ಸ್ಥೂಲನೋಟ-ಚಿನ್ನದ ಸಾಲ

ನೀವೆಷ್ಟೇ ಯೋಜನೆ ರೂಪಿಸಿದ್ದದರೂ, ಮಾರ್ಗದಲ್ಲಿ ಅನಿರೀಕ್ಷಿತ ವೆಚ್ಚಗಳು ಇರುತ್ತವೆ. ಅದು ವೈದ್ಯಕೀಯ ತುರ್ತು ಅಥವಾ ನಿಮ್ಮ ವ್ಯವಹಾರಕ್ಕೆ ತ್ವರಿತ ನಗದು ಅಗತ್ಯತೆಯಿರಬಹುದು.ನಮ್ಮ ಚಿನ್ನದ ಸಾಲವು ಅಲ್ಪಾವಧಿಯ ನಗದು ಅಗತ್ಯಗಳನ್ನು ನಿರ್ವಹಿಸಲು ಒಂದು ಅನುಕೂಲಕರ ಮಾರ್ಗವಾಗಿದೆ ಏಕೆಂದರೆ ಇದು ನಿಮ್ಮ ಸಾಲದ ಅವಧಿಯುದ್ದಕ್ಕೂ ಒಂದೇ ರೀತಿ ಇರುವ ಜಂಪಿಂಗ್ ಅಲ್ಲದ ಬಡ್ಡಿದರಗಳೊಂದಿಗೆ ಬರುತ್ತದೆ.

ಇದು ಸರಳ, ತ್ವರಿತ ಮತ್ತು ಸುರಕ್ಷಿತ.ನಿಮ್ಮ ಸನಿಹದ ICICI HFC ಶಾಖೆಗೆ ಭೇಟಿ ನೀಡಿ ಮತ್ತು ನಿಮಗೆ ಬೇಕಾದ ಹಣವನ್ನು ಬಹುತೇಕ ತಕ್ಷಣ ಪಡೆಯಿರಿ.

ಪ್ರಮುಖ ಅಂಶಗಳು ಮತ್ತು ಲಾಭಗಳು-ಚಿನ್ನದ ಸಾಲ

ತ್ವರಿತ ಸಾಲ ವಿತರಣೆ

ನಿಮ್ಮ ICICI HFC ಸನಿಹದ ಶಾಖೆಗೆ ಒಂದು ಭೇಟಿಯಷ್ಟೇ ಬೇಕಿರುವುದು. ನಮ್ಮ ICICI HFC ಶಾಖೆಗಳಲ್ಲಿ ನಾವು ನಿಮ್ಮ ಉಪಸ್ಥಿತಿಯಲ್ಲಿ ಚಿನ್ನದ ಮೌಲ್ಯವನ್ನು ಮೌಲ್ಯಮಾಪನ ಮಾಡುವ ಚಿನ್ನದ ಮೌಲ್ಯಮಾಪಕರನ್ನು ಹೊಂದಿರುವುದರಿಂದ ನೀವು ಕೇವಲ ಒಂದೆರಡು ಗಂಟೆಗಳಲ್ಲಿ ಚಿನ್ನದ ಸಾಲವನ್ನು ಪಡೆಯಬಹುದು. ಅದೇ ಶಾಖೆಯಲ್ಲಿರುವ ನಮ್ಮ ಮಾರಾಟ ತಂಡವು ನಿಮ್ಮ ಅರ್ಜಿಯನ್ನು ಸ್ಥಳದಲ್ಲೇ ಪರಿಶೀಲಿಸುತ್ತದೆ ಮತ್ತು ಸಾಲವನ್ನು ವಿತರಿಸುತ್ತದೆ.

ಏರಿಕೆಯಾಗದ ಬಡ್ಡಿ ದರಗಳು

ICICI HFC ಚಿನ್ನದ ಸಾಲದೊಂದಿಗೆ, ನಿಮ್ಮ ಸಾಲದ ಅವಧಿಯಲ್ಲಿ ನಿಮ್ಮ ಬಡ್ಡಿದರವು ಯಾವುದೇ ಹಂತದಲ್ಲಿ ಬದಲಾಗುವುದಿಲ್ಲ, ಬಡ್ಡಿದರವು ವರ್ಷಕ್ಕೆ ಶೇಕಡಾ 12 ರಿಂದ 16ವರೆಗೆ ಇರುತ್ತದೆ.

