ವೇತನದಾರರಿಗೆ ಕೈಗೆಟಕುವ ದರದಲ್ಲಿ ಗೃಹ ಸಾಲ ಯೋಜನೆ-ಸ್ಥೂಲನೋಟ

ಕೈಗೆಟಕುವ ದರದಲ್ಲಿ ಗೃಹ ಸಾಲ ಯೋಜನೆ, ನೀವು ಇದುವರೆಗೆ ನೋಡಿರುವ ಯಾವುದೇ ಇತರ ಗೃಹ ಸಾಲಕ್ಕಿಂತ ಭಿನ್ನವಾಗಿದೆ. ನೀವು ಸಣ್ಣ ಮತ್ತು ಮಧ್ಯಮ ಉದ್ಯಮ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ಅಥವಾ ಕೌಟುಂಬಿಕ ವ್ಯವಹಾರದಲ್ಲಿ ಉದ್ಯೋಗಿಯಾಗಿದ್ದರೆ ಅಥವಾ ಮಾಲೀಕತ್ವ ಅಥವಾ LLP ಆಗಿರಲಿ;ನೀವು  ನಿರ್ಮಾಣ ಘಟಕದ ಅಂಗಡಿ ಮಳಿಗೆಯಲ್ಲಿ ಕೆಲಸ ಮಾಡುವಂತಹ ಕಡಿಮೆ ದರ್ಜೆಯ ಕೆಲಸದಲ್ಲಿದ್ದರೆ ಅಥವಾ ಭದ್ರತಾ ಸೇವೆಯ ಫರ್ಮ್‌ನ ಭಾಗವಾಗಿದ್ದರೆ, ಅಪ್ನಾ ಘರ್‌ ಯೋಜನೆ ನಿಮಗಾಗಿ ಇದೆ. ಅಪ್ನಾ ಘರ್‌ ಅನ್ನು ನಿಮ್ಮನ್ನು ಬೆಂಬಲಿಸಲು ನಿರ್ಮಿಸಲಾಗಿದೆ, ಅರ್ಜಿ ಪ್ರಕ್ರಿಯೆಯಿಂದ-ಅರ್ಹತೆಯ ಮಾನದಂಡಗಳಿಂದ-ಮರುಪಾವತಿ ಆಯ್ಕೆಯವರೆಗೆ.

ICICI HFC’s ಅಪ್ನಾ ಘರ್ ಯೋಜನೆ ಪ್ರಧಾನ ಮಂತ್ರಿ ಆವಾಸ್‌ ಯೋಜನೆ (PMAY) ಅಡಿಯ ಗೃಹ ಸಾಲದಲ್ಲಿ 2.67 ಲಕ್ಷ ರೂ.ವರೆಗೆ ಸಬ್ಸಿಡಿ ಲಾಭದ ಕೊಡುಗೆ ನೀಡುತ್ತದೆ. ನಿಮ್ಮ ಕನಸಿನ ಮನೆ ನಿಮ್ಮನ್ನು ಗೇಟೆಡ್‌ ಸಮುದಾಯದಿಂದ ಗ್ರಾಮಪಂಚಾಯಿತಿ ಹಾಗೂ ಅಧಿಕೃತ ಕಾಲೋನಿಗಳಿಗೆ ಕೊಂಡೊಯ್ಯವುದಾದರೆ, ನಾವು ನಿಮ್ಮನ್ನು ಬೆಂಬಲಿಸುತ್ತೇವ. ನಿಮಗೆ ITRನಂತಹ ಅಧಿಕೃತ ಆದಾಯ ದಾಖಲೆಗಳನ್ನು ಹೊಂದಿಸಲಾಗದಿದ್ದರೆ, ನಾವು ನಿಮ್ಮನ್ನು ಬೆಂಬಲಿಸುತ್ತೇವೆ. ನಿಮಗೆ ಈ ಹಿಂದೆ ಗೃಹ ಸಾಲ ಪಡೆಯಲು ಕಷ್ಟವಾಗಿದ್ದರೆ ಅಥವಾ ನಿಮಗೆ ಸಾಲ ದೊರೆಯಬಹುದು ಎಂದು ನೀವು ಎಂದಿಗೂ ನಿಜವಾಗಿಯೂ ನಂಬದಿದ್ದರೆ, ನಾವು ನಿಮ್ಮನ್ನು ಬೆಂಬಲಿಸುತ್ತೇವೆ!

ನಮ್ಮ ಪ್ರತಿ 135+ ಶಾಖೆಗಳಲ್ಲಿ, ನೀವು ನಿಮ್ಮ ಸಾಲ ಪಡೆಯುವ ಪ್ರಕ್ರಿಯೆ ಕುರಿತ ಮನೋಭಾವವನ್ನು ಬದಲಿಸುವ ಸ್ನೇಹಪರ ಹಾಗೂ ಸಹಾಯಹಸ್ತ ಚಾಚುವ ಸ್ಥಳೀಯ ತಜ್ಞರನ್ನು ಕಾಣುತ್ತೀರಿ.

ವೇತನದಾರರಿಗೆ ಕೈಗೆಟಕುವ ದರದಲ್ಲಿ ಗೃಹ ನಿರ್ಮಾಣ ಯೋಜನೆ-ಅಂಶಗಳು ಮತ್ತು ಲಾಭಗಳು

 

ಸುಲಭದ ಅರ್ಹತೆ

ನಮ್ಮ ಬದಲಾಯಿಸಬಲ್ಲ ಅರ್ಹತೆಯ ಮಾನದಂಡಗಳು ಮತ್ತು ಅಗತ್ಯ ದಾಖಲೆಗಳ ಅಗತ್ಯತೆಯಿಂದ ಕೈಗೆಟಕುವ ಗೃಹ ಯೋಜನೆಯಲ್ಲಿ ಸಾಲ ಪಡೆಯುವುದು ತ್ವರಿತವಾಗಿದೆ. ನಿಮ್ಮ ಬಳಿ ITRನಂತಹ ಔಪಚಾರಿಕ ಆದಾಯ ದಾಖಲೆಯಿಲ್ಲದಿದ್ದಲ್ಲಿ ಕೂಡ, ಈ ಹಿಂದೆ ಸಾಲವನ್ನು ಮರುಪಾವತಿಸಿದ ಉತ್ತಮ ಇತಿಹಾಸ ಹೊಂದಿದ್ದರೆ, ನಮ್ಮ ಸ್ಥಳೀಯ ತಜ್ಞರು ನಿಮಗೆ ಅಗತ್ಯವಿರುವ ಬೆಂಬಲ ನೀಡುತ್ತಾರೆ.

