ ಹೂಡಿಕೆಯಿಂದ ಲಾಭ ಪಡೆಯಬಹುದು ಎಂಬುದನ್ನು ಖಾತರಿಪಡಿಸುತ್ತದೆ.

ಸಹ-ಅರ್ಜಿದಾರ

  • ಕನಿಷ್ಠ ವಯಸ್ಸು

18ರಿಂದ 65 ವರ್ಷಗಳು

  • ನೀವು ಸಹ-ಅರ್ಜಿದಾರರನ್ನು ಏಕೆ ಸೇರಿಸಬೇಕು?

  • ನೀವು ನಿಮ್ಮ ಗೃಹ ಸಾಲದ ಅರ್ಹತೆಯನ್ನು ಹೆಚ್ಚಿಸಲು ಬಯಸಿದಲ್ಲಿ, ನೀವು ಓರ್ವ ಸಹ-ಅರ್ಜಿದಾರರನ್ನು ಸೇರಿಸಬಹುದು, ಅವರು ಗಳಿಸುತ್ತಿಲ್ಲವಾದರೂ ಕೂಡ. ಇದು ನಿಮಗೆ ದೊಡ್ಡ ಮಟ್ಟದ ಗೃಹ ಸಾಲಕ್ಕೆ ಅರ್ಹರಾಗಲು ನೆರವಾಗಬಹುದು. ನಿಮ್ಮ ಸಹ-ಅರ್ಜಿದಾರರರು ನಿಮ್ಮ ಸಂಗಾತಿ ಅಥವಾ ತಕ್ಷಣದ ಕುಟುಂಬ ಸದಸ್ಯರಾಗಿರಬಹುದು.

  • ಏಕೆಂದರೆ, ಮಹಿಳೆಯರನ್ನು ಸಹ-ಅರ್ಜಿದಾರರನ್ನಾಗಿ ಅರ್ಜಿ ಸಲ್ಲಿಸಲು ಪ್ರೋತ್ಸಾಹಿಸುವ ಸಲುವಾಗಿ ICICI HFC ಮಹಿಳೆಯರಿಗೆ ಉತ್ತಮ ಬಡ್ಡಿ ದರ ಒದಗಿಸುತ್ತದೆ.

ಸ್ವಯಂ ಉದ್ಯೋಗಿಗಳಳಿಗೆ ಗೃಹ ಸಾಲ-ಅರ್ಹತೆಯ ಕ್ಯಾಲ್ಕುಲೇಟರ್

ನಿಮ್ಮ ಗೃಹ ಸಾಲ ಅರ್ಹತಾ ಕ್ಯಾಲ್ಕುಲೇಟರ್‌ ಮೂಲಕ ನೀವು ಅರ್ಹರಾಗಿರುವ ಗೃಹ ಸಾಲದ ಮೊತ್ತವನ್ನು ಕಂಡುಕೊಳ್ಳಿ

ನಾವು ನಿಮಗೆ ಪೂರ್ಣಗೊಳಿಸಲು ಸುಲಭವಾಗುವಂತಹ ಬದಲಿಸಬಲ್ಲ ಅರ್ಹತಾ ಮಾನದಂಡಗಳನ್ನು ಹೊಂದಿದ್ದೇವೆ. ನಿಮ್ಮ ಆದಾಯ, ಆಸ್ತಿ ಮತ್ತು ಅಸ್ತಿತ್ವದಲ್ಲಿರುವ EMIಗಳಂತಹ ಅಂಶಗಳನ್ನು ಪರಿಗಣಿಸಿ, ನಮ್ಮ ಗೃಹ ಸಾಲ ಅರ್ಹತಾ ಕ್ಯಾಲ್ಕುಲೇಟರ್ ನೀವು ಅರ್ಹರಾಗಿರುವ ಸಾಲದ ಮೊತ್ತವನ್ನು ಲೆಕ್ಕಾಚಾರ ಹಾಕಲು ನೆರವಾಗುತ್ತದೆ. ಈ ಕ್ಯಾಲ್ಕುಲೇಟರ್‌ ನಿಮಗೆ ಸಾಲ ಮರುಪಾವತಿಗೆ ಸುಲಭ ಹಾಗೂ ಅನುಕೂಲಕರ ಅವಧಿ ಗುರುತಿಸಲು ಕೂಡ ನೆರವಾಗುತ್ತದೆ. 

ಹೋಮ್ ಲೋನ್ನ ಮೊತ್ತ
Thirty Thousand
Gross Monthly Income
Thirty Thousand
EMIs being Paid for Existing Loan
Thirty Thousand
ಸಾಲದ ಅವಧಿ (ತಿಂಗಳುಗಳು)
1 years 4 months
Months
ಬಡ್ಡಿ ದರ (p.a)
%

You are eligible for loan of

0

ನಿಮ್ಮ ಇಎಂಐ

0

ಕೆಳಗೆ ವಿವರಗಳನ್ನು ಭರ್ತಿ ಮಾಡಿ


Enter Your Full Name
Enter Your Mobile Number
Enter Loan Amount
Enter Email Id
Select Your City

Please accept the terms & conditions

ಸ್ವಯಂ- ಉದ್ಯೋಗಕ್ಕೆ ಗೃಹ ಸಾಲ ಪಡೆಯಲು ಅಗತ್ಯವಿರುವ ದಾಖಲೆಗಳು

ಈ ದಾಖಲೆಗಳನ್ನು ಸಲ್ಲಿಸಿರಿ ಮತ್ತು ಹಲವು ಭಾರಿಯ ಭೇಟಿಯ ಅಗತ್ಯವಿಲ್ಲದೆ 72 ಗಂಟೆಗಳಿಗೂ ಕಡಿಮೆ ಅವಧಿಯಲ್ಲಿ ನಿಮ್ಮ ಸಾಲದ ಮಂಜೂರಾತಿ ಪಡೆಯಿರಿ.