ಅನುಕೂಲಕರ ಮರುಪಾವತಿ ಆಯ್ಕೆಗಳು

  • ಸಾಲದ ಅವಧಿಯಲ್ಲಿ ಯಾವುದೇ ಸಮಯದಲ್ಲಿ ಪೂರ್ವ-ಪಾವತಿ ಮಾಡಬಹುದು
  • ಅವಧಿಯ ಅಂತ್ಯದಲ್ಲಿ ಪೂರ್ಣ ಪಾವತಿ ಮಾಡಿರಿ(ಬುಲೆಟ್‌ ಮರುಪಾವತಿ)

ಹೊಂದಾಣಿಕೆಯ ಸಾಲದ ಮೊತ್ತ

ನಮ್ಮ ಚಿನ್ನದ ಸಾಲ 10,000 ರೂ.ಗಳಿಂದ ಆರಂಭಗೊಳ್ಳುತ್ತದೆ ಮತ್ತು 10 ಲಕ್ಷ ರೂ.ಗಳವರೆಗೆ ಹೋಗುತ್ತದೆ. ಈಗಾಗಲೇ ನೀವು ಮಾಲೀಕತ್ವ ಹೊಂದಿರುವ ಆಸ್ತಿಯಿಂದ ನಿಮ್ಮ ತುರ್ತು ಅಗತ್ಯತೆಗಳನ್ನು ಪೂರೈಸಿಕೊಳ್ಳಬಹುದು.

ನಿಮ್ಮ ಚಿನ್ನದ ಸುರಕ್ಷತೆ

ನಿಮ್ಮ ಸನಿಹದ ICICI HFC ಶಾಖೆಯಲ್ಲಿ ನೀವು ಜಮೆ ಮಾಡುವ ಚಿನ್ನವನ್ನು ನಿಮ್ಮ ಉಪಸ್ಥಿತಿಯಲ್ಲಿಯೇ ಸೀಲ್‌ ಮಾಡಲಾಗುತ್ತದೆ. ನಿಮ್ಮ ಚಿನ್ನವು ಯಾವಾಗಲೂ ಮೇಲ್ವಿಚಾರಣೆಯಲ್ಲಿದೆ ಮತ್ತು ಎಲ್ಲ ಸಮಯದಲ್ಲೂ ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಅದನ್ನು ಎಚ್ಚರಿಕೆಯಿಂದ ಉನ್ನತ ದರ್ಜೆಯ ವೈಶಿಷ್ಟ್ಯದ ವಾಲ್ಟ್ ಗೆ ಸೇರಿಸಲಾಗುತ್ತದೆ.

ICICI HFC ಇಂದ ಸಾಲ ಏಕೆ ಪಡೆಯಬೇಕು?

ನಮ್ಮ ಶಾಖೆಗಳಲ್ಲಿ ಅನೇಕ ಚಿನ್ನದ ಮೌಲ್ಯಮಾಪನ ತಜ್ಞರನ್ನು ಹೊಂದಿರುವ ಮೂಲಕ, ಕೆಲವೇ ಗಂಟೆಗಳಲ್ಲಿ ನೀವು ಸಾಲ ಪಡೆಯುವುದನ್ನು ನಾವು ಖಚಿತಪಡಿಸುತ್ತೇವೆ.

ನೀವು ICICI HFC ಸಾಲ ಉತ್ಪನ್ನವನ್ನು ಆಯ್ಕೆ ಮಾಡಿದಾಗ, ನೀವು ICICI HFC ಕುಟುಂಬದ ಭಾಗವಾಗುತ್ತೀರಿ. ICICI HFCಯ ಪ್ರಸ್ತುತ ಗ್ರಾಹಕರಾಗಿ, ನಿಮ್ಮ ಅರ್ಜಿಯನ್ನು ವೇಗವಾಗಿ ಪರಿಶೀಲಿಸಲಾಗುತ್ತದೆ, ಏಕೆಂದರೆ ಅನೇಕ ತನಿಖೆಗಳನ್ನು ಈಗಾಗಲೇ ಮಾಡಲಾಗಿದೆ. ನಿಮಗೆ ಈಗ ಗೋಲ್ಡ್ ಲೋನ್-ನ ಅವಶ್ಯಕತೆ ಇರಬಹುದು, ಆದರೆ ಭವಿಷ್ಯದಲ್ಲಿ, ನಿಮ್ಮ ಸ್ವಂತ ಮನೆಯಲ್ಲಿ ಹೂಡಿಕೆ ಮಾಡಲು ಅಥವಾ ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ಅಥವಾ ನಿಮ್ಮ ಉಳಿತಾಯವನ್ನು ಹೆಚ್ಚಿಸಲು ನೀವು ಸಾಲದ ಲಾಭವನ್ನು ಪಡೆಯಬಹುದು.