ಸಲಹೆ: ನಿಮ್ಮ ಅರ್ಹತೆಯನ್ನು ಹೆಚ್ಚಿಸಲು, ನೀವು ನಿಮ್ಮ ಸಂಗಾತಿ ಅಥವಾ ತಕ್ಷಣದ ಕುಟುಂಬ ಸದಸ್ಯರಂತಹ ಸಹ-ಅರ್ಜಿದಾರರನ್ನು ಕೂಡ ಸೇರಿಸಬಹುದು.

ಎಲ್ಲರಿಗೂ ಸೂರು

ಅಪ್ನಾ ಘರ್‌ ಯೋಜನೆ ಎಲ್ಲಾ ಆದಾಯ ವರ್ಗದ ಗೃಹ ಖರೀದಿದಾರರಿಗೂ ನೆರವಾಗುತ್ತದೆ. ನೀವು ವೇತನದಾರ ವ್ಯಕ್ತಿ, ಕಿರಾಣಿ ಅಂಗಡಿ ಮಾಲೀಕ, ಕ್ಷೌರಿಕ, ಗುಜರಿ ಅಂಗಡಿ ಮಾಲೀಕ, ಅಥವಾ ಕಳೆದ ಕೆಲ ವರ್ಷಗಳಿಂದ ನಡೆಸುತ್ತಿರುವ ಯಾವುದೇ ಸ್ವಂತ ವ್ಯವಹಾರ ಹೊಂದಿದ್ದಲ್ಲಿ, ಅಪ್ನಾ ಘರ್‌ ನಿಮಗೆ ಮನೆಯ ಮಾಲೀಕರಾಗುವ ಅವಕಾಶ ಒದಗಿಸಬಲ್ಲದು.

ತ್ವರಿತ ಸಾಲ ವಿತರಣೆ

ನಮ್ಮ 135+ ICICI HFC ಶಾಖೆಗಳಲ್ಲಿ ನಿಮಗೆ ಮಾರ್ಗದರ್ಶನ ನೀಡಲು ಕಾನೂನು ಮತ್ತು ತಾಂತ್ರಿಕ ತಜ್ಞರ ತಂಡವನ್ನು ಹೊಂದಿರುವುದರಿಂದ ನಿಮ್ಮ ಸಾಲ ವಿತರಣೆಗೆ ಕೇವಲ 72 ಗಂಟೆಗಳಷ್ಟು ಸಣ್ಣ ಅವಧಿ ತೆಗೆದುಕೊಳ್ಳುತ್ತದೆ. ನಮ್ಮ ತಜ್ಞರು ನಿಮ್ಮ ಅರ್ಜಿಗಳನ್ನು ಸ್ಥಳದಲ್ಲಿಯೇ ಪರಿಶೀಲಿಸಬಲ್ಲರು ಮತ್ತು ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಮುಖತಃ ಉತ್ತರಿಸಬಲ್ಲರು, ಇದರಿಂದ ನೀವು ಪದೇ ಪದೇ ಭೇಟಿ ನೀಡುವ ಅಗತ್ಯವಿರುವುದಿಲ್ಲ.

ICICI HFCಗೆ ಬದಲಾಗಿ

ಈಗಾಗಲೇ ವಾರ್ಷಿಕ ಶೇ.11ಕ್ಕಿಂತ ಹೆಚ್ಚಿನ ಬಡ್ಡಿದರದಲ್ಲಿ ಕಳೆದ 2-3 ವರ್ಷಗಳಿಂದ ಕಡಿಮೆ-ಆದಾಯದ ಗೃಹ ಸಾಲವನ್ನು ಮರುಪಾವತಿಸುತ್ತಿದ್ದರೆ.ನಿಮ್ಮ ಮನೆ ಸಾಲದ ಬಡ್ಡಿ ನಮಗಿಂತ ಕನಿಷ್ಠ 50 ಬೇಸಿಸ್ ಪಾಯಿಂಟ್ ಹೆಚ್ಚಿದ್ದರೆ, ನಿಮ್ಮ EMI ಹೊರೆ ತಗ್ಗಿಸಲು, ಸ್ಪರ್ಧಾತ್ಮಕ ಬಡ್ಡಿದರಗಳನ್ನು ಆನಂದಿಸಲು ಮತ್ತು ನಮ್ಮ ತಜ್ಞರಿಂದ ಅವಿಭಜಿತ ಗಮನವನ್ನು ಪಡೆಯಲು ನಮ್ಮ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಸೌಲಭ್ಯದೊಂದಿಗೆ ICICI HFCಗೆ ಬದಲಿಸಿ.

ವಿವಿಧ ಹಂತಗಳಲ್ಲಿ ಮನೆಗಳು

ನೀವು ಮಹಾನಗರದ ಹೃದಯಭಾಗದಲ್ಲಿ ಅಥವಾ ಅದರ ಹೊರಭಾಗದಲ್ಲಿ ವಾಸಿಸುತ್ತಿದ್ದರೂ, ನಿಮ್ಮ ಉದ್ಯೋಗದ ವಿವರ, ನಿಮ್ಮ ಆಯ್ಕೆಯ ಆಸ್ತಿ, ಮತ್ತು ಅದರ ಸ್ಥಳದ ಆಧಾರದ ಮೇಲೆ 20 ಲಕ್ಷ ರೂ. ವರೆಗೆ (ವೇತನದಾರರು) ಅಥವಾ 50 ಲಕ್ಷ ರೂ.ವರೆಗೆ (ಸ್ವಯಂ ಉದ್ಯೋಗಸ್ಥರು) ಗೃಹ ಸಾಲ ಯೋಜನೆ ಪಡೆಯಬಹುದು. ನೀವು ಸ್ವಯಂ ನಿರ್ಮಿತ ಆಸ್ತಿ ಅಥವಾ ನಿಮ್ಮ ಮಾಲೀಕತ್ವದ ಭೂಮಿಯ ಮೇಲೆ ಮನೆ ನಿರ್ಮಿಸಲು ಅಥವಾ ಅಧಿಕೃತ ಕಾಲೋನಿಗಳು ಮತ್ತು ಗ್ರಾಮಪಂಚಾಯಿತಿಯಲ್ಲಿ ವಸತಿ ಆಸ್ತಿಗೆ ಮರುಹಣಕಾಸಿನ ನೆರವಿಗಾಗಿ ಕೈಗೆಟಕುವ ಗೃಹ ನಿರ್ಮಾಣ ಯೋಜನೆಯ ಲಾಭ ಪಡೆಯಬಹುದು.