ಸ್ವಯಂ-ಉದ್ಯೋಗಸ್ಥ ವ್ಯಕ್ತಿಗಳು

  • ನೀವು ಸಹಿ ಹಾಕಿರುವ ಸಂಪೂರ್ಣ ಭರ್ತಿ ಮಾಡಿರುವ ಅರ್ಜಿ
  • PAN ಕಾರ್ಡ್‌, ಮತಗುರುತಿನ ಚೀಟಿ, ಆಧಾರ್‌ ಇತ್ಯಾದಿಯಂತಹ ಗುರುತಿನ ಹಾಗೂ ವಸತಿ ದಾಖಲೆ (KYC)
  • 2 ಆದಾಯ ರಿಟರ್ನ್ಸ್‌, ಇತ್ತೀಚಿನ ಎರಡು ವರ್ಷಗಳ P&L ಖಾತೆಗಳು ಮತ್ತು B/S (ವಿವರ ಗಳೊಂದಿಗೆ), ಆರು ತಿಂಗಳ ಬ್ಯಾಂಕ್‌ ಹೇಳಿಕೆ ಇತ್ಯಾದಿಯಂತಹ ಆದಾಯ ದಾಖಲೆಗಳು.
  • ಆಸ್ತಿ ದಾಖಲೆಗಳು (ನೀವು ಆಸ್ತಿಯನ್ನು ಅಂತಿಮಗೊಳಿಸದಿದ್ದಲ್ಲಿ)

ಸ್ವಯಂ ಉದ್ಯೋಗಸ್ಥ ವ್ಯಕ್ತಿಗಳಲ್ಲದವರು

  • ನೀವು ಸಹಿ ಹಾಕಿರುವ ಸಂಪೂರ್ಣ ಭರ್ತಿ ಮಾಡಿರುವ ಅರ್ಜಿ
  • PAN ಕಾರ್ಡ್‌, GST ನೋಂದಣಿ, AOA, ಕಂಪನಿಯ MOA ‌ ಇತ್ಯಾದಿಯಂತಹ ಗುರುತಿನ ಹಾಗೂ ವಸತಿ ದಾಖಲೆ (KYC)
  • 2 ಆದಾಯ ರಿಟರ್ನ್ಸ್‌, ಇತ್ತೀಚಿನ ಎರಡು ವರ್ಷಗಳ P&L ಖಾತೆಗಳು ಮತ್ತು B/S (ವಿವರ ಗಳೊಂದಿಗೆ), ಆರು ತಿಂಗಳ ಬ್ಯಾಂಕ್‌ ಹೇಳಿಕೆ ಇತ್ಯಾದಿಯಂತಹ ಆದಾಯ ದಾಖಲೆಗಳು.
  • ಆಸ್ತಿ ದಾಖಲೆಗಳು (ನೀವು ಆಸ್ತಿಯನ್ನು ಅಂತಿಮಗೊಳಿಸದಿದ್ದಲ್ಲಿ)

ಸ್ವಯಂ-ಉದ್ಯೋಗಸ್ಥರಿಗೆ ಗೃಹ ಸಾಲಕ್ಕಾಗಿ ದರಗಳು ಮತ್ತು ಶುಲ್ಕಗಳು

ನಾವು ನಮ್ಮ ಶುಲ್ಕಗಳು ಮತ್ತು ದರಗಳ ಕುರಿತು ಪಾರದರ್ಶಕವಾಗಿರಲು ಆದ್ಯತೆ ನಿಡುತ್ತೇವೆ.

ದರಗಳು ದರಗಳು*
ಲಾಗಿನ್‌ ಶುಲ್ಕ (KYC ಪರಿಶೀಲನೆಗಾಗಿ)

5,000 ರೂ.

ಪ್ರಕ್ರಿಯೆ/ಆಡಳಿತಾತ್ಮಕ ಶುಲ್ಕಗಳು (ಮಂಜೂರಾತಿ ಸಮಯದಲ್ಲಿ ವಿಧಿಸಲಾಗುತ್ತದೆ) ಸಾಲದ ಮೊತ್ತದ ಶೇಕಡಾ 0.75 ಅತವಾ 11,000, ಯಾವುದು ಜಾಸ್ತಿಯೋ ಅದು

ಪೂರ್ವ ಪಾವತಿಯ ದರಗಳು (ವ್ಯಕ್ತಿಗಳಲ್ಲದವರಿಗೆ ಮಾತ್ರ ಅನ್ವಯ)

ನೀವು ನಿಮ್ಮ ಗೃಹ ಸಾಲದ ಭಾಗ ಅಥವಾ ಎಲ್ಲವನ್ನೂ ಮರುಪಾವತಿ ಮಾಡಲು ಸಾಧ್ಯವಾದಲ್ಲಿ, ನೀವು ಎಲ್ಲವನ್ನು ಅಥವಾ ಭಾಗವನ್ನು ಇತ್ಯರ್ಥ ಮಾಡಿಕೊಳ್ಳಬಹುದು.