ನಿಮ್ಮ ಹತ್ತಿರದ ICICI HFC ಗೆ ಭೇಟಿ ನೀಡುವ ಒಂದು ಪ್ರಮುಖ ಪ್ರಯೋಜನವೆಂದರೆ ವಿಶೇಷ ಕೊಡುಗೆಗಳು. ನಮ್ಮ ಆಂತರಿಕ ತಜ್ಞರು ಪ್ರತಿಯೊಂದು ಕೊಡುಗೆಗಳ ಪ್ರಯೋಜನಗಳ ಮೂಲಕ ನಿಮಗೆ ಮಾರ್ಗದರ್ಶನ ನೀಡುತ್ತಾರೆ, ಆದ್ದರಿಂದ ನಿಮಗೆ ನಿಜವಾಗಿಯೂ ಸಹಾಯ ಮಾಡುವಂತಹದನ್ನು ನೀವು ಕಾಣಬಹುದು.

ಅರ್ಹತೆ- ಚಿನ್ನದ ಸಾಲ

ICICI HFC ಇಂದ ಚಿನ್ನದ ಸಾಲಕ್ಕೆ ಅರ್ಹರಾಗಲು ನೀವು ಕೆಲವು ಮೂಲ ಮಾನದಂಡಗಳನ್ನು ಹೊಂದಿರಬೇಕು.

  • ನೀವು ಭಾರತೀಯ ನಿವಾಸಿಯಾಗಿರಬೇಕು
  • ನೀವು ಕನಿಷ್ಠ 25 ವರ್ಷ ವಯಸ್ಸಿನವರಾಗಿರಬೇಕು
  • ನಿಮ್ಮ ಸಾಲದ ಅವಧಿ ಮುಗಿಯುವ ಅವಧಿಯಲ್ಲಿ ನಿಮ್ಮ ವಯಸ್ಸು 70 ವರ್ಷ ಮೀರಿರಬಾರದು, ಇದರರಿಂದ ನೀವು ನಿಮ್ಮ ಬದುಕಿನ ಸುವರ್ಣ ಅವಧಿಯಲ್ಲಿ EMIಗಳನ್ನು ಪಾವತಿಸದೆ ಆನಂದಿಸಬಹುದು.
  • ನೀವು ಜಮೆ ಮಾಡುತ್ತಿರುವ ಚಿನ್ನದ ಆಭರಣದ ಮಾಲೀಕರಾಗಿರಬೇಕು.
  • ನೀವು ಏಕ ವ್ಯಕ್ತಿಯಾಗಿರಬೇಕು (ವೈಯಕ್ತಿಕ ವ್ಯಕ್ತಿಯಾಗಿಲ್ಲದವರಿಗೆ ನಮ್ಮ ಚಿನ್ನದ ಸಾಲ ಲಭ್ಯವಿರುವುದಿಲ್ಲ)

ಅರ್ಜಿ ಸಲ್ಲಿಸುವುದು ಹೇಗೆ

ಚಿನ್ನದ ಸಾಲಕ್ಕೆ ಅರ್ಜಿ ಸಲ್ಲಿಸಲು ಮತ್ತು ಅದಕ್ಕೆ ಅನುಮೋದನೆ ಪಡೆಯಲು ಕೇವಲ ಕೆಲವು ಗಂಟೆಗಳು ಮಾತ್ರ ತೆಗೆದುಕೊಳ್ಳುತ್ತದೆ.ನೀವು ಏನು ಮಾಡಬೇಕು ಎಂಬುದರ ವಿವಿರ ಇಲ್ಲಿದೆ.

ನಿಮ್ಮ ಸನಿಹದ ICICI HFC ಶಾಖೆ ಗೆ ಭೇಟಿ ನೀಡಿ ಮತ್ತು ಚಿನ್ನವನ್ನು ಜಮೆ ಮಾಡಿ

ಪ್ರತಿ ಶಾಖೆಯು ವೃತ್ತಿಪರ ಮೌಲ್ಯಮಾಪಕರನ್ನು ಹೊಂದಿದ್ದು, ಅವರು ನಿಮ್ಮ ಚಿನ್ನದ ಮೌಲ್ಯಮಾಪನ ಮಾಡುತ್ತಾರೆ ಮತ್ತು ಆ ದಿನದ ಚಿನ್ನದ ಬೆಲೆಯನ್ನು ಆಧರಿಸಿ ನಿಮ್ಮ ಚಿನ್ನದ ಮೌಲ್ಯ ಎಷ್ಟು ಎಂದು ತಿಳಿಸುತ್ತಾರೆ.