ವೇತನದಾರರಿಗೆ ಕೈಗೆಟಕುವ ದರದ ಅಪ್ನಾ ಘರ್ ವಸತಿ ಯೋಜನೆ-ಅರ್ಹತೆಯ ಮಾನದಂಡ

  • ರಾಷ್ಟ್ರೀಯತೆ

ಭಾರತೀಯ, ಭಾರತದಲ್ಲಿ ನೆಲೆಸಿರುವ

  • ವಯಸ್ಸು

ಕನಿಷ್ಠ 25 ವರ್ಷಗಳಿಂದ ಗರಿಷ್ಠ. 60 ವರ್ಷಗಳು (ನೀವು 60 ವಯೋಮಾನದವರಾಗುವ ಮುನ್ನ ಅಥವಾ ನಿಮ್ಮ ನಿವೃತ್ತಿ ವಯಸ್ಸು, ಯಾವುದು ಮೊದಲೋ ಅದಕ್ಕಿಂತ ಮುಂಚಿನ ಅವಧಿಯನ್ನುಆಯ್ಕೆ ಮಾಡಿ. ಅದು ನೀವು ನಿವೃತ್ತಿಯಾದ ನಂತರ EMI ಗಳನ್ನು ಪಾವತಿಸಬೇಕಿಲ್ಲ ಎಂಬುದನ್ನು ಖಾತರಿಪಡಿಸುತ್ತದೆ

  • ಅರ್ಹ ಉದ್ಯೋಗ ಪ್ರೊಫೈಲ್‌ಗಳು

ಮಾಲೀಕತ್ವ, ಪಾಲುದಾರಿಕೆ, LLP ಅಥವಾ ಖಾಸಗಿ ಅಥವಾ ಸಾರ್ವಜನಿಕ ವಲಯದ ಕಂಪನಿಗಳು, MNCಗಳೊಂದಿಗೆ ಕೆಲಸ ಮಾಡುವ ಜನರು

  • ಬಡ್ಡಿ ದರ

ನೀವು ನಿಮ್ಮ ಸ್ವಂತ ಮನೆಯನ್ನು ಹೊಂದಬಹುದು ಎಂಬುದನ್ನು ಖಾತರಿಪಡಿಸಲು ನಾವು ಬದ್ಧರಾಗಿದ್ದೇವೆ. ನಮ್ಮ ಪ್ರಸ್ತುತ ಗೃಹ ಸಾಲದ ಬಡ್ಡಿ ದರ ವಾರ್ಷಿಕ ಶೇಕಡಾ 11.50ರಿಂದ ಮೇಲ್ಪಟ್ಟು (ನಗದು ವೇತನದ ಪಡೆಯುವವರಿಗೆ ವಾರ್ಷಿಕ ಶೇಕಡಾ 14ರಿಂದ ಮೇಲ್ಪಟ್ಟು)

  • ಸಹ-ಮಾಲೀಕತ್ವದ ಆಸ್ತಿ

ಮಹಿಳೆಯರನ್ನು ಸಹ-ಅರ್ಜಿದಾರರನ್ನಾಗಿ ಅರ್ಜಿ ಸಲ್ಲಿಸಲು ಉತ್ತೇಜಿಸುವ ಸಲುವಾಗಿ ICICI HFC ಉತ್ತಮ ಬಡ್ಡಿ ದರವನ್ನು ಒದಗಿಸುತ್ತದೆ. ನೀವು ನಿಮ್ಮ ಪತ್ನಿ ಅಥವಾ ತಾಯಿಯನ್ನು ನಿಮ್ಮ ಗೃಹ ಸಾಲ ಯೋಜನೆಗೆ ಸೇರಿಸಿದರೆ, ಅವರು ಸಂಪಾದಿಸುತ್ತಿಲ್ಲವಾದರೂ, ನೀವು ಕಡಿಮೆ ಬಡ್ಡಿ ದರ ಪಡೆಯಲು ಸಾಧ್ಯವಾಗಬಹುದು.

ಸಹ-ಅರ್ಜಿದಾರ

  • ವಯಸ್ಸು

18ರಿಂದ 80 ವರ್ಷಗಳು

  • ನೀವು ಸಹ-ಅರ್ಜಿದಾರರನ್ನು ಏಕೆ ಸೇರಿಸಬೇಕು?

  • ನೀವು ನಿಮ್ಮ ಗೃಹ ಸಾಲದ ಅರ್ಹತೆಯನ್ನು ಹೆಚ್ಚಿಸಿಕೊಳ್ಳಬೇಕಿದ್ದಲ್ಲಿ, ನೀವು ಸಹ-ಅರ್ಜಿದಾರರನ್ನು ಸೇರಿಸಬಹುದು, ಅವರು ಸಂಪಾದಿಸುತ್ತಿಲ್ಲವಾದರೂ ಕೂಡ. ಇದು ನಿಮಗೆ ದೊಡ್ಡ ಮಟ್ಟದ ಗೃಹ ಸಾಲಕ್ಕೆ ಅರ್ಹರಾಗಲು ನೆರವಾಗಬಹುದು. ನಿಮ್ಮ ಸಹ-ಅರ್ಜಿದಾರರರು ನಿಮ್ಮ ಸಂಗಾತಿ ಅಥವಾ ತಕ್ಷಣದ ಕುಟುಂಬ ಸದಸ್ಯರಾಗಿರಬಹುದು.

  • ಮಹಿಳಾ ಸಹ-ಅರ್ಜಿದಾರರು ಗೃಹ ಸಾಲದ ಮೇಲೆ ಕಡಿಮೆ ಬಡ್ಡಿ ದರ ಪಡೆಯಬಹುದು.

ICICI HFC ಇಂದ ಅಪ್ನಾ ಘರ್‌ PMAY ಯೋಜನೆಯನ್ನು ಏಕೆ ಪಡೆಯಬೇಕು?