ಅನೂಕೂಲತೆ, ನಿಮ್ಮ ಆಯ್ಕೆಯ ಅವಧಿ ಯಾವುದೇ ಆಗಿದ್ದರೂ. ನಾವು ಪೂರ್ವ ಪಾವತಿಗೆ ಶೇ.0-2ರಷ್ಟು ಕನಿಷ್ಠ ದರ ಪಡೆಯುತ್ತೇವೆ.

* ಮೇಲೆ ಉಲ್ಲೇಖಿಸಿದ ಮೊತ್ತಗಳು ಮತ್ತು ಶೇಕಡಾವಾರುಗಳು  ತೆರಿಗೆಗಳು ಮತ್ತು ಅದರ ಶಾಸನಬದ್ಧ ರಿಯಾಯ್ತಿಗಳಿಂದ ಹೊರತಾಗಿದ್ದು,
* ಅಂತಹ ಮೊತ್ತಗಳು ಇದ್ದಲ್ಲಿ ಅದು ಸಂಬಂಧಿಸಿದ ಹಣಕಾಸು ವರ್ಷದ ಅವಧಿಯ ಎಲ್ಲಾ ಪೂರ್ವ ಪಾವತಿಯ ಮೊತ್ತಗಳನ್ನು ಒಳಗೊಂಡಿರಲಿದೆ.
#ಪ್ರಸ್ತುತ ದರದ ಅನುಸಾರ ಅನ್ವಯವಾಗುವ #ಸರಕು ಮತ್ತು ಸೇವಾ ತೆರಿಗೆ (GST) ಮತ್ತು ಇತರ ಸರ್ಕಾರಿ ತೆರಿಗೆಗಳು, ವಿನಾಯ್ತಿಗಳು ಇತ್ಯಾದಿಗಳನ್ನು ಈ ದರಗಳ ನಂತರ ಮತ್ತು ಮೇಲೆ ವಿಧಿಸಲಾಗುತ್ತದೆ

ಹಕ್ಕುತ್ಯಾಗ:

  • ಇಲ್ಲಿ ಮೇಲೆ ಸೂಚಿಸಿದಂತೆ, ದರಗಳು, ಶುಲ್ಕಗಳು ICICI ಹೋಂ ಫೈನಾನ್ಸ್‌ ನ ಏಕ ಮಾತ್ರ ವಿವೇಚನೆಯ ಅನುಸಾರ ಕಾಲಕಾಲಕ್ಕೆ ಬದಲಾವಣೆ/ಪರಿಷ್ಕರಣೆಗೆ ಲಭ್ಯವಾಗಿರುತ್ತವೆ.
  • ಜೊತೆಗೆ,ಈ ದರಗಳ ಜೊತೆಗೆ ಅಥವಾ ಮೇಲೆ ಪ್ರಸ್ತುತ ದರದ ಅನುಸಾರ GST ಮತ್ತು ಇತರ ತೆರಿಗೆಗಳು ಮತ್ತು ರಿಯಾಯ್ತಿಗಳು ಅನ್ವಯವಾಗಲಿವೆ.
  • ICICI ಹೋಮ್ ಫೈನಾನ್ಸ್‌ ಮೇಲಿನ ಏರಿಳಿತದ ಬಡ್ಡಿ ದರವನ್ನು ICICI ಹೋಮ್ ಫೈನಾನ್ಸ್‌ ಪ್ರೈಮ್‌ ಲೆಂಡಿಂಗ್‌ ರೇಟ್‌ (IHPLR)ಗೆ ಸಂಪರ್ಕಿಸಲಾಗುತ್ತದೆ.
  • ಈ ಲೆಕ್ಕಾಚಾರವನ್ನು ಮಾರ್ಗದರ್ಶನದ ಉದ್ದೇಶಕ್ಕೆ ಮಾತ್ರ ಬಳಸಬೇಕು, ಅದು ಒಂದು ಕೊಡುಗೆಯಲ್ಲ ಮತ್ತು ಅದರ ಫಲಿತಾಂಶ ಹಲವು ವಾಸ್ತವಾಂಶಗಳ ಬದಲಾವಣೆಗೆ ಕಾರಣವಾಗಬಹುದು.

 

eNACH Mandate Registration Process - In 5 Easy Steps!

 

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ನೀವು ಮನೆಯಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದ ಕ್ಷಣವೇ ನೀವು ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಅಂದರೆ ನೀವು ಆಸ್ತಿಯನ್ನು ಅಂತಿಮಗೊಳಿಸುವ ಮುನ್ನ ಕೂಡ. ಆದಾಗ್ಯೂ, ಪ್ರಕ್ರಿಯೆಯನ್ನು ಆರಂಭಿಸಲು ನೀವು ಕೆಲ ಆಸ್ತಿ ದಾಖಲೆಗಳನ್ನು ಹೊಂದಿರುವುದು ಅಗತ್ಯ. ದಾಖಲೆಗಳ ಪಟ್ಟಿಗೆ ನೀವು ವಿಭಿನ್ನ ಬಗೆಯ ಆಸ್ತಿಗಳಿಗೆ ಅರ್ಜಿ ಸಲ್ಲಿಸಬೇಕಾಗಬಹುದು:

ನೀವು ಗರಿಷ್ಠ 25 ವರ್ಷಗಳ ಅವಧಿಗೆ ಸಾಲವನ್ನು ಪಡೆಯಬಹುದು. ಆದಾಗ್ಯೂ, ಅವಧಿ 60 (ವೇತನದಾರ ವ್ಯಕ್ತಿಗಳಿಗೆ) ಅಥವಾ 70 ವರ್ಷ ವಯಸ್ಸು (ಸ್ವಯಂ ಉದ್ಯೋಗಸ್ಥ ವ್ಯಕ್ತಿಗಳಿಗೆ) ಅಥವಾ ನಿಮ್ಮ ನಿವೃತ್ತಿ ವಯಸ್ಸು ಮೀರಬಾರದು, ಯಾವುದೋ ಮೊದಲೋ ಅದು. ನಮ್ಮ 135+  ICICI HFC ಶಾಖೆಗಳಲ್ಲಿ ಕಾನೂನು ಮತ್ತು ತಾಂತ್ರಿಕ ತಜ್ಞರ ತಂಡವಿದ್ದು, ಅವು ನಿಮ್ಮೊಂದಿಗೆ ಕುಳಿತು ಅನುಕೂಲಕರ ಮರುಪಾವತಿ ಅವಧಿಯನ್ನು ನಿರ್ಧರಿಸಲು ನೆರವಾಗುತ್ತಾರೆ. ನನ್ನ ಗೃಹ ಸಾಲದ ಮರುಪಾವತಿಯ ಗರಿಷ್ಠ ಅವಧಿ ಎಷ್ಟು.

ನಿಮ್ಮ ಗೃಹ ಸಾಲದ ಬಡ್ಡಿಯನ್ನು ತಿಂಗಳ ಆಧಾರದ ಮೇಲೆ ಪಾವತಿಸಬೇಕು.  ನೀವು EMI ಆಯ್ಕೆಯನ್ನು ಆರಿಸಿಕೊಳ್ಳಬೇಕು, ನೀವು ಅದೇ ಮೊತ್ತವನ್ನು ಪ್ರತಿ ತಿಂಗಳು ಪಾವತಿಸಬೇಕು (EMIಗಳು ಸಮೀಕರಿಸಿದ ಮಾಸಿಕ ಕಂತುಗಳಾಗಿವೆ). ಅಥವಾ, ನೀವು ಆಯ್ಕೆ ಅಥವಾ ಸ್ಟೆಪ್‌ ಅಪ್‌ ಮರುಪಾವತಿ ಸೌಲಭ್ಯವನ್ನು ಆಯ್ಕೆ ಮಾಡಬಹುದು, ಇಲ್ಲಿ ಕೆಲಸ ಸಮಯದ ನಂತರ, ನಿಮ್ಮ ಆದಾಯ ಹೆಚ್ಚಿದಂತೆಲ್ಲಾ ನಿಮ್ಮ ಮಾಸಿಕ ಪಾವತಿ ಹೆಚ್ಚುತ್ತದೆ. ಮೊದಲ ಆಯ್ಕೆ , ಸಮಯಾನಂತರ ನಿಮ್ಮ ಆದಾಯ ಹೆಚ್ಚಿದಂತೆಲಾ, ನಿಮ್ಮ ಮಾಸಿಕ ಪಾವತಿ ಮಾಡುವುದನ್ನು ಸುಲಭಗೊಳಿಸುವ ಲಾಭ ಹೊಂದಿದೆ. ಎರಡನೇ ಆಯ್ಕೆ, ನಿಮ್ಮ ಆದಾಯ ಹೆಚ್ಚಿದಂತೆಲ್ಲಾ, ನಿಮ್ಮ ಮಾಸಿಕ ಪಾವತಿ ಹೆಚ್ಚಿಸುವ, ಮತ್ತು ಆ ಮೂಲಕ, ನಿಮ್ಮ ಒಟ್ಟು ಅವಧಿಯನ್ನು ಕಡಿಮೆಗೊಳಿಸುವ ಲಾಭ ಹೊಂದಿದೆ.

ನಮ್ಮ ಅರ್ಹತೆಯ ಮಾನದಂಡಗಳು ಬದಲಾಯಿಸುವಂತದ್ದು ಮತ್ತು ಪೂರ್ಣಗೊಳಿಸಲು ಸುಲಭವಾದುದು.ನಮಗೆ ಕಡಿಮೆ ಕಾಗದ ವ್ಯವಹಾರದ ಅಗತ್ಯವಿದೆ ಇದು ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಖಾತರಿ ನೀಡುತ್ತದೆ. ಗೃಹ ಸಾಲ ಅರ್ಹತಾ ಕ್ಯಾಲ್ಕುಲೇಟರ್ಮೂ ಲಕ ನೀವು ಅರ್ಹರೇ ಎಂಬುದನ್ನು ತಕ್ಷಣ ತಿಳಿದುಕೊಳ್ಳಬಹುದು. ಒಂದೊಮ್ಮೆ ನೀವು ಗೃಹ ಸಾಲಕ್ಕೆ ಅರ್ಹರಾಗದಿದ್ದರೆ, ನಿಮ್ಮ ಸನಿಹದ ICICI HFC ಮತ್ತು ICICIಬ್ಯಾಂಕ್‌ ಶಾಖೆಗಳು ನಮ್ಮ ಕಾನೂನು ಮತ್ತು ತಾಂತ್ರಿಕ ತಜ್ಞರ ತಂಡ ನಿಮ್ಮ ಅರ್ಹತೆ ಸುಧಾರಿಸಿಕೊಳ್ಳುವ ಹಲವು ವಿಧಾನಗಳ ಬಗ್ಗೆ ಮಾಹಿತಿ ನೀಡಬಲ್ಲರು, ಆದ್ದರಿಂದ ಇಂದೇ ನಿಮ್ಮ ನೆರವು ಕೇಳಿ.