ಚಿನ್ನದ ಸಾಲಕ್ಕೆ ಅಗತ್ಯವಿರುವ ದಾಖಲೆಗಳು

ICICI HFCಯಲ್ಲಿ ಚಿನ್ನದ ಸಾಲಕ್ಕೆ ಅರ್ಜಿ ಸಲ್ಲಿಸಲು, ನಿಮ್ಮ ಸನಿಹದ ಶಾಖೆಗೆ ಈ ದಾಖಲೆಗಳನ್ನು ಕೊಂಡೊಯ್ಯುವುದನ್ನು ಖಾತರಿಪಡಿಸಿಕೊಳ್ಳಿ:

  • KYC ದಾಖಲೆಗಳು (ಗುರುತಿನ ದಾಖಲೆ ಮತ್ತು ವಿಳಾಸದ ದಾಖಲೆ)
  • PAN/ಫಾರ್ಮ್60
  • ಭಾವಚಿತ್ರ
  • ರದ್ದುಗೊಳಿಸಿದ ಖಾಲಿ ಚೆಕ್‌

ಹಕ್ಕುತ್ಯಾಗ:

  • ಇಲ್ಲಿ ಮೇಲೆ ಸೂಚಿಸಿದಂತೆ, ದರಗಳು, ಶುಲ್ಕಗಳು ICICI ಹೋಂ ಫೈನಾನ್ಸ್‌ ನ ಏಕ ಮಾತ್ರ ವಿವೇಚನೆಯ ಅನುಸಾರ ಕಾಲಕಾಲಕ್ಕೆ ಬದಲಾವಣೆ/ಪರಿಷ್ಕರಣೆಗೆ ಲಭ್ಯವಾಗಿರುತ್ತವೆ.

ICICI HFC ಚಿನ್ನದ ಸಾಲದ ಲಾಭಗಳು

 

ಚಿನ್ನದ ಸಾಲದ FAQs

ICICI HFCಯಲ್ಲಿ ಸಾಲ ಪಡೆಯುವ ಪ್ರಮುಖ ಲಾಭವೆಂದರೆ ಅದು ನಿಮಗೆ ಏರಿಕೆಯಿಲ್ಲದ ಬಡ್ಡಿ ದರ ಒದಗಿಸುತ್ತದೆ.

ಚಿನ್ನದ ಸಾಲ ಪಡೆಯುವ ಪ್ರಮುಖ ಲಾಭವೆಂದರೆ ಅದು ನಿಮಗೆ ಏರಿಕೆಯಾಗುವ ಬಡ್ಡಿದರ ನೀಡುವುದಿಲ್ಲ

ನಿಮ್ಮ ಅವಧಿ ಮುಗಿಯುವ ಮೊದಲು ನಿಮ್ಮ ಸಾಲವನ್ನು ನೀವು ಮರುಪಾವತಿಸಿದರೆ, ನಿಮ್ಮ ಚಿನ್ನವನ್ನು ತಕ್ಷಣವೇ ನಿಮಗೆ ಹಿಂದಿರುಗಿಸಲಾಗುತ್ತದೆ ಮತ್ತು ನೀವು ಹೆಚ್ಚಿನ ಬಡ್ಡಿ ಪಾವತಿ ಉಳಿಸಬಹುದು.

ನಿಮ್ಮ ಚಿನ್ನವು ಯಾವಾಗಲೂ ಮೇಲ್ವಿಚಾರಣೆಯಲ್ಲಿದೆ ಮತ್ತು ಎಲ್ಲ ಸಮಯದಲ್ಲೂ ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಉನ್ನತ ದರ್ಜೆಯ ವೈಶಿಷ್ಟ್ಯಗಳ ವಾಲ್ಟ್ ಬಳಸಲಾಗುತ್ತದೆ.