ಅಪ್ನಾ ಘರ್ ಇದುವರೆಗೆ ಸಾಲವನ್ನು ಪಡೆಯದ ಅಥವಾ ಸಾಲವನ್ನು ಮರುಪಾವತಿ ಮಾಡುವ ಉತ್ತಮ ಇತಿಹಾಸ ಹೊಂದಿರುವ ಆದರೆ ಔಪಚಾರಿಕ ದಾಖಲೆಗಳನ್ನು ಹೊಂದಿರದ ಜನರಿಗೆ ಮೊದಲ ರೀತಿಯ ಹೋಮ್ ಲೋನ್ ಆಗಿದೆ. ಅಪ್ನಾ ಘರ್ ನಂತಹ ಉತ್ಪನ್ನಗಳನ್ನು ನಾವು ಸುಲಭವಾದ ಅರ್ಹತೆಯ ಮಾನದಂಡಗಳೊಂದಿಗೆ ನಿರ್ಮಿಸುತ್ತೇವೆ ಏಕೆಂದರೆ ನಿಮ್ಮ ಸ್ವಂತ ಮನೆ ಎಂಬ ಕನಸಿನೊಂದಿಗೆ ನಾವಿದ್ದೇವೆ.

ನೀವು 72 ಗಂಟೆಗಳಲ್ಲಿ ಸಾಲ ಪಡೆಯಬಹುದು. ನಮ್ಮ 135+ ICICI HFC ಶಾಖೆಗಳಲ್ಲಿ ಕಾನೂನು ಮತ್ತು ತಾಂತ್ರಿಕ ತಜ್ಞರ ತಂಡವು ಹಾಜರಾಗಿದ್ದು, ಅವರು ನಿಮ್ಮ ಸಾಲದ ಅರ್ಜಿಯನ್ನು ದಾಖಲೆಗಳಿಗಾಗಿ ಪದೇ ಪದೇ ವಿನಂತಿಸದೆ ಸ್ಥಳದಲ್ಲೇ ಪರಿಶೀಲಿಸುತ್ತಾರೆ. ನಿಮ್ಮ ಸಾಲ ಪ್ರಕ್ರಿಯೆಯನ್ನು ಪ್ರಾರಂಭಿಸಲು ನೀವು ನಿಮ್ಮ ಹತ್ತಿರದ ICICI ಬ್ಯಾಂಕ್ ಶಾಖೆಗೆ ಹೋಗಬಹುದು.

ನಿಮ್ಮ ಹತ್ತಿರದ ICICI HFC ಗೆ ಭೇಟಿ ನೀಡುವ ಒಂದು ಪ್ರಮುಖ ಪ್ರಯೋಜನವೆಂದರೆ ವಿಶೇಷ ಕೊಡುಗೆಗಳು. ನಮ್ಮ ಆಂತರಿಕ ತಜ್ಞರು ಪ್ರತಿಯೊಂದು ಕೊಡುಗೆಗಳ ಪ್ರಯೋಜನಗಳ ಮೂಲಕ ನಿಮಗೆ ಮಾರ್ಗದರ್ಶನ ನೀಡುತ್ತಾರೆ, ಆದ್ದರಿಂದ ನಿಮಗೆ ನಿಜವಾಗಿಯೂ ಸಹಾಯ ಮಾಡುವಂತಹದನ್ನು ನೀವು ಕಾಣಬಹುದು. ಡೀಲ್ಸ್ ಆ ದಿ ಡೇ ಬಗ್ಗೆ ಅರಿಯಲು ಭೇಟಿ ನೀಡಿ.

ನಿಮ್ಮ ಮನೆ ಖರೀದಿ ಪ್ರಯಾಣದ ಪ್ರತಿ ಹಂತದಲ್ಲೂ ನಮ್ಮ ಸ್ಥಳೀಯ ತಜ್ಞರು ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಅವರು ನಿಮ್ಮ ಭಾಷೆಯನ್ನು ಮಾತನಾಡುತ್ತಾರೆ ಮತ್ತು ನಿಮ್ಮ ಸ್ಥಳವನ್ನು ತಿಳಿದಿದ್ದಾರೆ. ನಿಮಗೆ ಅಗತ್ಯವಿರುವ ಹಣಕಾಸಿನ ನೆರವು ಪಡೆಯಲು ಅವರು ಬದ್ಧರಾಗಿದ್ದಾರೆ. ನಿಮಗೆ ಹತ್ತಿರವಿರುವ ಶಾಖೆಯನ್ನು ಹುಡುಕಿ ಮತ್ತು ಸ್ನೇಹಪರ ವ್ಯಕ್ತಿಯನ್ನು ಪರಿಚಯ ಮಾಡಿಕೊಳ್ಳಿ.

ನೀವು ನಮ್ಮಿಂದ ಸಾಲ ಪಡೆದಾಗ, ನೀವು ICICI HFC ಕುಟುಂಬದ ಭಾಗವಾಗುತ್ತೀರಿ. ICICI HFCಯ ಪ್ರಸ್ತುತ ಗ್ರಾಹಕರಾಗಿ, ನಿಮ್ಮ ಅರ್ಜಿಯನ್ನು ತ್ವರಿತವಾಗಿ ಪರಿಶೀಲಿಸಬಹುದು, ಏಕೆಂದರೆ ಅನೇಕ ಪರಿಶೀಲನೆಗಳನ್ನು ಈಗಾಗಲೇ ಮಾಡಲಾಗಿದೆ, ಮತ್ತು ದಾಖಲೆಗಳು ಈಗಾಗಲೇ ನಮ್ಮ ಸಿಸ್ಟಂನಲ್ಲಿವೆ. ನಿಮಗೆ ಇಂದು ಹೋಮ್ ಲೋನ್, ನಾಳೆ ಗೋಲ್ಡ್ ಲೋನ್ ಅಥವಾ ನಿಮ್ಮ ಉಳಿತಾಯವನ್ನು ಹೆಚ್ಚಿಸಲು ಎಫ್‌ಡಿ ಬೇಕಾದರೆ ಅದರಲ್ಲೂ ನಾವು ನಿಮಗೆ ಸಹಾಯ ಮಾಡಬಹುದು.