ನಿಮ್ಮ ಸಹ-ಅರ್ಜಿದಾರರು ನಿಮ್ಮ ಸಂಗಾತಿ ಅಥವಾ ನಿಮ್ಮ ತಕ್ಷಣದ ಕುಟುಂಬ ಸದಸ್ಯರಾಗಬಹುದು. ನಿಮ್ಮ ಸಹ-ಅರ್ಜಿದಾರರು ಕನಿಷ್ಠ 18 ವರ್ಷ ವಯೋಮಾನದವರಾಗಿರಬೇಕು. ನಿಮ್ಮ ಸಹ-ಅರ್ಜಿದಾರರು ಉದ್ಯೋಗಸ್ಥರಾಗಿರುವ ಅಥವಾ ಗಳಿಸುತ್ತಿರುವ ಅಗತ್ಯವಿಲ್ಲ, ಆದ್ದರಿಂದ ನಿಮ್ಮ ಸಂಗಾತಿ ಉದ್ಯೋಗ ಮಾಡುತ್ತಿಲ್ಲವಾದರೂ ಅವರನ್ನು ಸೇರಿಸಬಹುದು. Iಅಸಲಿಗೆ, ಮಹಿಳೆಯನ್ನು ಸಹ-ಅರ್ಜಿದಾರರನ್ನಾಗಿ ಸೇರಿಸುವುದು ನಿಮ್ಮ ಬಡ್ಡಿ ದರ ಇಳಿಕೆಗೆ ನೆರವಾಗಬಹುದು. ನಿಮ್ಮ ಆಸ್ತಿಯಲ್ಲಿ ಒಬ್ಬರಿಗಿಂತ ಹೆಚ್ಚು ಮಾಲೀಕರಿದ್ದರೆ, ಇಬ್ಬರೂ ಅಥವಾ ಎಲ್ಲಾ ಸಹ-ಮಾಲೀಕರು ಸಹ-ಅರ್ಜಿದಾರರಾಗುವ ಅಗತ್ಯವಿದೆ. ಸಹ-ಅರ್ಜಿದಾರರನ್ನು ಸೇರಿಸುವುದು ಹೇಗೆ ಮತ್ತು ಯಾಕೆ ಎಂಬುದನ್ನು ನಮ್ಮ ತಜ್ಞರ ತಂಡದಿಂದ ತಿಳಿಯಲು ಸನಿಹದ ICICI HFC ಅಥವಾ ICICI ಬ್ಯಾಂಕ್‌ ಶಾಖೆಗೆ ಭೇಟಿ ನೀಡಿ.

  • ಗೃಹ ಸಾಲ

ನಾವು ನಿರ್ಮಾಣ ಹಂತದಲ್ಲಿರುವ, ಸ್ವಾಧೀನಕ್ಕೆ ಸಿದ್ಧವಾಗಿರುವ, ಮರುಮಾರಾಟ, ನಿರ್ಮಿಸಬೇಕಿರುವ ಆಸ್ತಿಗೆ ಗೃಹ ಸಾಲ ಒದಗಿಸುತ್ತೇವೆ ಮತ್ತು ವಸತಿ ಮೇಲೆ ಮರುಹಣಕಾಸು ಸೌಲಭ್ಯದಂತಹ ಆಯ್ಕೆಗಳನ್ನು ಕೂಡ ಒದಗಿಸುತ್ತೇವೆ. ನೀವು ಆಸ್ತಿಯನ್ನು ಅಂತಿಮಗೊಳಿಸುವುದಕ್ಕೂ ಮೊದಲು ಕೂಡ ಗೃಹ ಸಾಲ ಪಡೆಯಬಹುದು. ನೀವು ಇನ್ನೂ ಹುಡುಕುತ್ತಿದ್ದರೆ, ನಾವು ನಮ್ಮ 'ಪ್ರಾಪರ್ಟಿ ಸರ್ಚ್‌' ವೈಶಿಷ್ಟ್ಯದ ಮೂಲಕ ನಿಮಗೆ ಸೂಕ್ತ ಮನೆ ಕಂಡುಕೊಳ್ಳಲು ನೆರವಾಗುತ್ತೇವೆ.

  • ಅಪ್ನಾ ಘರ್

ಅಪ್ನಾ ಘರ್, ಇತರ ಗೃಹ ಸಾಲಗಳಲ್ಲಿ ಎಲ್ಲೂ ದೊರೆಯದ, ವಿಭಿನ್ನ ಹಿನ್ನೆಲೆ ಮತ್ತು ಆದಾಯದ ಜನರಿಗೆ ಕೈಗೆಟಕುವ ದರದಲ್ಲಿ ಗೃಹ ಸಾಲ ಒದಗಿಸುತ್ತದೆ ಮತ್ತು ಅದು ಸರ್ಕಾರದ PMAY (ಪ್ರಧಾನಮಂತ್ರಿ ಆವಾಸ್‌ ಯೋಜನೆ)ಯ ವಿಸ್ತರಣೆಯಾಗಿದೆ. ಅಪ್ನಾ ಘರ್‌ ಸುಲಭವಾಗಿ ಪೂರ್ಣಗೊಳಿಸಬಹುದಾದ ಬಹಳ ಹೊಂದಾಣಿಕೆಯ ಅರ್ಹತೆಯ ಮಾನದಂಡಗಳನ್ನು ವಿಧಿಸುತ್ತದೆ.