  • ಕನಿಷ್ಠ ಬಡ್ಡಿ ಶೇಕಡಾ 13
  • ಗರಿಷ್ಠ ಬಡ್ಡಿ ಶೇಕಡಾ 17
  • ಪ್ರಕ್ರಿಯೆಯ ಶುಲ್ಕ ಬಡ್ಡಿ ಮೊತ್ತದ ಅನುಸಾರ ಶೇಕಡಾ 0.25ರಿಂದ ಶೇಕಡಾ 1ರಷ್ಟಿದೆ

ICICI ಹೋಂ ಫೈನಾನ್ಸ್‌ನ ಪ್ರತಿ ಶಾಖೆಯಲ್ಲಿ, ನಿಮ್ಮ ಚಿನ್ನದ ಶುದ್ಧತೆಯನ್ನು ಅಳೆಯುವ ಓರ್ವ ವೃತ್ತಿಪರ ಮೌಲ್ಯಮಾಪಕರಿರುತ್ತಾರೆ. ಈ ಮೌಲ್ಯವನ್ನು ಅಂದಿನ ಚಿನ್ನದ ಪ್ರತಿ-ಗ್ರಾಂ ಬೆಲೆಯೊಂದಿಗೆ ನಿಮ್ಮ ಚಿನ್ನದ ಸಾಲದ ಮೊತ್ತವನ್ನು ಲೆಕ್ಕ ಹಾಕಲಾಗುತ್ತದೆ.

ನೀವು ಆನ್‌ಲೈನ್‌ ನಗದು ವರ್ಗಾವಣೆ ಮೂಲಕ ನೀವು ಚಿನ್ನದ ಸಾಲವನ್ನು ಮರುಪಾವತಿ ಮಾಡಬಹುದು. ನಿಮ್ಮ ಸಾಲದ ಮೊತ್ತವನ್ನು ಅರಿತುಕೊಂಡ ತಕ್ಷಣ ನಿಮ್ಮ ಚಿನ್ನವನ್ನು ಬಿಡುಗಡೆ ಮಾಡಲಾಗುತ್ತದೆ, ಆದ್ದರಿಂದ ನಿಮ್ಮ ಅವಧಿ ಮುಗಿಯುವ ಮೊದಲು ನಿಮ್ಮ ಸಾಲವನ್ನು ನೀವು ಮರುಪಾವತಿಸಲು ಸಾಧ್ಯವಾದರೆ ನೀವು ಬಡ್ಡಿ ಪಾವತಿಗಳಲ್ಲಿ ಉಳಿಸಬಹುದು.

ನಿಮ್ಮ ಸಾಲದ ಮರುಪಾವತಿಯಲ್ಲಿ ಯಾವುದೇ ವಿಳಂಬವಾದರೆ ವರ್ಷಕ್ಕೆ ಶೇಕಡಾ 6ರ ದಂಡದ ಬಡ್ಡಿ ಪಾವತಿಸಬೇಕಾಗುತ್ತದೆ.

ಹೌದು, ನೀವು ನಿಮ್ಮ ಸಾಲವನ್ನು ಯಾವುದೇ ಪೂರ್ವ ಪಾವತಿಯ ದರಗಳಿಲ್ಲದೆ ಪೂರ್ವ ಪಾವತಿ ಮಾಡಬಹುದು.

ಇಲ್ಲ

ನಾವು ನಿಮ್ಮ ಚಿನ್ನವನ್ನು ಸಂಗ್ರಹಿಸುವ ವಾಲ್ಟ್‌ನಲ್ಲಿ ಹಲವು ಉನ್ನತ ದರ್ಜೆಯ ಫೀಚರ್‌ಗಳನ್ನು ಹೊಂದಿದ್ದು ಅದು ನಿಮ್ಮ ಚಿನ್ನವನ್ನು ಯಾವಾಗಲೂ ಕಣ್ಗಾವಲಿನಲ್ಲಿ ಇರುವುದನ್ನು ಖಚಿತಪಡಿಸುತ್ತದೆ.

ಇಲ್ಲ

ನೀವು ಕಡಿಮೆ ಎಂದರೆ 10,000 ರೂ. ಚಿನ್ನದ ಸಾಲ ಪಡೆಯಬಹುದು. ಚಿನ್ನದ ಸಾಲವು ವೈಯಕ್ತಿಕ ಅಥವಾ ವ್ಯವಹಾರಕ್ಕೆ ಸಂಬಂಧಿಸಿದ ಹಣಕಾಸಿನ ತುರ್ತುಸ್ಥಿತಿಗಳಿಗೆ ಸಂಬಂಧಿಸಿದ ಯಾವುದೇ ಒತ್ತಡವನ್ನು ಪರಿಹರಿಸಲು ತ್ವರಿತ ಮತ್ತು ಸುಲಭವಾದ ಮಾರ್ಗವಾಗಿದೆ. ಕೆಲವೇ ಗಂಟೆಗಳಲ್ಲಿ, ನಿಮಗೆ ಅಗತ್ಯವಿರುವ ಹಣವನ್ನು ನೀವು ವ್ಯವಸ್ಥೆ ಮಾಡಬಹುದು.