ಎಲ್ಲಿ ಅರ್ಜಿ ಸಲ್ಲಿಸಬೇಕು

ನೆರವಿಗಾಗಿ ನಮ್ಮ ಯಾವುದೇ ICICI HFC ಶಾಖೆಗೆ ಭೇಟಿ ನೀಡಿ. ನಮ್ಮ ನೆರೆಯ ತಜ್ಞರು ನಿಮಗೆ ತ್ವರಿತ ಹಾಗೂ ಸುಲಭ ಗೃಹ ಸಾಲ ಅರ್ಜಿ ಪ್ರಕ್ರಿಯೆಯಲ್ಲಿ ಹಾಗೂ 72 ಗಂಟೆಗಳಿಗೂ ಕಡಿಮೆ ಅವಧಿಯಲ್ಲಿ ನಿಮ್ಮ ಸಾಲ ವಿತರಣೆಗೆ ನೆರವು ನೀಡಬಹುದು. ನಿಮ್ಮ ಹತ್ತಿರದ ICICI HFC ಶಾಖೆಯನ್ನು ಸಂಪರ್ಕಿಸಿ. ನಿಮ್ಮ ಸಮೀಪದಲ್ಲಿ ICICI HFC ಶಾಖೆಯಿಲ್ಲದಿದ್ದರೆ, ನಿಮ್ಮ ಹತ್ತಿರದ ICICI HFC ಶಾಖೆಗೆ ಭೇಟಿ ನೀಡಿ ಮತ್ತು ನಿಮ್ಮ ಸಾಲದ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಆರಂಭಿಸಿ.

ನೀವು 1800 267 4455 ಸಂಖ್ಯೆಗೆ ಕೂಡ ಕರೆ ಮಾಡಬಹುದು.

ವೇತನದಾರರಿಗೆ ಕೈಗೆಟಕುವ ಗೃಹ ಸಾಲ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

 

  1. ಅಗತ್ಯ ದಾಖಲೆಗಳೊಂದಿಗೆ ನಿಮ್ಮ ಅರ್ಜಿ ನಮೂನೆಯನ್ನು ಸಲ್ಲಿಸಲು 10 ನಿಮಿಷಗಳ ಸಮಯ ತೆಗೆದುಕೊಳ್ಳಿ
  2. KYC ಪರಿಶೀಲನೆಗಳನ್ನು ನಡೆಸಲು 3000 ರೂ.+GST @18%  (ಮರುಪಾವತಿ ಮಾಡಲಾಗದು) ಲಾಗಿನ್‌ ಶುಲ್ಕ ಪಾವತಿಸಿ
  3. ನಿಮ್ಮ ಅಸ್ತಿತ್ವದಲ್ಲಿರುವ EMIಗಳು, ವಯಸ್ಸು, ಆದಾಯ ಮತ್ತು ಆಸ್ತಿಯನ್ನು ಅಧ್ಯಯನ ಮಾಡುವ ನಮ್ಮ ತಜ್ಞರ ತಂಡದಿಂದ ನಿಮ್ಮ ಸಾಲದ ಅರ್ಜಿಯನ್ನು ತ್ವರಿತವಾಗಿ ಪರಿಶೀಲನೆಗೊಳಪಡಿಸಿ.
  4. ಪ್ರತಿ ICICI HFC ಶಾಖೆಯಲ್ಲಿ ಇರುವ ತಜ್ಞರ ತಂಡದಿಂದ ಸಾಲದ ಮೊತ್ತದ ಅನುಮೋದನೆ ಹಾಗೂ ಮಂಜೂರಾತಿ ಪಡೆಯಿರಿ
  5. ನಿಮ್ಮ ಸಾಲದ ಮೊತ್ತದ ಶೇಕಡಾ 1ರಷ್ಟು ಮೊತ್ತ ಅಥವಾ 11,000+ GST @18% ಯಾವುದೋ ಅಧಿಕವೋ ಆ ಪ್ರಕ್ರಿಯೆಯ ಮೊತ್ತವನ್ನು ಪಾವತಿಸಿ
  6. ನಿಮ್ಮ ಆಸ್ತಿಯಲ್ಲಿನ ನಿರ್ಮಾಣದ ಹಂತವನ್ನು ಆಧರಿಸಿ ಅನುಮೋದಿತ ಸಾಲದ ಮೊತ್ತವನ್ನು ವಿತರಿಸಲಾಗುತ್ತದದೆ

ನೀವು ಈಗಲೂ ಪರಿಪೂರ್ಣ ಮನೆ ಹುಡುಕುತ್ತಿದ್ದರೆ, ನಿಮ್ಮ ಬಜೆಟ್‌ಗೆ ಹೊಂದಿಕೆಯಾಗುವ ಮನೆಯನ್ನು ಹುಡುಕಲು ನೀವು ನಮ್ಮ ಈಸಿ-ಟು-ಯೂಸ್‌ ಆಸ್ತಿಯ ಶೋಧ ಪೋರ್ಟಲ್‌ ಬಳಸಬಹುದು.

 

PMAY ಸಬ್ಸಿಡಿ ಕ್ಯಾಲ್ಕುಲೇಟರ್

ನೀವು ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಗೆ ಅರ್ಹರೇ ಮತ್ತು  ಎಷ್ಟು ಸಬ್ಸಿಡಿ ಪಡೆಯಬಹುದು ಎಂಬುದನ್ನು ಸಬ್ಸಿಡಿ ಕ್ಯಾಲ್ಕುಲೇಟರ್‌ ಇಂದ ಕಂಡುಕೊಳ್ಳಿ

ನೀವು ಸರ್ಕಾರದಿಂದ ಯಾವುದೇ ವಸತಿ ಯೋಜನೆಯಡಿಯಲ್ಲಿ ಕೇಂದ್ರ ಸಹಾಯ ಅಥವಾ PMAY ಅಡಿಯಲ್ಲಿ ಯಾವುದೇ ಪ್ರಯೋಜನವನ್ನು ಪಡೆದಿದ್ದೀರಾ?
ಇದು ನಿಮ್ಮ ಮೊದಲ ಪಕ್ಕಾ ಮನೆಯೇ?
ಕುಟುಂಬದ ಒಟ್ಟು ವಾರ್ಷಿಕ ಆದಾಯವನ್ನು ನಮೂದಿಸಿ
Thirty Thousand
ಸಾಲದ ಮೊತ್ತ
Ten Lakhs
ಸಾಲದ ಅವಧಿಯನ್ನು ನಮೂದಿಸಿ
8 year's and 1 month
Months

PMAY Subsidy Amount

0


ಸಬ್ಸಿಡಿ ವಿಭಾಗ

EWS/LIG

ಇಎಂಐನಲ್ಲಿ ನಿವ್ವಳ ಕಡಿತ

Net Reduction value

Fill Details Below

Enter Your Full Name
Enter Your Mobile Number
Enter Loan Amount
Enter Email Id
Select Your City
Please accept the terms & conditions

