ಸ್ಥೂಲನೋಟ-ಸ್ವಯಂ ಉದ್ಯೋಗಿಗಳಿಗೆ ಅಪ್ನಾ ಘರ್
ಅಪ್ನಾ ಘರ್ ಎಂಬುದು ನೀವು ಈವರೆಗೆ ನೋಡಿರುವ ಇತರ ಯಾವುದೇ ಗೃಹ ಸಾಲದಂತಲ್ಲ. ನೀವು ಸಣ್ಣ ಕಿರಾಣ ಅಂಗಡಿ ಅಥವಾ ಒಂದು ಫಾಸ್ಟ್‌ಫುಡ್ ಅಂಗಡಿ ನಡೆಸುತ್ತಿರಬಹುದು, ನೀವು ಓರ್ವ ವ್ಯಾಪಾರಿ ಅಥವಾ ಒಂದು ಕಂಪನನಿಯ ಮಾಲೀಕರಾಗಿರಬಹುದು, ಅಪ್ನಾ ಘರ್ ಅನ್ನು ನಿಮ್ಮ ನೆರವಿಗಾಗಿ ತಯಾರಿಸಲಾಗಿದೆ-ಅರ್ಜಿ ಸಲ್ಲಿಕೆ ಪ್ರಕ್ರಿಯೆಯಿಂದ ಅರ್ಹತೆಯ ಮಾನದಂಡಗಳಿಂದ ಮರುಪಾವತಿ ಆಯ್ಕೆಗಳವರೆಗೆ
ICICI HFCಯ ಅಪ್ನಾ ಘರ್ ನಿಮಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಗಳ (PMAY)ಅಡಿಯ ಗೃಹ ಸಾಲಗಳಿಗೆ 2.67 ಲಕ್ಷ ರೂ.ಗಳವರೆಗೆ ಸಬ್ಸಿಡಿ ಲಾಭ ಒದಗಿಸುತ್ತದೆ. ನಿಮ್ಮ ಕನಸು ನಿಮ್ಮನ್ನು ಗೇಟೆಡ್ ಸಮುದಾಯಗಳಿಂದ ಗ್ರಾಮಪಂಚಾಯಿತಿಗಳು ಹಾಗೂ ಅಧಿಕೃತ ಕಾಲೋನಿಗಳತ್ತ ಕೊಂಡೊಯ್ಯುವುದಾದರೆ, ನಾವು ನಿಮ್ಮನ್ನು ಬೆಂಬಲಿಸುತ್ತೇವೆ. ನಿಮಗೆ ITRನಂತಹ ಅಧಿಕೃತ ಆದಾಯ ದಾಖಲೆಗಳನ್ನು ಹೊಂದಿಸಲಾಗದಿದ್ದರೆ, ನಾವು ನಿಮ್ಮನ್ನು ಬೆಂಬಲಿಸುತ್ತೇವೆ. ನಿಮಗೆ ಈ ಹಿಂದೆ ಗೃಹ ಸಾಲ ಪಡೆಯಲು ಕಷ್ಟವಾಗಿದ್ದರೆ ಅಥವಾ ನಿಮಗೆ ಸಾಲ ದೊರೆಯಬಹುದು ಎಂದು ನೀವು ಎಂದಿಗೂ ನಿಜವಾಗಿಯೂ ನಂಬದಿದ್ದರೆ, ನಾವು ನಿಮ್ಮನ್ನು ಬೆಂಬಲಿಸುತ್ತೇವೆ!
ನಮ್ಮ ಪ್ರತಿ 135+ ಶಾಖೆಗಳಲ್ಲಿ, ನೀವು ನಿಮ್ಮ ಸಾಲ ಪಡೆಯುವ ಪ್ರಕ್ರಿಯೆ ಕುರಿತ ಮನೋಭಾವವನ್ನು ಬದಲಿಸುವ ಸ್ನೇಹಪರ ಹಾಗೂ ಸಹಾಯಹಸ್ತ ಚಾಚುವ ಸ್ಥಳೀಯ ತಜ್ಞರನ್ನು ಕಾಣುತ್ತೀರಿ..
ಸ್ವಯಂ ಉದ್ಯೋಗಿಗಳ ಅಪ್ನಾ ಘರ್ ಯೋಜನೆಯ ಪ್ರಮುಖ ಅಂಶಗಳು ಮತ್ತು ಲಾಭಗಳು
ಸುಲಭದ ಅರ್ಹತೆ
ನಮ್ಮ ಹೊಂದಾಣಿಕೆಯ ಅರ್ಹತಾ ಮಾನದಂಡಗಳು ಮತ್ತು ಮೂಲ ದಾಖಲೆಗಳ ಅಗತ್ಯತೆಗಳ ಕಾರಣದಿಂದ ಅಪ್ನಾ ಘರ್‌ನಲ್ಲಿ ಗೃಹ ಸಾಲ ಪಡೆಯುವುದು ತ್ವರಿತವಾಗುತ್ತದೆ. ನಿಮ್ಮ ಬಳಿ ITRನಂತಹ ಔಪಚಾರಿಕ ಆದಾಯ ದಾಖಲೆಯಿಲ್ಲದಿದ್ದಲ್ಲಿ ಕೂಡ, ಈ ಹಿಂದೆ ಸಾಲವನ್ನು ಮರುಪಾವತಿಸಿದ ಉತ್ತಮ ಇತಿಹಾಸ ಹೊಂದಿದ್ದರೆ, ನಮ್ಮ ಸ್ಥಳೀಯ ತಜ್ಞರು ನಿಮಗೆ ಅಗತ್ಯವಿರುವ ಬೆಂಬಲ ನೀಡುತ್ತಾರೆ.