  • ಭೂಮಿ ಸಾಲ

ನಿಮ್ಮ ಮನೆಯನ್ನು ನಿರ್ಮಿಸುವ ಸಲುವಾಗಿ ವಸತಿ ಭೂಮಿ ಖರೀದಿಗೆ ನೀವು ಭೂಮಿ ಸಾಲ ಪಡೆಯಬಹುದು. ನೀವು ನಿರ್ಮಾಣ 3 ವರ್ಷಗಳಲ್ಲಿ ಪೂರ್ಣಗೊಳ್ಳುತ್ತದೆ ಎಂದು ಭರವಸೆ ನೀಡುವ ಲಿಖಿತ ಹೇಳಿಕೆಗೆ ಸಹಿ ಹಾಕಬೇಕು.

  • ಕಚೇರಿ ಆವರಣ ಸಾಲ

ನೀವು ನಿಮ್ಮ ಕಚೇರಿ ಆವರಣದ ಖರೀದಿ, ನಿರ್ಮಾಣ ಅಥವಾ ವಿಸ್ತರಣೆಗೆ ಈ ಸಾಲ ಪಡೆಯಬಹುದು. your office premises. ಈ ಸಾಲದ ಮೊತ್ತ ಆಸ್ತಿ ಖರೀದಿ ಸಮಯದಲ್ಲಿ ಅದರ ನವೀಕರಣದ ಅಂದಾಜನ್ನು ಕೂಡ ಒಳಗೊಂಡಿರಬಹುದು. ಆದಾಗ್ಯೂ, ಇದು ಕೈಗಾರಿಕೆ/ಸಾಂಸ್ಥಿಕ ಆಸ್ತಿಯನ್ನು ಒಳಗೊಳ್ಳುವುದಿಲ್ಲ. ಉದಾಹರಣೆಗೆ, ಕಾರ್ಖಾನೆಗಳು/ಗೋದಾಮುಗಳು/ಶಾಲೆಗಳು/ಸಂಸ್ಥೆಗಳು/ಕಾಲೇಜುಗಳು/ಆಸ್ಪತ್ರೆಗಳು ಇತ್ಯಾದಿ.

  • ಬ್ಯಾಲೆನ್ಸ್ ಟ್ರಾನ್ಸ್‌ಫರ್

ಕಳೆದ 2-3 ವರ್ಷಗಳಿಂದ ವಾರ್ಷಿಕ ಶೇಕಡಾ 11ಕ್ಕಿಂತ ಹೆಚ್ಚು ಬಡ್ಡಿದರದಲ್ಲಿ ಗೃಹ ಸಾಲವನ್ನು ಮರುಪಾವತಿಸುತ್ತಿದ್ದರೆ. ನಿಮ್ಮ ಮನೆ ಸಾಲದ ಬಡ್ಡಿ ನಮಗಿಂತ ಕನಿಷ್ಠ 50 ಬೇಸಿಸ್ ಪಾಯಿಂಟ್ ಹೆಚ್ಚಿದ್ದರೆ, ನಿಮ್ಮ EMI ಹೊರೆ ತಗ್ಗಿಸಲು, ಸ್ಪರ್ಧಾತ್ಮಕ ಬಡ್ಡಿದರಗಳನ್ನು ಆನಂದಿಸಲು ಮತ್ತು ನಮ್ಮ ತಜ್ಞರಿಂದ ಅವಿಭಜಿತ ಗಮನವನ್ನು ಪಡೆಯಲು ನಮ್ಮ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಸೌಲಭ್ಯದೊಂದಿಗೆ ICICI HFC ಗೆ ಬದಲಾಗಿ.

  • ಟಾಪ್‌-ಅಪ್‌ ಸಾಲ

ನಿಮಗೆ ಮಕ್ಕಳ ಶಿಕ್ಷಣ ಆಥವಾ ವಿವಾಹ, ಗ್ರಾಹಕ ವಸ್ತುಗಳು,ನವೀಕರಣಗಳು ಇತ್ಯಾದಿ ಕಾರಣಗಳಿಗೆ ಹೆಚ್ಚುವರಿ ಹಣಕಾಸಿನ ಬೆಂಬಲ ಬೇಕಿದ್ದಲ್ಲಿ, ನಿಮ್ಮ ಅಸ್ತಿತ್ವದಲ್ಲಿರುವ ಗೃಹ ಸಾಲದ ಭದ್ರತೆಯ ಮೇಲೆ ಅದೇ ಆಸ್ತಿಗೆ ಟಾಪ್‌-ಅಪ್‌ ಸಾಲ ಪಡೆಯಬಹುದು.

  • ಆಸ್ತಿಯ ಮೇಲೆ ಸಾಲ

ನೀವು ಸ್ವಂತ ಆಸ್ತಿ ಹೊಂದಿದ್ದಲ್ಲಿ, ಈ ಆಯ್ಕೆಯೊಂದಿಗೆ, ಆ ಆಸ್ತಿಯ ಮೇಲೆ ನಿಮಗೆ 15 ವರ್ಷಗಳ ಗರಿಷ್ಠ ಅವಧಿಯ ಕಡಿಮೆ ಬಡ್ಡಿ ದರದಲ್ಲಿ ಸಾಲ ದೊರೆಯಬಹುದು.