ವೇತನದಾರರಿಗೆ ಅಪ್ನಾ ಘರ್‌ ಪಡೆಯಲು ಅಗತ್ಯವಿರುವ ದಾಖಲೆಗಳು

ಈ ದಾಖಲೆಗಳನ್ನು ಸಲ್ಲಿಸಿ ಮತ್ತು ಪದೇ ಪದೇ ಭೇಟಿ ನೀಡುವ ಅಗತ್ಯವಿಲ್ಲದೆ 72 ಗಂಟೆಗಳ ಸ್ವಲ್ಪ ಸಮಯದಲ್ಲೇ ನಿಮ್ಮ ಸಾಲದ ಮಂಜೂರಾತಿ ಪಡೆದುಕೊಳ್ಳಿ

  • ನೀವು ಸಹಿ ಹಾಕಿರುವ ಸಂಪೂರ್ಣ ಭರ್ತಿ ಮಾಡಿರುವ ಅರ್ಜಿ
  • ಆಧಾರ್‌ ಕಾರ್ಡ್‌, PAN ಕಾರ್ಡ್‌, ಮತಗುರುತಿನ ಪತ್ರ, NREGA ಮಂಜೂರು ಮಾಡಿರುವ ಉದ್ಯೋಗ ಚೀಟಿ ಇತ್ಯಾದಿಯಂತಹ ಗುರುತಿನ ಹಾಗೂ ವಸತಿ ದಾಖಲೆ(KYC)
  • 2 ತಿಂಗಳ ವೇತನ ಚೀಟಿ, ಇತ್ತೀಚಿನ ಫಾರ್ಮ್ 16, ಮತ್ತು ಮೂರು ತಿಂಗಳ ಬ್ಯಾಂಕ್‌ ಹೇಳಿಕೆಯಂತಹ ಆದಾಯ ದಾಖಲೆ
  • ಆಸ್ತಿ ದಾಖಲೆಗಳು (ನೀವು ಆಸ್ತಿಯನ್ನು ಅಂತಿಮಗೊಳಿಸದಿದ್ದರೆ)

ವೇತನದಾರರರ ಅಪ್ನಾ ಘರ್‌ ಕೈಗೆಟಕುವ ವಸತಿ ಯೋಜನೆಯ ಶುಲ್ಕ ಮತ್ತು ದರಗಳು

ನಾವು ನಮ್ಮ ಶುಲ್ಕಗಳು ಮತ್ತು ದರಗಳ ಕುರಿತು ಪಾರದರ್ಶಕವಾಗಿರಲು ಆದ್ಯತೆ ನಿಡುತ್ತೇವೆ.

ದರಗಳು ದರಗಳು*
ಉಚಿತ ಲಾಗಿನ್ (KYC ಪರಿಶೀಲನೆ ಮತ್ತು ಇತರ ದಾಖಲೆಗಳು) 3000 ರೂ. + 18% GST*
ಪ್ರಕ್ರಿಯೆ/ಆಡಳಿತಾತ್ಮಕ ಶುಲ್ಕಗಳು (ಮಂಜೂರಾತಿ ಸಮಯದಲ್ಲಿ ವಿಧಿಸಲಾಗುತ್ತದೆ) ಸಾಲದ ಮೊತ್ತದ ಶೇಕಡಾ 1 ಅಥವಾ, 11,000, ಯಾವುದೂ ಹೆಚ್ಚೋ ಅದು + GST @18%*
ಪೂರ್ವ ಪಾವತಿಯ ದರಗಳು

ನೀವು ನಿಮ್ಮ ಗೃಹ ಸಾಲದ ಭಾಗಶಃ ಅಥವಾ ಎಲ್ಲವನ್ನೂ ಮರುಪಾವತಿ ಮಾಡಲು ಸಾಧ್ಯವಾದಲ್ಲಿ, ನೀವು ಸಂಪೂರ್ಣವಾಗಿ ಅಥವಾ ಭಾಗಶಃ ಇತ್ಯರ್ಥ ಮಾಡಿಕೊಳ್ಳಬಹುದು.


ಅನುಕೂಲಕ್ಕೆ ತಕ್ಕಂತೆ, ನಿಮ್ಮ ಆಯ್ಕೆಯ ಅವಧಿ ಯಾವುದೇ ಇರಲಿ.*#

* ಮೇಲೆ ಉಲ್ಲೇಖಿಸಿದ ಮೊತ್ತುಗಳು ಮತ್ತು ಶೇಕಡಾವಾರುಗಳು  ತೆರಿಗೆಗಳು ಮತ್ತು ಅದರ ಶಾಸನಬದ್ಧ ರಿಯಾಯ್ತಿಗಳಿಂದ ಹೊರತಾಗಿದ್ದು, ಅಂತಹ ಮೊತ್ತಗಳು ಇದ್ದಲ್ಲಿ ಅದು ಸಂಬಂಧಿಸಿದ ಹಣಕಾಸು ವರ್ಷದ ಅವಧಿಯ ಎಲ್ಲಾ ಪೂರ್ವ ಪಾವತಿಯ ಮೊತ್ತಗಳನ್ನು ಒಳಗೊಂಡಿರಲಿದೆ.

# ಪ್ರಸ್ತುತ ದರದ ಅನುಸಾರ ಅನ್ವಯವಾಗುವ #ಸರಕು ಮತ್ತು ಸೇವಾ ತೆರಿಗೆ (GST) ಮತ್ತು ಇತರ ಸರ್ಕಾರಿ ತೆರಿಗೆಗಳು, ವಿನಾಯ್ತಿಗಳು ಇತ್ಯಾದಿಗಳನ್ನು ಈ ದರಗಳ ನಂತರ ಮತ್ತು ಮೇಲೆ ವಿಧಿಸಲಾಗುತ್ತದೆ

ಉದ್ಘೋಷಣೆ:

ಇಲ್ಲಿ ಮೇಲೆ ಸೂಚಿಸಿದಂತೆ, ದರಗಳು, ಶುಲ್ಕಗಳು ICICI ಹೋಂ ಫೈನಾನ್ಸ್‌ ಕಂಪನಿ ಏಕ ಮಾತ್ರ ವಿವೇಚನೆಯ ಅನುಸಾರ ಕಾಲಕಾಲಕ್ಕೆ ಬದಲಾವಣೆ/ಪರಿಷ್ಕರಣೆಗೆ ಲಭ್ಯವಾಗಿರುತ್ತವೆ.