ಸಲಹೆ: Tನಿಮ್ಮ ಅರ್ಹತೆಯನ್ನು ಹೆಚ್ಚಿಸಲು, ನೀವು ನಿಮ್ಮ ಸಂಗಾತಿ ಅಥವಾ ತಕ್ಷಣದ ಕುಟುಂಬ ಸದಸ್ಯರಂತಹ ಸಹ-ಅರ್ಜಿದಾರರನ್ನು ಕೂಡ ಸೇರಿಸಬಹುದು.
ಎಲ್ಲರಿಗೂ ಸೂರು
ಅಪ್ನಾ ಘರ್ ಆದಾಯ ವರ್ಗದ ಪರಿವೆಯಿಲ್ಲದೆ ಗೃಹ ಖರೀದಿದಾರರಿಗೆ ನೆರವಾಗುತ್ತದೆ. ನೀವು ವೇತನದಾರ ವ್ಯಕ್ತಿ, ಕಿರಾಣ ಅಂಗಡಿ ಮಾಲೀಕ, ಕ್ಷೌರಿಕ, ಗುಜರಿ ಅಂಗಡಿ ಮಾಲೀಕ, ಅಥವಾ ಕಳೆದ ಕೆಲ ವರ್ಷಗಳಿಂದ ನಡೆಸುತ್ತಿರುವ ಯಾವುದೇ ಸ್ವಂತ ವ್ಯವಹಾರ ಹೊಂದಿದ್ದಲ್ಲಿ, ಅಪ್ನಾ ಘರ್ ನಿಮಗೆ ಮನೆಯ ಮಾಲೀಕರಾಗುವ ಅವಕಾಶ ಒದಗಿಸಬಲ್ಲದು.
ತ್ವರಿತ ಸಾಲ ವಿತರಣೆ
ನಮ್ಮ 135+ ICICI HFC ಶಾಖೆಗಳಲ್ಲಿ ನಿಮಗೆ ಮಾರ್ಗದರ್ಶನ ನೀಡಲು ಕಾನೂನು ಮತ್ತು ತಾಂತ್ರಿಕ ತಜ್ಞರ ತಂಡವನ್ನು ಹೊಂದಿರುವುದರಿಂದ ನಿಮ್ಮ ಸಾಲ ವಿತರಣೆಗೆ ಕೇವಲ 72 ಗಂಟೆಗಳಷ್ಟು ಸಣ್ಣ ಅವಧಿ ತೆಗೆದುಕೊಳ್ಳುತ್ತದೆ. ನಮ್ಮ ತಜ್ಞರು ಸ್ಥಳದಲ್ಲಿಯೇ ನಿಮ್ಮ ಅರ್ಜಿಯನ್ನು ಪರಿಶೀಲಿಸುತ್ತಾರೆ ಮತ್ತು ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಮುಖತಃ ಉತ್ತರಿಸುತ್ತಾರೆ, ಇದರಿಂದ ನೀವು ಪದೇ ಪದೇ ಭೇಟಿ ನೀಡುವ ಅಗತ್ಯವಿರುವುದಿಲ್ಲ.
ICICI HFCಗೆ ಬದಲಾಗಿ
ಕಳೆದ 2-3 ವರ್ಷಗಳಿಂದ ವಾರ್ಷಿಕ ಶೇಕಡಾ 11ಕ್ಕಿಂತ ಹೆಚ್ಚು ಬಡ್ಡಿದರದಲ್ಲಿ ಗೃಹ ಸಾಲವನ್ನು ಮರುಪಾವತಿಸುತ್ತಿದ್ದರೆ. ನಿಮ್ಮ ಮನೆ ಸಾಲದ ಬಡ್ಡಿ ನಮಗಿಂತ ಕನಿಷ್ಠ 50 ಬೇಸಿಸ್ ಪಾಯಿಂಟ್ ಹೆಚ್ಚಿದ್ದರೆ, ನಿಮ್ಮ EMI ಹೊರೆ ತಗ್ಗಿಸಲು, ಸ್ಪರ್ಧಾತ್ಮಕ ಬಡ್ಡಿದರಗಳನ್ನು ಆನಂದಿಸಲು ಮತ್ತು ನಮ್ಮ ತಜ್ಞರಿಂದ ಅವಿಭಜಿತ ಗಮನವನ್ನು ಪಡೆಯಲು ನಮ್ಮ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಸೌಲಭ್ಯದೊಂದಿಗೆ ICICI HFC ಗೆ ಬದಲಾಗಿ.
ಮನೆಗಳು ವಿವಿಧ ಹಂತಗಳಲ್ಲಿ
ನೀವು ಮಹಾನಗರದ ಹೃದಯಭಾಗದಲ್ಲಿ ಅಥವಾ ಅದರ ಹೊರಭಾಗದಲ್ಲಿ ವಾಸಿಸುತ್ತಿದ್ದರೂ, ನಿಮ್ಮ ಉದ್ಯೋಗದ ವಿವರ, ನಿಮ್ಮ ಆಯ್ಕೆಯ ಆಸ್ತಿ, ಮತ್ತು ಅದರ ಸ್ಥಳದ ಆಧಾರದ ಮೇಲೆ 20 ಲಕ್ಷ ರೂ. ವರೆಗೆ (ವೇತನದಾರರು) ಅಥವಾ 50 ಲಕ್ಷ ರೂ.ವರೆಗೆ (ಸ್ವಯಂ ಉದ್ಯೋಗಸ್ಥರು) ಗೃಹ ಸಾಲ ಯೋಜನೆ ಪಡೆಯಬಹುದು. ನೀವು ಸ್ವಯಂ ನಿರ್ಮಿತ ಆಸ್ತಿ ಅಥವಾ ನಿಮ್ಮ ಮಾಲೀಕತ್ವದ ಭೂಮಿಯ ಮೇಲೆ ಮನೆ ನಿರ್ಮಿಸಲು ಅಥವಾ ಅಧಿಕೃತ ಕಾಲೋನಿಗಳು ಮತ್ತು ಗ್ರಾಮಪಂಚಾಯಿತಿಯಲ್ಲಿ ವಸತಿ ಆಸ್ತಿಗೆ ಮರುಹಣಕಾಸಿನ ನೆರವಿಗಾಗಿ ಕೈಗೆಟಕುವ ಗೃಹ ನಿರ್ಮಾಣ ಯೋಜನೆಯ ಲಾಭ ಪಡೆಯಬಹುದು.