  • ಆಸ್ತಿ ಮೇಲೆ ಮೈಕ್ರೋ ಸಾಲ

ಮೈಕ್ರೋ LAP 120 ತಿಂಗಳುಗಳಲ್ಲಿ ಮರುಪಾವತಿಸಬಹುದಾದ 3 ಲಕ್ಷ ರೂ.ಗಳಷ್ಟು ಕಡಿಮೆ ಮೊತ್ತದಿಂದ 15 ಲಕ್ಷ ರೂ.ಗಳವರೆಗೆ ಸಾಲ ನೀಡುತ್ತದೆ.

  • ಗುತ್ತಿಗೆ ಬಾಡಿಗೆ ರಿಯಾಯ್ತಿ
ನೀವು ಒಂದು ವಾಣಿಜ್ಯ ಆಸ್ತಿ ಹೊಂದಿದ್ದು, ಅದರಿಂದ ಬಾಡಿಗೆ ಗಳಿಸಲು ನಿರೀಕ್ಷಿಸುತ್ತಿದ್ದರೆ, ನೀವು ಈ ಬಾಡಿಕೆಯನ್ನು ಭದ್ರತೆ ಅಥವಾ ಕೊಲ್ಯಾಟರಲ್‌ ಆಗಿ ಬಳಸಿ, ನಿಮ್ಮ ಮಗುವಿನ ಶಿಕ್ಷಣ ಅಥವಾ ವಿವಾಹದಂತಹ ತ್ವರಿತ ವೈಯಕ್ತಿಕ ಅಗತ್ಯಗಳಿಗೆ ಸಾಲ ಪಡೆಯಬಹುದು.

ಹೌದು, ನಿಮಗೆ ನೆರವಾಗಲು ನಾವು ಯಾವಾಗಲೂ ಮಾರ್ಗ ಹುಡುಕುತ್ತೇವೆ.  ನಾವು ICICI ಪ್ರಾಪರ್ಟಿ ಸರ್ಚ್ ಎಂಬ ಸುಲಭವಾದ ಆನ್‌ಲೈನ್ ಹೋಮ್ ಸರ್ಚ್ ಪೋರ್ಟಲ್ ಅನ್ನು ರಚಿಸಿದ್ದೇವೆ, ಇದು ನಿಮ್ಮ ಮನೆ ಖರೀದಿ ಪ್ರಯಾಣದ ಪ್ರತಿ ಹಂತದಲ್ಲೂ ನಿಮಗೆ ಸಹಾಯ ಮಾಡುತ್ತದೆ. ಈ ಸೌಲಭ್ಯ ನಿಮ್ಮ ಅಗತ್ಯತೆಗಳು ಮತ್ತು ಆದ್ಯತೆಗಳನ್ನು ಆಧರಿಸಿ ತಯಾರಿಸಿದ  ಪರಿಶೀಲಿಸಿದ ಆಸ್ತಿ ಪಟ್ಟಿಯಿಂದ ನಿಮ್ಮ ಕನಸಿನ ಮನೆಯನ್ನು ಕಂಡುಕೊಳ್ಳಲು ನೆರವಾಗುತ್ತದೆ. ನೀವು ಕೊನೆಯಲ್ಲಿ ಅಂತಿಮಗೊಳಿಸುವ ಆಸ್ತಿಗಳಿಗೆ ನಮ್ಮ ಬದ್ಧತೆಯ ಸ್ಥಳೀಯ ಆಸ್ತಿ ತಜ್ಞರೊಂದಿಗೆ  ಭೇಟಿಗೆ ವ್ಯವಸ್ಥೆ ಕೂಡ ಮಾಡುತ್ತೇವೆ.ಮುಂದುವರಿದು, ಆಸ್ತಿ ದರದ ಮಾತುಕತೆ ಮತ್ತು ಕಾನೂನು ದಾಖಲೀಕರಣದಲ್ಲಿ ನಾವು ನಿಮಗೆ ನೆರವು ನೀಡುತ್ತೇವೆ.

ಇದು ಮೊದಲ-ಮಾರಾಟ ಆಸ್ತಿಯಲ್ಲಿ ಒದಗಿಸಲಾಗುತ್ತಿರುವ ಉಚಿತ-ಸೇವೆಯಾಗಿದೆ ಮತ್ತು ಸದ್ಯ ಕೆಳಗಿನ ಒಂಬತ್ತು ನಗರಗಳಲ್ಲಿ ಈ ಸೇವೆ ಲಭ್ಯವಿದೆ:

  1. ಮುಂಬೈ
  2. ದೆಹಲಿ ಎನ್‌ಸಿಆರ್‌
  3. ಚೆನ್ನೈ
  4. ಕೋಲ್ಕತಾ
  5. ಬೆಂಗಳೂರು
  6. ಪುಣೆ
  7. ಲಖನೌ
  8. ಹೈದಾರಾಬಾದ್‌
  9. ಕೊಚ್ಚಿ

ಇಲ್ಲ, IT  ನಿಯಮದ ಪ್ರಕಾರ ಗೃಹ ಸಾಲದಲ್ಲಿ ಒಂದೇ ಪ್ರಮಾಣಪತ್ರ ಒದಗಿಸಲು ಅವಕಾಶವಿರುವುದರಿಂದ ಅರ್ಜಿದಾರ ಮತ್ತು ಸಹ-ಅರ್ಜಿದಾರರ ಹೆಸರಿನಲ್ಲಿ ಒಂದು IT ಪ್ರಮಾಣಪತ್ರ ನೀಡಲಾಗುತ್ತದ.