ICICI ಹೋಮ್ ಫೈನಾನ್ಸ್‌ ಮೇಲಿನ ಏರಿಳಿತದ ಬಡ್ಡಿ ದರವನ್ನು ICICI ಹೋಮ್ ಫೈನಾನ್ಸ್‌ ಪ್ರೈಮ್‌ ಲೆಂಡಿಂಗ್‌ ರೇಟ್(IHPLR)‌ಗೆ ಸಂಪರ್ಕಿಸಲಾಗುತ್ತದೆ. 

ಈ ಲೆಕ್ಕಾಚಾರವನ್ನು ಮಾರ್ಗದರ್ಶನದ ಉದ್ದೇಶಕ್ಕೆ ಮಾತ್ರ ಬಳಸಬೇಕು, ಅದು ಒಂದು ಕೊಡುಗೆಯಲ್ಲ ಮತ್ತು ಅದರ ಫಲಿತಾಂಶ ಹಲವು ವಾಸ್ತವಾಂಶಗಳ ಬದಲಾವಣೆಗೆ ಕಾರಣವಾಗಬಹುದು.

FAQs 

'2022ರ ವೇಳೆ ಪ್ರತಿಯೊಬ್ಬರಿಗೂ ಸೂರು' ಉದ್ದೇಶದೊಂದಿಗೆ ಭಾರತ ಸರ್ಕಾರ ಪ್ರಧಾನ ಮಂತ್ರಿ ಆವಾಸ್‌ ಯೋಜನೆ  (PMAY) ಅಡಿಯಲ್ಲಿ ಕಡಿಮೆ ಆದಾಯವುಳ್ಳ ಜನರಿಗೆ ಮನೆ ಖರೀದಿಸಲು ನೆರವಾಗುವ ಉದ್ದೇಶದಿಂದ ಕೈಗೆಟಕುವ ಅಥವಾ ಕಡಿಮೆ ದರದ ಗೃಹ ಯೋಜನೆಯನ್ನು ಆರಂಭಿಸಿದೆ.

ಕೈಗೆಟಕುವ ದರದ ಗೃಹ ಯೋಜನೆ, ನಗರ ಪ್ರದೇಶದಲ್ಲಿ ಮನೆಯ ಸ್ವಾಧೀನ/ನಿರ್ಮಾಣಕ್ಕೆ ಪಡೆದ ಗೃಹ ಸಾಲದ (ಮರುಖರೀದಿಯನ್ನು ಒಳಗೊಂಡಿದೆ) ಮೇಲೆ ಬಡ್ಡಿಯ ಸಬ್ಸಿಡಿಯನ್ನು ಒಳಗೊಂಡಿದೆ. ಸಬ್ಸಿಡಿ ಲಾಭ ಒಬ್ಬರ ಆದಾಯ ಮತ್ತು ಖರೀದಿಸಲಾಗುತ್ತಿರುವ ಮನೆ/ಆಸ್ತಿಯ ಗಾತ್ರವನ್ನು ಅವಲಂಬಿಸಿರುತ್ತದೆ.

ICICI ಹೋಂ ಫೈನಾನ್ಸ್‌ನಲ್ಲಿ, ನಾವು ವಿಭಿನ್ನ ಜನರು ವಿಭಿನ್ನ ಹಣಕಾಸಿನ ಅಗತ್ಯಗಳು ಹಾಗೂ ಲಾಭಗಳನ್ನು ಹೊಂದಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತೇವೆ.ICICI HFC ಅಪ್ನಾ ಘರ್‌ ಗೃಹ ಸಾಲದೊಂದಿಗೆ, ನೀವು 20 ವರ್ಷಗಳ ಅವಧಿಯನ್ನೂ ಮೀರಿದ ದೀರ್ಘ ಮರುಪಾವತಿಗೆ ಅರ್ಜಿ ಸಲ್ಲಿಸಬಹುದು ಇದು ನಿಮ್ಮ EMI ಹೊರೆಯನ್ನು ಕಡಿಮೆ ಮಾಡುತ್ತದೆ. ಆದಾಗ್ಯೂ, ಸಬ್ಸಿಡಿ ಲಾಭ 20 ವರ್ಷಷಗಳ ಗರಿಷ್ಠ ಅವಧಿಗೆ ನಿರ್ಬಂಧಿತವಾಗಿರುತ್ತದೆ.

ಕೈಗೆಟಕುವ ಗೃಹ ಸಾಲಕ್ಕೆ ಕಡ್ಡಾಯ ಕನಿಷ್ಠ ಡೌನ್‌ಪೇಮೆಂಟ್‌  ಎಂದರೆ ಮನೆ/ಆಸ್ತಿಯ ಒಟ್ಟು ದರದ ಶೇಕಡಾ 20ರಷ್ಟು

ಆದ್ದರಿಂದ, ನೀವು 30 ಲಕ್ಷ ರೂ. ಮೌಲ್ಯದ ಮನೆ ಖರೀದಿಸಲು ಹಾಗೂ ಅದಕ್ಕಾಗಿ ICICI HFC ಅಪ್ನಾ ಘರ್‌ ಗೃಹ ಸಾಲದಲ್ಲಿ ವಿಶೇಷವಾಗಿ ಕೈಗೆಟಕುವ ಗೃಹ ನಿರ್ಮಾಣ ಯೋಜನೆಯಡಿ ವಿನ್ಯಾಸಗೊಳಿಸಲಾದ ಸಾಲ ಪಡೆಯಲು ಬಯಸಿದಲ್ಲಿ, ನೀವು ಕನಿಷ್ಠ 6 ಲಕ್ಷ ರೂ. ಅಂದರೆ, ಮನೆಯ ಒಟ್ಟು ದರದ ಶೇಕಡಾ 20ರಷ್ಟು ಡೌನ್‌ಪೇಮೆಂಟ್‌ ಪಾವತಿಸಬೇಕಾಗುತ್ತದೆ.