ಅಪ್ನಾ ಘರ್ ಯೋಜನೆಗೆ ಸ್ವಯಂ ಉದ್ಯೋಗಿಗಳಿಗೆ ಅಗತ್ಯವಿರುವ ಅರ್ಹತೆ
-
ರಾಷ್ಟ್ರೀಯತೆ
ಭಾರತೀಯ, ಭಾರತದಲ್ಲಿ ನೆಲೆಸಿರುವ
-
ವಯಸ್ಸಿನ ಮಿತಿ (ಪ್ರಾಥಮಿಕ ಅರ್ಜಿದಾರ)
30 ವರ್ಷದಿಂದ 70 ವರ್ಷಗಳವರೆಗೆ (ನೀವು 70 ವರ್ಷ ಪೂರೈಸುವುದರೊಳಗಿನ ಅವಧಿಯನ್ನು ಆಯ್ಕೆ ಮಾಡಿ. ಇದರಿಂದ ನೀವು ನಿಮ್ಮ ವ್ಯವಹಾರವವನ್ನು ಆರಾಮವಾಗಿ ನಿರ್ವಹಿಸುವ ಅವಧಿಯಲ್ಲಿಯೇ ಸಂಪೂರ್ಣ ಮರುಪಾವತಿ ಮಾಡುವುದು ಮತ್ತು ಅದನ್ನು ಹಸ್ತಾಂತರಿಸುವುದನ್ನು ಖಾತರಿಪಡಿಸುತ್ತದೆ)
-
ಅಪ್ನಾ ಘರ್ ಬಡ್ಡಿ ದರ
ಸ್ಪರ್ಧಾತ್ಮಕ ಬಡ್ಡಿಯ ಸಾಲ ಒದಗಿಸುವುದಕ್ಕೆ ನಾವು ಬದ್ಧರಾಗಿದ್ದೇವೆ; ನಮ್ಮ ಪ್ರಸ್ತುತ ಗೃಹ ಸಾಲದ ಬಡ್ಡಿ ದರಗಳೆಂದರೆ:
-
SEP - ವಾರ್ಷಿಕ ಶೇಕಡಾ 14ರ ನಂತರ
-
SENP – ವಾರ್ಷಿಕ ಶೇಕಡಾ 12.25 (30 ಲಕ್ಷದವರೆಗೆ)
-
AIP/ನಗದು ವೇತನ – ವಾರ್ಷಿಕ ಶೇಕಡಾ 14ರ ನಂತರ
-
ಸಹ-ಮಾಲೀಕತ್ವದ ಆಸ್ತಿ
ಮಹಿಳೆಯರನ್ನು ಸಹ-ಅರ್ಜಿದಾರರನ್ನಾಗಿ ಅರ್ಜಿ ಸಲ್ಲಿಸಲು ಉತ್ತೇಜಿಸುವ ಸಲುವಾಗಿ ICICI HFC ಉತ್ತಮ ಬಡ್ಡಿ ದರವನ್ನು ಒದಗಿಸುತ್ತದೆ.ನಿಮ್ಮ ಗೃಹ ಸಾಲದಲ್ಲಿ ನಿಮ್ಮ ಪತ್ನಿ ಅಥವಾ ತಾಯಿಯನ್ನು ಸೇರಿಸಿದರೆ, ನಿಮಗೆ ಕಡಿಮೆ ಬಡ್ಡಿ ದರ ದೊರೆಯಬಹುದು, ಅವರು ಆದಾಯ ಗಳಿಸುತ್ತಿಲ್ಲವಾದರೂ ಕೂಡ.
ಸಹ-ಮಾಲೀಕತ್ವದ ಆಸ್ತಿ
-
ವಯಸ್ಸಿನ ಮಿತಿ
18ರಿಂದ 80 ವರ್ಷಗಳು
-
ನೀವು ಸಹ-ಅರ್ಜಿದಾರರನ್ನು ಏಕೆ ಸೇರಿಸಬೇಕು?
-
ನೀವು ನಿಮ್ಮ ಗೃಹ ಸಾಲದ ಅರ್ಹತೆಯನ್ನು ಹೆಚ್ಚಿಸಿಕೊಳ್ಳಬೇಕಿದ್ದಲ್ಲಿ, ನೀವು ಸಹ-ಅರ್ಜಿದಾರರನ್ನು ಸೇರಿಸಬಹುದು, ಅವರು ಸಂಪಾದಿಸುತ್ತಿಲ್ಲವಾದರೂ ಕೂಡ. ಇದು ನಿಮಗೆ ದೊಡ್ಡ ಮಟ್ಟದ ಗೃಹ ಸಾಲಕ್ಕೆ ಅರ್ಹರಾಗಲು ನೆರವಾಗಬಹುದು. ನಿಮ್ಮ ಸಹ-ಅರ್ಜಿದಾರರರು ನಿಮ್ಮ ಸಂಗಾತಿ ಅಥವಾ ತಕ್ಷಣದ ಕುಟುಂಬ ಸದಸ್ಯರಾಗಿರಬಹುದು..