ಅಂತಿಮ ಪ್ರಮಾಣಪತ್ರವನ್ನು ಪ್ರತಿ ಹಣಕಾಸು ವರ್ಷದ ಅಂತ್ಯದಲ್ಲಿ ಮಂಜೂರು ಮಾಡುವುದರಿಂದ ನೀವು ಏಪ್ರಿಲ್‌ ಅಥವಾ ಮೇ ತಿಂಗಳಲ್ಲಿ IT ಪ್ರಮಾಣಪತ್ರದ ಪ್ರತಿಯನ್ನು ಪಡೆಯುವ ನಿರೀಕ್ಷೆ ಮಾಡಬಹುದು. ಆದಾಗ್ಯೂ, ನೀವು ವರ್ಷದ ಯಾವುದೇ ಸಮಯದಲ್ಲಿ ತಾತ್ಕಾಲಿಕ ಪ್ರಮಾಣಪತ್ರಕ್ಕೆ ಮನವಿ ಮಾಡಬಹುದು.

ನೀವು ಗುರುತಿನ ದಾಖಲೆಯಾಗಿ ಕೆಳಗಿನ ಯಾವುದಾದರು ಒಂದನ್ನು ಒದಗಿಸಬಹುದು:

  • PAN ಕಾರ್ಡ್‌
  • ಪಾಸ್‌ಪೋರ್ಟ್‌
  • ಭಾರತೀಯ ಚುನಾವಣಾ ಆಯೋಗ ನೀಡಿರುವ ಮತದಾರರ ಗುರುತಿನ ಚೀಟಿ
  • ಆಧಾರ್‌ ಕಾರ್ಡ್‌ ಹೊಂದಿರುವ ಸಾಕ್ಷಿ
  • ಚಾಲನಾ ಪರವಾನಗಿ
  • NREGAದಿಂದ ಮಂಜೂರಾದ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಯಿಂದ ಸಹಿ ಹಾಕಲ್ಪಟ್ಟ ಉದ್ಯೋಗ ಗುರುತಿನ ಚೀಟಿ

ನೀವು ಈಗಾಗಲೇ ಗೃಹ ಸಾಲ ಹೊಂದಿದ್ದೀರಿ ಆದರೆ ಉತ್ತಮ ಗ್ರಾಹಕರ ಸೇವೆ, ಉತ್ತಮ ಬಡ್ಡಿ ದರಗಳು ಮತ್ತು ಹೊಂದಾಣಿಕೆಯ ನಿಬಂಧನೆಗಳಿಗೆ ಹುಡುಕುತ್ತಿದ್ದರೆ,  ICICI HFC ಬದಲಾಗುವುದನ್ನು ಪರಿಗಣಿಸಿ. ನಮ್ಮಲ್ಲಿ ಬ್ಯಾಲೆನ್ಸ್‌ ಟ್ರಾನ್ಸ್ಫರ್‌ ಸೌಲಭ್ಯವಿದೆ ಅದು ನಿಮಗೆ ನಿಮ್ಮ ಗೃಹ ಸಾಲವನ್ನು ಕನಿಷ್ಠ ಪ್ರಯತ್ನ ಹಾಗೂ ಸಮಯದಲ್ಲಿ ICICI HFCಗೆ ವರ್ಗಾಯಿಸಲು ಅನುವು ಮಾಡಿಕೊಡುತ್ತದೆ. ಭಾರತೀಯ ನಿವಾಸಿಗಳಾದ ವೇತನದಾರರು ಮತ್ತು ಸ್ವಯಂ-ಉದ್ಯೋಗಿಗಳಿಗೆ ಬ್ಯಾಲೆನ್ಸ್‌ ಟ್ರಾನ್ಸ್ಫರ್‌ ಸೌಲಭ್ಯ ಲಭ್ಯವಿದೆ. 

ಹೌದು, ಹೆಚ್ಚಿನ ವಿವರಗಳಿಗಾಗಿ ನಮ್ಮ ಭೂಮಿ ಸಾಲ ಪುಟಕ್ಕೆ ಭೇಟಿ ನೀಡಿ

ನಿಮ್ಮ ICICI HFC ಸನಿಹದ ಶಾಖೆಗೆ ಭೇಟಿ ನೀಡುವುದರ ಪ್ರಮುಖ ಲಾಭವೆಂದರೆ ವಿಶೇಷ ಕೊಡುಗೆಗಳು. ನೀವು ನಮ್ಮ ಶಾಖೆಯಲ್ಲಿ ವಿಶೇಷ ಶ್ರೇಣಿಯ ಕೊಡುಗೆಗಳನ್ನು ಆನಂದಿಸುವಿರಿ. ದಿನದ ವಿಶೇಷ ಕೊಡುಗೆ ಕಂಡುಕೊಳ್ಳಲು ಭೇಟಿ ನೀಡಿ.ದಿನದ ವಿಶೇಷ ಕೊಡುಗೆ ಕಂಡುಕೊಳ್ಳಲು ಭೇಟಿ ನೀಡಿ.