ICICI HFC ಅಪ್ನಾ ಘರ್‌ನಂತಹ ಕೈಗೆಟಕುವ ಗೃಹ ಸಾಲವನ್ನು ವಾಸಿಸುವ ಮನೆಯ ಖರೀದಿ/ ನಿರ್ಮಾಣ/ಸುಧಾರಣೆಗಾಗಿ ಖರೀದಿಸಬಹುದು.ಸುಧಾರಣೆಗಳು ಒಂದು ಹೆಚ್ಚುವರಿ ಮಹಡಿಯ ಸೇರ್ಪಡೆ ಅಥವಾ ನಿಮ್ಮ ಅಸ್ತಿತ್ವದಲ್ಲಿರುವ ಮನೆಗೆ ಒಂದು ಶೌಚಾಲಯ ಸೇರಿಸುವಂತಹ ಸೇರಿಸುವಿಕೆಯನ್ನು ಒಳಗೊಂಡಿರಬಹುದು. ಮನೆ/ಆಸ್ತಿಯ ಮರುಖರೀದಿಗೆ ಕೂಡ ಕೈಗೆಟಕುವ ಗೃಹ ಸಾಲದಡಿ ಅನುಮತಿ ನೀಡಬಹುದು.

ICICI HFCಯ ಅಪ್ನಾ ಘರ್‌ ಗೃಹ ಸಾಲ ಕೈಗೆಟಕುವ ಗೃಹ ಹಣಕಾಸಿನ ಆಯ್ಕೆಗಾಗಿ ನೋಡುತ್ತಿರುವ ಗ್ರಾಹಕರಿಗಾಗಿ ಆರಂಭಿಸಲಾಗಿದೆ. ಅಪ್ನಾ ಘರ್‌ ಗೃಹ ಸಾಲದಡಿ ಪಡೆಯಬಹಹುದಾದ ಗರಿಷ್ಠ ಸಾಲದ ಮೊತ್ತವೆಂದರೆ 30 ಲಕ್ಷ ರೂ.

ನೀವು ಆಯ್ದ ಮೆಟ್ರೋ ನಗರಗಳಲ್ಲಿ ಮನೆ ಖರೀದಿ ಮಾಡುತ್ತಿರುವಿರಾದರೆ ಸಾಲದ ಮೊತ್ತ 100 ಲಕ್ಷ ರೂ.ಗಳವರೆಗೆ ಹೋಗಬಹುದು.

ಅಪ್ನಾ ಘರ್‌ ಯೋಜನೆಯನ್ನು ಪ್ರಧಾನ ಮಂತ್ರಿ ಆವಾಸ್‌ ಯೋಜನೆ (PMAY)ಯ ವಿಸ್ತರಣೆಯಾಗಿ ಆರಂಭಿಸಲಾಗಿದ್ದು, ಇದು 2.67 ಲಕ್ಷ ರೂ.ಗಳವರೆಗೆ ಸಬ್ಸಿಡಿ ಲಾಭ ಒದಗಿಸುತ್ತದೆ.

ನೀವು ವೇತನದಾರ ವ್ಯಕ್ತಿ ಆಥವಾ ಸಣ್ಣ ವ್ಯವಹಾರದ ಮಾಲೀಕರು ಏನೇ ಆಗಿದ್ದರೂ, ಅಪ್ನಾ ಘರ್‌ ಗೃಹ ಸಾಲ ಯೋಜನೆ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಮನೆಯ ಮಾಲೀಕರಾಗಲು ಅವಕಾಶ ಕಲ್ಪಿಸಬಲ್ಲದು. ಅಪ್ನಾ ಘರ್‌ ಎಲ್ಲಾ ಆದಾಯ ವರ್ಗದ ಜನರಿಗೂ ಅನ್ವಯಿಸುತ್ತದೆ ಮತ್ತು ಇತರ ಗೃಹ ಸಾಲ ಯೋಜನೆಗಳು ಹೊಂದಿರುವ ಇತಿಮಿತಿಗಳನ್ನು ಮೀರುವ ಸಲುವಾಗಿ ನಿರ್ಮಿಸಲಾಗಿದೆ. ನೀವು  ITRನಂತಹ ಔಪಚಾರಿಕ ಆದಾಯ ದಾಖಲೆ ಹೊಂದಿಲ್ಲದಿದ್ದರೂ, ನಮ್ಮ ಸ್ಥಳೀಯ ತಜ್ಷರು ನಿಮ್ಮ ಆದಾಯವನ್ನು ವಿಶ್ಲೇಷಿಸಲು ನಿಮ್ಮೊಂದಿಗೆ ಸಮಯ ಕಳೆದು ನಿಮ್ಮ ವ್ಯವಹಾರದ ಕುರಿತು ಅರಿಯುತ್ತಾರೆ. ನಿಮಗೆ ಅನುಕೂಲಕರವಾದ ಸಾಲದ ಮೊತ್ತ ಮತ್ತು ಅವಧಿಯನ್ನು ನಿರ್ಧರಿಸಲು ನಿಮಗೆ ನೆರವಾಗಲು ಅವರು ತರಬೇತಿ ಪಡೆದಿರುತ್ತಾರೆ.

ಹೊಸ ಹಾಗೂ ಚಾಲ್ತಿಯಲ್ಲಿರುವ ಕೈಗೆಟಕುವ ಗೃಹ ಯೋಜನೆಗಳಿಗೆ ಅನ್ವಯವಾಗುವ GST ದರವೆಂದರೆ ಶೇಕಡಾ 1

ಕೈಗೆಟಕುವ ಗೃಹ ಯೋಜನೆಯನ್ನು ಹೀಗೆ ವ್ಯಾಖ್ಯಾನಿಸಲಾಗಿದೆ:

  • ಮಹಾನಗರಗಳಲ್ಲಿನ 60 ಚದರ ಮೀಟರ್‌ವರೆಗೆ ಕಾರ್ಪೆಟ್ ಪ್ರದೇಶವನ್ನು ಹೊಂದಿರುವ ಮನೆಗಳು (ದೆಹಲಿ-ಎನ್‌ಸಿಆರ್, ಕೋಲ್ಕತ್ತಾ, ಚೆನ್ನೈ, ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರು)
  • ಪಟ್ಟಣಗಳಿಗೆ ಮತ್ತು ಮೆಟ್ರೋ ಅಲ್ಲದ ನಗರಗಳಿಗೆ 90 ಚದರ ಮೀಟರ್‌ಗಳವರೆಗೆ ಕಾರ್ಪೆಟ್‌ ಪ್ರದೇಶ ಹೊಂದಿರುವ ಮನೆಗಳು
  • ಮಹಾನಗರರ ಹಾಗೂ ಮಹಾನಗರವಲ್ಲದ ಎರಡರಲ್ಲೂ 45 ಲಕ್ಷ ರೂ.ಗಳವರೆಗೆ ಒಟ್ಟು ಮೌಲ್ಯ ಹೊಂದಿರುವ ಮನೆಗಳು