-
ಮಹಿಳಾ ಸಹ-ಅರ್ಜಿದಾರರು ಗೃಹ ಸಾಲದ ಮೇಲೆ ಕಡಿಮೆ ಬಡ್ಡಿ ದರ ಪಡೆಯಬಹುದು
ICICI HFC ಇಂದ ಸಾಲ ಏಕೆ ಪಡೆಯಬೇಕು?
ಕೇವಲ ನಿಮಗಾಗಿ ತಯಾರಿಸಿದ ಸಾಲದ ಉತ್ಪನ್ನಗಳು
ಅಪ್ನಾ ಘರ್ ಇದುವರೆಗೆ ಸಾಲವನ್ನು ಪಡೆಯದ ಅಥವಾ ಸಾಲವನ್ನು ಮರುಪಾವತಿ ಮಾಡುವ ಉತ್ತಮ ಇತಿಹಾಸ ಹೊಂದಿರುವ ಆದರೆ ಔಪಚಾರಿಕ ದಾಖಲೆಗಳನ್ನು ಹೊಂದಿರದ ಜನರಿಗೆ ಮೊದಲ ರೀತಿಯ ಹೋಮ್ ಲೋನ್ ಆಗಿದೆ. ಅಪ್ನಾ ಘರ್ ನಂತಹ ಉತ್ಪನ್ನಗಳನ್ನು ನಾವು ಸುಲಭವಾದ ಅರ್ಹತೆಯ ಮಾನದಂಡಗಳೊಂದಿಗೆ ನಿರ್ಮಿಸುತ್ತೇವೆ ಏಕೆಂದರೆ ನಿಮ್ಮ ಸ್ವಂತ ಮನೆ ಎಂಬ ಕನಸಿನೊಂದಿಗೆ ನಾವಿದ್ದೇವೆ.
ತ್ವರಿತ ಹಾಗೂ ಸುಲಭ ಸಾಲದ ಪ್ರಕ್ರಿಯೆ
ನೀವು 72 ಗಂಟೆಗಳಲ್ಲಿ ಸಾಲ ಪಡೆಯಬಹುದು. ನಮ್ಮ 135+ ICICI HFC ಶಾಖೆಗಳಲ್ಲಿ ಕಾನೂನು ಮತ್ತು ತಾಂತ್ರಿಕ ತಜ್ಞರ ತಂಡವು ಹಾಜರಾಗಿದ್ದು, ಅವರು ನಿಮ್ಮ ಸಾಲದ ಅರ್ಜಿಯನ್ನು ದಾಖಲೆಗಳಿಗಾಗಿ ಪದೇ ಪದೇ ವಿನಂತಿಸದೆ ಸ್ಥಳದಲ್ಲೇ ಪರಿಶೀಲಿಸುತ್ತಾರೆ. ನಿಮ್ಮ ಸಾಲ ಪ್ರಕ್ರಿಯೆಯನ್ನು ಪ್ರಾರಂಭಿಸಲು ನೀವು ನಿಮ್ಮ ಹತ್ತಿರದ ICICI ಬ್ಯಾಂಕ್ ಶಾಖೆಗೆ ಹೋಗಬಹುದು.
ವಸತಿ ನಿರ್ಮಾಣವನ್ನು ಎಲ್ಲರಿಗೂ ಕೈಗೆಟಕುವ ಹಾಗೂ ನೈಜವಾಗಿಸುವುದು
ನಿಮ್ಮ ಹತ್ತಿರದ ICICI HFC ಗೆ ಭೇಟಿ ನೀಡುವ ಒಂದು ಪ್ರಮುಖ ಪ್ರಯೋಜನವೆಂದರೆ ವಿಶೇಷ ಕೊಡುಗೆಗಳು. ನಮ್ಮ ಆಂತರಿಕ ತಜ್ಞರು ಪ್ರತಿಯೊಂದು ಕೊಡುಗೆಗಳ ಪ್ರಯೋಜನಗಳ ಮೂಲಕ ನಿಮಗೆ ಮಾರ್ಗದರ್ಶನ ನೀಡುತ್ತಾರೆ, ಆದ್ದರಿಂದ ನಿಮಗೆ ನಿಜವಾಗಿಯೂ ಸಹಾಯ ಮಾಡುವಂತಹದನ್ನು ನೀವು ಕಾಣಬಹುದು. ಡೀಲ್ಸ್ ಆ ದಿ ಡೇ ಬಗ್ಗೆ ಅರಿಯಲು ಭೇಟಿ ನೀಡಿ
ನಿಮ್ಮ ಸ್ಥಳೀಯ ತಜ್ಞರನ್ನು ಭೇಟಿ ಮಾಡಿ
ನಿಮ್ಮ ಮನೆ ಖರೀದಿ ಪ್ರಯಾಣದ ಪ್ರತಿ ಹಂತದಲ್ಲೂ ನಮ್ಮ ಸ್ಥಳೀಯ ತಜ್ಞರು ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಅವರು ನಿಮ್ಮ ಭಾಷೆಯನ್ನು ಮಾತನಾಡುತ್ತಾರೆ ಮತ್ತು ನಿಮ್ಮ ಸ್ಥಳವನ್ನು ತಿಳಿದಿದ್ದಾರೆ. ನಿಮಗೆ ಅಗತ್ಯವಿರುವ ಹಣಕಾಸಿನ ನೆರವು ಪಡೆಯಲು ಅವರು ಬದ್ಧರಾಗಿದ್ದಾರೆ. ನಿಮಗೆ ಹತ್ತಿರವಿರುವ ಶಾಖೆಯನ್ನು ಹುಡುಕಿ ಮತ್ತು ಸ್ನೇಹಪರ ವ್ಯಕ್ತಿಯನ್ನು ಪರಿಚಯ ಮಾಡಿಕೊಳ್ಳಿ.
ವಿಸ್ತೃತ ಶ್ರೇಣಿಯ ಉತ್ಪನ್ನಗಳು
ನೀವು ನಮ್ಮಿಂದ ಸಾಲ ಪಡೆದಾಗ, ನೀವು ICICI HFC ಕುಟುಂಬದ ಭಾಗವಾಗುತ್ತೀರಿ. ICICI HFCಯ ಪ್ರಸ್ತುತ ಗ್ರಾಹಕರಾಗಿ, ನಿಮ್ಮ ಅರ್ಜಿಯನ್ನು ತ್ವರಿತವಾಗಿ ಪರಿಶೀಲಿಸಬಹುದು, ಏಕೆಂದರೆ ಅನೇಕ ಪರಿಶೀಲನೆಗಳನ್ನು ಈಗಾಗಲೇ ಮಾಡಲಾಗಿದೆ, ಮತ್ತು ದಾಖಲೆಗಳು ಈಗಾಗಲೇ ನಮ್ಮ ಸಿಸ್ಟಂನಲ್ಲಿವೆ. ನಿಮಗೆ ಇಂದು ಹೋಮ್ ಲೋನ್, ನಾಳೆ ಗೋಲ್ಡ್ ಲೋನ್ ಅಥವಾ ನಿಮ್ಮ ಉಳಿತಾಯವನ್ನು ಹೆಚ್ಚಿಸಲು ಎಫ್‌ಡಿ ಬೇಕಾದರೆ ಅದರಲ್ಲೂ ನಾವು ನಿಮಗೆ ಸಹಾಯ ಮಾಡಬಹುದು.
ಎಲ್ಲಿ ಅರ್ಜಿ ಸಲ್ಲಿಸಬೇಕು
ನೆರವಿಗಾಗಿ ನಮ್ಮ ಯಾವುದೇ ICICI HFC ಶಾಖೆಗೆ ಭೇಟಿ ನೀಡಿ. ನಮ್ಮ ನೆರೆಯ ತಜ್ಞರು ನಿಮಗೆ ತ್ವರಿತ ಹಾಗೂ ಸುಲಭ ಗೃಹ ಸಾಲ ಅರ್ಜಿ ಪ್ರಕ್ರಿಯೆಯಲ್ಲಿ ಹಾಗೂ 72 ಗಂಟೆಗಳಿಗೂ ಕಡಿಮೆ ಅವಧಿಯಲ್ಲಿ ನಿಮ್ಮ ಸಾಲ ವಿತರಣೆಗೆ ನೆರವು ನೀಡಬಹುದು.ನಿಮ್ಮ ಹತ್ತಿರದ ICICI HFC ಶಾಖೆಯನ್ನು ಸಂಪರ್ಕಿಸಿ. ನಿಮ್ಮ ಸಮೀಪದಲ್ಲಿ ICICI HFC ಶಾಖೆಯಿಲ್ಲದಿದ್ದರೆ, ನಿಮ್ಮ ಹತ್ತಿರದ ICICI HFC ಶಾಖೆಗೆ ಭೇಟಿ ನೀಡಿ ಮತ್ತು ನಿಮ್ಮ ಸಾಲದ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಆರಂಭಿಸಿ.
ನೀವು 1800 267 4455 ಸಂಖ್ಯೆಗೆ ಕೂಡ ಕರೆ ಮಾಡಬಹುದು.
ಅರ್ಜಿ ಸಲ್ಲಿಸುವುದು ಹೇಗೆ
- Tಅಗತ್ಯ ದಾಖಲೆಗಳೊಂದಿಗೆ ನಿಮ್ಮ ಅರ್ಜಿ ನಮೂನೆಯನ್ನು ಸಲ್ಲಿಸಲು 10 ನಿಮಿಷಗಳ ಸಮಯ ತೆಗೆದುಕೊಳ್ಳಿ
- KYC ಪರಿಶೀಲನೆಗಳನ್ನು ನಡೆಸಲು 3000 ರೂ.+GST @18% (ಮರುಪಾವತಿ ಮಾಡಲಾಗದು) ಲಾಗಿನ್ ಶುಲ್ಕ ಪಾವತಿಸಿ
- ನಿಮ್ಮ ಅಸ್ತಿತ್ವದಲ್ಲಿರುವ EMIಗಳು, ವಯಸ್ಸು, ಆದಾಯ ಮತ್ತು ಆಸ್ತಿಯನ್ನು ಅಧ್ಯಯನ ಮಾಡುವ ನಮ್ಮ ತಜ್ಞರ ತಂಡದಿಂದ ನಿಮ್ಮ ಸಾಲದ ಅರ್ಜಿಯನ್ನು ತ್ವರಿತವಾಗಿ ಪರಿಶೀಲನೆಗೊಳಪಡಿಸಿ.
- ಪ್ರತಿ ICICI HFC ಶಾಖೆಯಲ್ಲಿ ಇರುವ ತಜ್ಞರ ತಂಡದಿಂದ ಸಾಲದ ಮೊತ್ತದ ಅನುಮೋದನೆ ಹಾಗೂ ಮಂಜೂರಾತಿ ಪಡೆಯಿರಿ
- ಸಾಲದ ಮೊತ್ತದ ಶೇಕಡಾ 2ಕ್ಕೆ ಸಮನಾಗಿರುವ ಅಥವಾ 11,000 + GST @18%, ಯಾವುದೋ ಅಧಿಕವೋ ಆ ಪ್ರಕ್ರಿಯೆ ಶುಲ್ಕವನ್ನು ಪಾವತಿಸಿ
- ನಿಮ್ಮ ಆಸ್ತಿಯಲ್ಲಿನ ನಿರ್ಮಾಣದ ಹಂತವನ್ನು ಆಧರಿಸಿ ಅನುಮೋದಿತ ಸಾಲದ ಮೊತ್ತವನ್ನು ವಿತರಿಸಲಾಗುತ್ತದದೆ.
ನೀವು ಈಗಲೂ ಪರಿಪೂರ್ಣ ಮನೆಗೆ ಹುಡುಕುತ್ತಿದ್ದರೆ, ನಿಮ್ಮ ಬಜೆಟ್‌ಗೆ ಹೊಂದಿಕೆಯಾಗುವ ಮನೆಯನ್ನು ಹುಡುಕಲು ನೀವು ನಮ್ಮ ಈಸಿ-ಟು-ಯೂಸ್ ಆಸ್ತಿಯ ಶೋಧ ಪೋರ್ಟಲ್ ಬಳಸಬಹುದು.
PMAY ಸಬ್ಸಿಡಿ ಕ್ಯಾಲ್ಕುಲೇಟರ್
ನೀವು ಪ್ರಧಾನ ಮಂತ್ರಿ ಆವಾಸ್ ಯೋಜನೆ ಗೆ ಅರ್ಹರೇ ಮತ್ತು ಸಬ್ಸಿಡಿ ಕ್ಯಾಲ್ಕುಲೇಟರ್ ಇಂದ ಎಷ್ಟು ಸಬ್ಸಿಡಿ ಪಡೆಯಬಹುದು ಎಂಬುದನ್ನು ಕಂಡುಕೊಳ್ಳಿ
ನೀವು ಸರ್ಕಾರದಿಂದ ಯಾವುದೇ ವಸತಿ ಯೋಜನೆಯಡಿಯಲ್ಲಿ ಕೇಂದ್ರ ಸಹಾಯ ಅಥವಾ PMAY ಅಡಿಯಲ್ಲಿ ಯಾವುದೇ ಪ್ರಯೋಜನವನ್ನು ಪಡೆದಿದ್ದೀರಾ?
ಇದು ನಿಮ್ಮ ಮೊದಲ ಪಕ್ಕಾ ಮನೆಯೇ?
ಕುಟುಂಬದ ಒಟ್ಟು ವಾರ್ಷಿಕ ಆದಾಯವನ್ನು ನಮೂದಿಸಿ
Thirty Thousand
ಸಾಲದ ಮೊತ್ತ
Ten Lakhs
ಸಾಲದ ಅವಧಿಯನ್ನು ನಮೂದಿಸಿ
8 year's and 1 month
PMAY Subsidy Amount
0
ಸಬ್ಸಿಡಿ ವಿಭಾಗ
EWS/LIG
ಇಎಂಐನಲ್ಲಿ ನಿವ್ವಳ ಕಡಿತ
Net Reduction value
Fill Details Below
ಅಪ್ನಾ ಘರ್ ಯೋಜನೆಗೆ ಸ್ವಯಂ ಉದ್ಯೋಗಿಗಳಿಗೆ ಅಗತ್ಯವಿರುವ ದಾಖಲೆಗಳು
ಈ ದಾಖಲೆಗಳನ್ನು ಸಲ್ಲಿಸಿ ಮತ್ತು ಪದೇ ಪದೇ ಭೇಟಿ ನೀಡುವ ಅಗತ್ಯವಿಲ್ಲದೆ 72 ಗಂಟೆಗಳ ಸ್ವಲ್ಪ ಸಮಯದಲ್ಲೇ ನಿಮ್ಮ ಸಾಲದ ಮಂಜೂರಾತಿ ಪಡೆದುಕೊಳ್ಳಿ.
- ನೀವು ಸಹಿ ಹಾಕಿರುವ ಸಂಪೂರ್ಣ ಭರ್ತಿ ಮಾಡಿರುವ ಅರ್ಜಿ
- PAN ಕಾರ್ಡ್, ಮತಗುರುತಿನ ಚೀಟಿ, ಆಧಾರ್ ಇತ್ಯಾದಿಯಂತಹ ಗುರುತಿನ ಹಾಗೂ ವಸತಿ ದಾಖಲೆ (KYC)
- 2 ಆದಾಯ ರಿಟರ್ನ್ಸ್, ಇತ್ತೀಚಿನ ಎರಡು ವರ್ಷಗಳ P&L ಖಾತೆಗಳು ಮತ್ತು B/S (ವಿವರ ಗಳೊಂದಿಗೆ), ಆರು ತಿಂಗಳ ಬ್ಯಾಂಕ್ ಹೇಳಿಕೆ ಇತ್ಯಾದಿಯಂತಹ ಆದಾಯ ದಾಖಲೆಗಳು.
- ಆಸ್ತಿ ದಾಖಲೆಗಳು (ನೀವು ಆಸ್ತಿಯನ್ನು ಅಂತಿಮಗೊಳಿಸದಿದ್ದಲ್ಲಿ)
ಅಪ್ನಾ ಘರ್ ಯೋಜನೆಗೆ ಸ್ವಯಂ ಉದ್ಯೋಗಿಗಳಿಗೆ ಶುಲ್ಕ ಮತ್ತು ದರಗಳು
ನಾವು ನಮ್ಮ ಶುಲ್ಕಗಳು ಮತ್ತು ದರಗಳ ಕುರಿತು ಪಾರದರ್ಶಕವಾಗಿರಲು ಆದ್ಯತೆ ನಿಡುತ್ತೇವೆ.
ದರಗಳು | ದರಗಳು |
ಲಾಗಿನ್ ಶುಲ್ಕ ( KYC ಪರಿಶೀಲನೆ ಮತ್ತು ಇತರ ದಾಖಲೆಗಳು) | 3000 ರೂ. + 18% GST* |
ಪ್ರಕ್ರಿಯೆ/ಆಡಳಿತಾತ್ಮಕ ಶುಲ್ಕಗಳು (ಮಂಜೂರಾತಿ ಸಮಯದಲ್ಲಿ ವಿಧಿಸಲಾಗುತ್ತದೆ) | ಸಾಲದ ಮೊತ್ತದ ಶೇಕಡಾ 2ಕ್ಕೆ ಸಮನಾಗಿರುವ ಅಥವಾ 11,000 + GST @18%, ಯಾವುದೋ ಅಧಿಕವೋ ಆ ಪ್ರಕ್ರಿಯೆ ಶುಲ್ಕವನ್ನು ಪಾವತಿಸಿ |
ಪೂರ್ವಪಾವತಿ ಶುಲ್ಕಗಳು | ನೀವು ನಿಮ್ಮ ಗೃಹ ಸಾಲದ ಭಾಗ ಅಥವಾ ಎಲ್ಲವನ್ನೂ ಮರುಪಾವತಿ ಮಾಡಲು ಸಾಧ್ಯವಾದಲ್ಲಿ, ನೀವು ಎಲ್ಲವನ್ನು ಅಥವಾ ಭಾಗವನ್ನು ಇತ್ಯರ್ಥ ಮಾಡಿಕೊಳ್ಳಬಹುದು. ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮ ಗೃಹ ಸಾಲ, ನಿಮ್ಮ ಆಯ್ಕೆಯ ಅವಧಿ ಯಾವುದಾಗಿದ್ದರೂ*# |
* ಮೇಲೆ ಉಲ್ಲೇಖಿಸಿದ ಮೊತ್ತಗಳು ಮತ್ತು ಶೇಕಡಾವಾರುಗಳು ತೆರಿಗೆಗಳು ಮತ್ತು ಅದರ ಶಾಸನಬದ್ಧ ರಿಯಾಯ್ತಿಗಳಿಂದ ಹೊರತಾಗಿದ್ದು, ಅಂತಹ ಮೊತ್ತಗಳು ಇದ್ದಲ್ಲಿ ಅದು ಸಂಬಂಧಿಸಿದ ಹಣಕಾಸು ವರ್ಷದ ಅವಧಿಯ ಎಲ್ಲಾ ಪೂರ್ವ ಪಾವತಿಯ ಮೊತ್ತಗಳನ್ನು ಒಳಗೊಂಡಿರಲಿದೆ..
# ಪ್ರಸ್ತುತ ದರದ ಅನುಸಾರ ಅನ್ವಯವಾಗುವ #ಸರಕು ಮತ್ತು ಸೇವಾ ತೆರಿಗೆ (GST) ಮತ್ತು ಇತರ ಸರ್ಕಾರಿ ತೆರಿಗೆಗಳು, ವಿನಾಯ್ತಿಗಳು ಇತ್ಯಾದಿಗಳನ್ನು ಈ ದರಗಳ ನಂತರ ಮತ್ತು ಮೇಲೆ ವಿಧಿಸಲಾಗುತ್ತದೆ
ಉದ್ಘೋಷಣೆ:
- ಇಲ್ಲಿ ಮೇಲೆ ಸೂಚಿಸಿದಂತೆ, ದರಗಳು, ಶುಲ್ಕಗಳು ICICI ಹೋಂ ಫೈನಾನ್ಸ್ ಕಂಪನಿ ಏಕ ಮಾತ್ರ ವಿವೇಚನೆಯ ಅನುಸಾರ ಕಾಲಕಾಲಕ್ಕೆ ಬದಲಾವಣೆ/ಪರಿಷ್ಕರಣೆಗೆ ಲಭ್ಯವಾಗಿರುತ್ತವೆ.
- TICICI ಹೋಮ್ ಫೈನಾನ್ಸ್ ಮೇಲಿನ ಏರಿಳಿತದ ಬಡ್ಡಿ ದರವನ್ನು ICICI ಹೋಮ್ ಫೈನಾನ್ಸ್ ಪ್ರೈಮ್ ಲೆಂಡಿಂಗ್ ರೇಟ್ (IHPLR)ಗೆ ಸಂಪರ್ಕಿಸಲಾಗುತ್ತದೆ.
- ಈ ಲೆಕ್ಕಾಚಾರವನ್ನು ಮಾರ್ಗದರ್ಶನದ ಉದ್ದೇಶಕ್ಕೆ ಮಾತ್ರ ಬಳಸಬೇಕು, ಅದು ಒಂದು ಕೊಡುಗೆಯಲ್ಲ ಮತ್ತು ಅದರ ಫಲಿತಾಂಶ ಹಲವು ವಾಸ್ತವಾಂಶಗಳ ಬದಲಾವಣೆಗೆ ಕಾರಣವಾಗಬಹುದು.
FAQs
1. ಕೈಗೆಟಕುವ ದರದ ಗೃಹ ನಿರ್ಮಾಣ ಯೋಜನೆ ಎಂದರೇನು?
'2022ರ ವೇಳೆ ಪ್ರತಿಯೊಬ್ಬರಿಗೂ ಸೂರು' ಉದ್ದೇಶದೊಂದಿಗೆ ಭಾರತ ಸರ್ಕಾರ ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಅಡಿಯಲ್ಲಿ ಕಡಿಮೆ ಆದಾಯವುಳ್ಳ ಜನರಿಗೆ ಮನೆ ಖರೀದಿಸಲು ನೆರವಾಗುವ ಉದ್ದೇಶದಿಂದ ಕೈಗೆಟಕುವ ಅಥವಾ ಕಡಿಮೆ ದರದ ಗೃಹ ಯೋಜನೆಯನ್ನು ಆರಂಭಿಸಿದೆ.
ಕೈಗೆಟಕುವ ದರದ ಗೃಹ ಯೋಜನೆ, ನಗರ ಪ್ರದೇಶದಲ್ಲಿ ಮನೆಯ ಸ್ವಾಧೀನ/ನಿರ್ಮಾಣಕ್ಕೆ ಪಡೆದ ಗೃಹ ಸಾಲದ (ಮರುಖರೀದಿಯನ್ನು ಒಳಗೊಂಡಿದೆ) ಮೇಲೆ ಬಡ್ಡಿಯ ಸಬ್ಸಿಡಿಯನ್ನು ಒಳಗೊಂಡಿದೆ. ಸಬ್ಸಿಡಿ ಲಾಭ ಒಬ್ಬರ ಆದಾಯ ಮತ್ತು ಖರೀದಿಸಲಾಗುತ್ತಿರುವ ಮನೆ/ಆಸ್ತಿಯ ಗಾತ್ರವನ್ನು ಅವಲಂಬಿಸಿರುತ್ತದೆ.
2. ಕೈಗೆಟಕುವ ಗೃಹಸಾಲವನ್ನು ಮರುಪಾವತಿಸಲು ಒದಗಿಸುವ ಗರಿಷ್ಠ ಸಮಯವೆಷ್ಟು?
ICICI ಹೋಂ ಫೈನಾನ್ಸ್‌ನಲ್ಲಿ, ನಾವು ವಿಭಿನ್ನ ಜನರು ವಿಭಿನ್ನ ಹಣಕಾಸಿನ ಅಗತ್ಯಗಳು ಹಾಗೂ ಲಾಭಗಳನ್ನು ಹೊಂದಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತೇವೆ. ICICI HFC ಅಪ್ನಾ ಘರ್ ಗೃಹ ಸಾಲದೊಂದಿಗೆ, ನೀವು 20 ವರ್ಷಗಳ ಅವಧಿಯನ್ನೂ ಮೀರಿದ ದೀರ್ಘ ಮರುಪಾವತಿಗೆ ಅರ್ಜಿ ಸಲ್ಲಿಸಬಹುದು ಇದು ನಿಮ್ಮ EMI ಹೊರೆಯನ್ನು ಕಡಿಮೆ ಮಾಡುತ್ತದೆ.ಆದಾಗ್ಯೂ, ಸಬ್ಸಿಡಿ ಲಾಭ 20 ವರ್ಷಷಗಳ ಗರಿಷ್ಠ ಅವಧಿಗೆ ನಿರ್ಬಂಧಿತವಾಗಿರುತ್ತದೆ.
3. ಕೈಗೆಟಕುವ ಗೃಹ ಸಾಲಕ್ಕೆ ಕನಿಷ್ಠ ಡೌನ್‌ಪೇಮೆಂಟ್ ಎಷ್ಟು?
ಕೈಗೆಟಕುವ ಗೃಹ ಸಾಲಕ್ಕೆ ಕಡ್ಡಾಯ ಕನಿಷ್ಠ ಡೌನ್‌ಪೇಮೆಂಟ್ ಎಂದರೆ ಮನೆ/ಆಸ್ತಿಯ ಒಟ್ಟು ದರದ ಶೇಕಡಾ 20ರಷ್ಟು.
ಆದ್ದರಿಂದ, ನೀವು 30 ಲಕ್ಷ ರೂ. ಮೌಲ್ಯದ ಮನೆ ಖರೀದಿಸಲು ಹಾಗೂ ಅದಕ್ಕಾಗಿ ICICI HFC ಅಪ್ನಾ ಘರ್ ಗೃಹ ಸಾಲದಲ್ಲಿ ವಿಶೇಷವಾಗಿ ಕೈಗೆಟಕುವ ಗೃಹ ನಿರ್ಮಾಣ ಯೋಜನೆಯಡಿ ವಿನ್ಯಾಸಗೊಳಿಸಲಾದ ಸಾಲ ಪಡೆಯಲು ಬಯಸಿದಲ್ಲಿ, ನೀವು ಕನಿಷ್ಠ 6 ಲಕ್ಷ ರೂ. ಅಂದರೆ, ಮನೆಯ ಒಟ್ಟು ದರದ ಶೇಕಡಾ 20ರಷ್ಟು ಡೌನ್‌ಪೇಮೆಂಟ್ ಪಾವತಿಸಬೇಕಾಗುತ್ತದೆ.
4. "ಕೈಗೆಟಕುವ" ಗೃಹ ಸಾಲದಲ್ಲಿ ಏನೇನು ಇರುತ್ತದೆ?
ICICI HFC ಅಪ್ನಾ ಘರ್‌ನಂತಹ ಕೈಗೆಟಕುವ ಗೃಹ ಸಾಲವನ್ನು ವಾಸಿಸುವ ಮನೆಯ ಖರೀದಿ/ ನಿರ್ಮಾಣ/ಸುಧಾರಣೆಗಾಗಿ ಖರೀದಿಸಬಹುದು. ಸುಧಾರಣೆಗಳು ಒಂದು ಹೆಚ್ಚುವರಿ ಮಹಡಿಯ ಸೇರ್ಪಡೆ ಅಥವಾ ನಿಮ್ಮ ಅಸ್ತಿತ್ವದಲ್ಲಿರುವ ಮನೆಗೆ ಒಂದು ಶೌಚಾಲಯ ಸೇರಿಸುವಂತಹ ಸೇರಿಸುವಿಕೆಯನ್ನು ಒಳಗೊಂಡಿರಬಹುದು. ಮನೆ/ಆಸ್ತಿಯ ಮರುಖರೀದಿಗೆ ಕೂಡ ಕೈಗೆಟಕುವ ಗೃಹ ಸಾಲದಡಿ ಅನುಮತಿ ನೀಡಬಹುದು.